ಬೆಳ್ತಂಗಡಿ: ಅಪ್ರಾಪ್ತ ಬಾಲಕಿಯೋರ್ವಳ ಮೇಲೆ ಕಾಮುಕನೋರ್ವ ಅತ್ಯಾಚಾರಎಸಗಿದ ಹೃದಯ ವಿದ್ರಾವಕ ಘಟನೆ ಬೆಳ್ತಂಗಡಿಯಲ್ಲಿ ಬೆಳಕಿಗೆ ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಬಾಲಕಿ ಗರ್ಭಿಣಿಯಾಗಿದ್ದು ಸ್ಥಳೀಯರಲ್ಲಿ ಆಕ್ರೋಶವನ್ನು ಉಂಟುಮಾಡಿದೆ.
ಶಿರ್ಲಾಲು ಗ್ರಾಮದ 28 ವರ್ಷದ ಸನತ್ ಎಂಬಾತ ಬಂಧಿತ ಆರೋಪಿ. ಆತ ಬಾಲಕಿಯ ತಂದೆಯ ಕಾರಿನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಮನೆಯವರ ವಿಶ್ವಾಸ ಗಳಿಸಿದ್ದ. ಈ ನಂಬಿಕೆಯನ್ನು ದುರ್ಬಳಕೆ ಮಾಡಿಕೊಂಡ ಸನತ್, ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ
ಬಾಲಕಿಯ ಜನ್ಮದಿನದಂದು ಆತ ಮನೆಗೆ ಬಂದಿದ್ದನೆಂದು ಅದೇ ಸಂದರ್ಭದಲ್ಲೇ ಅವನು ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.
ಈ ಪ್ರಕರಣದ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದ್ದು, ಆತನನ್ನು ಬಂಧಿಸಲಾಗಿದೆ.