ಜಮ್ಮುಕಾಶ್ಮೀರ: ರಾಂಬನ್‌ನಲ್ಲಿ ಭೀಕರ ಅಪಘಾತ: ಸೇನಾ ವಾಹನ ಪ್ರಪಾತಕ್ಕೆ ಉರುಳಿ ಮೂವರು ಸೈನಿಕರ ದುರ್ಮರಣ!

  • 04 May 2025 08:34:22 PM

ಜಮ್ಮು ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಒಂದು ಭೀಕರ ಅಪಘಾತ ಸಂಭವಿಸಿದೆ.

 

ಸೇನಾ ವಾಹನವೊಂದು 700 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದು ಮೂವರು ಸೈನಿಕರು ಮೃತಪಟ್ಟಿದ್ದಾರೆ.

 

ಮೃತರನ್ನು ಅಮಿತ್ ಕುಮಾರ್, ಸುಜೀತ್ ಕುಮಾರ್ ಮತ್ತು ಮನ್ ಬಹದ್ದೂರ್ ಎಂದು ಗುರುತಿಸಲಾಗಿದೆ.

 

  ಬಿದ್ದ ರಭಸಕ್ಕೆ ವಾಹನ ಸಂಪೂರ್ಣ ಛಿದ್ರಗೊಂಡಿದ್ದು, ಸೈನಿಕರ ಶವಗಳು ಹಾಗೂ ದಾಖಲೆ ಪತ್ರಗಳು ಪ್ರದೇಶದಾದ್ಯಂತ ಹರಡಿದ ಸ್ಥಿತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಾಹನದ ಫೋಟೋ ಹರಡುತ್ತಿದೆ.

 

 ಬೆಳಿಗ್ಗೆ ಸುಮಾರು 11.30ರ ಹಾಗೆ ಬ್ಯಾಟರಿ ಚಶ್ಮಾ ಬಳಿ ಅಪಘಾತ ಸಂಭವಿಸಿರುತ್ತದೆ. ಸೇನಾ ಟ್ರಕ್ ಜಮ್ಮುವಿನಿಂದ ಶ್ರೀನಗರದತ್ತ ಹೋಗುತ್ತಿತ್ತು ಎಂದು ತಿಳಿದು ಬಂದಿದೆ.

 

ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನಾಪಡೆ, ಜೆಕೆ ಪೋಲೀಸರು, ಎಸ್‌ಡಿಆರ್‌ಎಫ್ ಮತ್ತು ಸ್ಥಳೀಯ ಸ್ವಯಂಸೇವಕರು ತೊಡಗಿದ್ದು, ಘಟನೆಯ ಕುರಿತು ಮುಂದಿನ ತನಿಖೆ ಮುಂದುವರೆದಿದೆ.