ಪುತ್ತೂರು: ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳಿಂದ ರಚನೆಯಾದ ಅಗಸ್ತ್ಯ ತಂಡವು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ SPL ಪ್ರೀಮಿಯರ್ ಲೀಗ್ ಈಗಾಗಲೇ ನಾಲ್ಕನೇ ಸೀಸನ್‌ಗೆ ಕಾಲಿಟ್ಟಿದೆ.
ಕಳೆದ ಸೀಸನ್‌ನಲ್ಲಿ ಈ ತಂಡವು ದ್ವಿತೀಯ ರನ್ನರ್ ಅಪ್ ಸ್ಥಾನವನ್ನು ಪಡೆದು ಉತ್ತಮ ಪ್ರದರ್ಶನ ನೀಡಿದೆ.
ಗ್ರಾಮೀಣ ಮಟ್ಟದ ಪ್ರತಿಭೆಗಳನ್ನು ಗುರುತಿಸಿ, ಅವರನ್ನು ಹೊರ ಜಗತ್ತಿಗೆ ಪರಿಚಯಿಸುವುದೇ ಈ ಲೀಗ್‌ನ ಪ್ರಮುಖ ಉದ್ದೇಶವಾಗಿದ್ದು, ಪ್ರತಿ ವರ್ಷ ವಿದ್ಯಾರ್ಥಿಗಳು ಇದರ ಆಯೋಜನೆಯಲ್ಲಿ ಸಕ್ರಿಯರಾಗಿರುವುದು ಪ್ರಶಂಸನೀಯವಾದುದು.
ಈ ಜರ್ಸಿ ಮುದ್ರಣಕ್ಕೆ ಪುತ್ತೂರಿನ ಖ್ಯಾತ ಉದ್ಯಮಿ ಮಂಜುನಾಥ್ ಅವರು ಆರ್ಥಿಕ ಸಹಾಯ ನೀಡಿದ್ದು, ಅವರ ಕೊಡುಗೆಯನ್ನು ತಂಡದ ಸದಸ್ಯರು ಧನ್ಯವಾದಪೂರ್ವಕವಾಗಿ ಸ್ವೀಕರಿಸಿದ್ದಾರೆ.
ಇತ್ತೀಚೆಗಷ್ಟೆ ತಂಡದ ಜರ್ಸಿಯನ್ನು ಹಿಂದೂ ಮುಖಂಡ ಅಕ್ಷಯ್ ರಾಜಪೂತ್ ಹಾಗೂ ಉದ್ಯಮಿ ಮಂಜುನಾಥ್ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ತಂಡದ ಸದಸ್ಯರು, ಕಾಲೇಜಿನ ಶಿಕ್ಷಕರು ಮತ್ತು ಇತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು