ಮಂಗಳೂರು: ಮಂಗಳೂರು ನಗರದ ಹೆದ್ದಾರಿಯ ಬದಿಗಳಲ್ಲಿ ಸೀಯಾಳ ಚಿಪ್ಪು, ಹಣ್ಣು ಹಂಪಲು ತ್ಯಾಜ್ಯ ಮತ್ತು ಪ್ಲಾಸ್ಟಿಕ್ ವಸ್ತುಗಳನ್ನು ರಾಶಿ ಹಾಕೂತಿದ್ದು ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ಮತ್ತು ಆಯುಕ್ತರ ಸೂಚನೆಯಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ದಾಳಿ ನಡೆಸಿದರು.
ಎಚ್ಚರಿಕೆ ನೀಡಿದರೂ ವಹಿವಾಟು ಮುಂದುವರಿದಿದ್ದ ಕಾರಣ ಕಠಿಣ ಕ್ರಮ ತೆಗೆದುಕೊಂಡುಸ್ಥಳದಲ್ಲಿದ್ದ ಹಲವು ಅಂಗಡಿಗಳಿಗೆ ತಲಾ ₹10,000 ದಂಡ ವಿಧಿಸಲಾಯಿತು.
ಅನೇಕರು ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ ಅಂಗಡಿಗಳಲ್ಲಿನ ವಸ್ತುಗಳನ್ನು ಮತ್ತು ಬಳಸುತ್ತಿದ್ದ ವಾಹನಗಳನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿದರು.
ಒಂದು ವರ್ಷದಿಂದ ತ್ಯಾಜ್ಯ ನಿರ್ವಹಣೆ ಇಲ್ಲದೇ ರಸ್ತೆಯ ಬದಿಯಲ್ಲಿ ಬಿಸಾಡಲಾಗುತ್ತಿದ್ದು, ಜನರು ರಸ್ತೆ ಮೇಲೆ ವಾಹನ ನಿಲ್ಲಿಸಿ ಖರೀದಿಗೆ ಮುಂದಾಗುತ್ತಿರುವುದು ಅಪಾಯಕಾರಿಯಾಗಿ ಪರಿಣಮಿಸುತ್ತಿದೆ.
ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಸುರತ್ಕಲ್ ವಿಭಾಗಾಧಿಕಾರಿ ವಾಣಿ ಆಳ್ವ ಹೇಳಿದರು. ವ್ಯಾಪಾರಸ್ಥರು ಪಾಲಿಕೆಯ ನಿಯಮಗಳನ್ನು ಪಾಲಿಸಬೇಕು ಎಂದು ಅವರು ತಿಳಿಸಿದರು.
ಈ ಕಾರ್ಯಾಚರಣೆಯಲ್ಲಿ ಕಂದಾಯಾಧಿಕಾರಿ ಸುಶಾಂತ್ ಹಾಗೂ ಹಲವಾರು ಪಾಲಿಕೆ ಅಧಿಕಾರಿಗಳು ಪಾಲ್ಗೊಂಡಿದ್ದರು. ಮುಂದಿನ ದಿನಗಳಲ್ಲಿ ನಿಯಮ ಉಲ್ಲಂಘನೆ ಕಂಡುಬಂದರೆ ಮತ್ತೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.