ಬ್ರಹ್ಮಾವರ: ಬಾರ್ಕೂರು ಎಜುಕೇಶನಲ್ ಸೊಸೈಟಿಯ ಆಡಳಿತದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಷನಲ್ ಕೈಗಾರಿಕಾ ತರಬೇತಿ ಸಂಸ್ಥೆ (National ITI), ಹೇರಾಡಿ-ಬಾರ್ಕೂರು 2025-26ne ಸಾಲಿನ ಪ್ರವೇಶಾತಿ ಪ್ರಾರಂಭವಾಗಿದೆ.
ಆಗಸ್ಟ್ 1, 1984 ರಂದು ಪ್ರಾರಂಭವಾದ ಈ ಸಂಸ್ಥೆಯು ಉಡುಪಿ ಜಿಲ್ಲೆಯಲ್ಲಿ ಪ್ರಥಮ ಕೈಗಾರಿಕಾ ತರಬೇತಿ ಸಂಸ್ಥೆಯಾಗಿ ಹೆಸರುಗಳಿಸಿರುತ್ತದೆ.
ಭಾರತ ಸರ್ಕಾರದ ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ (NCVT) ಮತ್ತು ರಾಜ್ಯ ಸರ್ಕಾರದ ಉದ್ಯೋಗ ಮತ್ತು ತರಬೇತಿ ಇಲಾಖೆ ಮಾನ್ಯತೆ ಹೊಂದಿರುವ ಅನುದಾನಿತ ಸಂಸ್ಥೆಯಾಗಿದೆ.
ಸಂಸ್ಥೆಯ ವಿಶಿಷ್ಟತೆ: ಅಂದಿನ ಸಂಸ್ಥೆಯ ಅಧ್ಯಕ್ಷರಾದ ಕೀರ್ತಿಶೇಷ ವಿ.ಎಲ್. ರೋಚ್ರವರ ದೂರದೃಷ್ಟಿಯಿಂದ ಗ್ರಾಮೀಣ ಪ್ರದೇಶದಲ್ಲಿ ಆರಂಭಗೊಂಡ ಈ ಸಂಸ್ಥೆ, ಇಂದು ಸಾವಿರಾರು ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣವನ್ನು ನೀಡುವ ಮೂಲಕ ಸ್ವಾವಲಂಬಿ ಜೀವನದ ದಾರಿಕಟ್ಟಿದೆ ಎಂಬ ಹೆಮ್ಮೆ ಹೊಂದಿದೆ.
ಕೇವಲ ಎರಡು ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿಯನ್ನು ನೀಡಿ, ಉತ್ತಮ ಉದ್ಯೋಗಕ್ಕೆ ಅಥವಾ ಸ್ವಯಂ ಉದ್ಯೋಗಕ್ಕೆ ತಯಾರಿಸುವಲ್ಲಿ ಈ ಸಂಸ್ಥೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ.
ಐಟಿಐ ಕೋರ್ಸುಗಳು:
2 ವರ್ಷ ಅವಧಿಯ ಕೋರ್ಸ್‌ಗಳು:
ಎಲೆಕ್ಟ್ರೀಷಿಯನ್
ಫಿಟ್ಟರ್ (ಜನರಲ್ ಮೆಕ್ಯಾನಿಕ್)
ಮೆಕ್ಯಾನಿಕ್ ಮೋಟಾರ್ ವೆಹಿಕಲ್ (ಅಟೋಮೊಬೈಲ್)
ಎಲೆಕ್ಟ್ರಾನಿಕ್ ಮ್ಯಾಕಾನಿಕ್
1 ವರ್ಷ ಅವಧಿಯ ಕೋರ್ಸ್:
ವೆಲ್ಡರ್ (ಫ್ಯಾಬ್ರಿಕೇಶನ್)
ಎಸ್.ಎಸ್.ಎಲ್.ಸಿ ಪಾಸ್/ಪಿಯುಸಿ ಪಾಸ್ ಅಥವಾ ಫೇಲ್ ಆಗಿದ್ದರೂ ಸಹ, ವಿದ್ಯಾರ್ಥಿಗಳು ಈ ಕೋರ್ಸ್‌ಗಳಿಗೆ ಸೇರಬಹುದು. ಮಹಿಳಾ ಅಭ್ಯರ್ಥಿಗಳಿಗೂ ಪ್ರತ್ಯೇಕ ಸೌಲಭ್ಯಗಳು ಕಲ್ಪಿಸಲಾಗಿವೆ.
ಪ್ರಾಯೋಗಿಕ ತರಬೇತಿ ಮತ್ತು ಉದ್ಯೋಗ ಅವಕಾಶ: ರಾಜ್ಯದ ಆದೇಶದಂತೆ, ವಿದ್ಯಾರ್ಥಿಗಳು ಕಲಿಯುವಾಗಲೇ OJT (On Job Training) ಪಡೆಯುವುದು ಕಡ್ಡಾಯವಾಗಿದ್ದು, ಈಗಾಗಲೇ ಅನೇಕ ವಿದ್ಯಾರ್ಥಿಗಳು ಉಡುಪಿ ಮತ್ತು ತೆಕ್ಕಟ್ಟೆಯ ಆಭರಣ ಮೋಟಾರ್ಸ್, ವಿ-ಗಾರ್ಡ್ ಇತ್ಯಾದಿ ಖ್ಯಾತ ಕಂಪನಿಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಕ್ಯಾಂಪಸ್ ಇಂಟರ್ವ್ಯೂ— ಪ್ರತಿ ವರ್ಷ ಪ್ರಖ್ಯಾತ ಕಂಪನಿಗಳಿಂದ ಕ್ಯಾಂಪಸ್ ಇಂಟರ್ವ್ಯೂಗಳನ್ನು ಆಯೋಜಿಸಲಾಗುತ್ತಿದ್ದು, ಈ ಮೇ 23 ಮತ್ತು 24 ರಂದು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈ.ಲಿ. ಕಂಪನಿಯಿಂದ ಕ್ಯಾಂಪಸ್ ಇಂಟರ್ವ್ಯೂ ನಡೆಯಲಿದೆ. ಜೂನ್ ತಿಂಗಳಲ್ಲಿಯೂ ಇತರ ಕಂಪನಿಗಳ ಸಂದರ್ಶನಗಳು ನಡೆಯಲಿವೆ.
ವಿವರಗಳಿಗೆ ಸಂಪರ್ಕಿಸಿ:
94483 09075
94815 09052
94485 79101
73381 16601