ಪಾಕಿಸ್ತಾನಕ್ಕೆ ಪಾಠ ಕಲಿಸಿದ ಭಾರತ: ಎಫ್-16 ನಾಶ, ಪೈಲೆಟ್ ಸೆರೆ, ಡ್ರೋನ್ ದಾಳಿಗೆ ತೀವ್ರ ಪ್ರತಿಕ್ರಿಯೆ!

  • 09 May 2025 03:59:15 PM


ದೆಹಲಿ: ಪಾಕಿಸ್ತಾನವು ಭಾರತೀಯ ಸೇನಾ ನೆಲೆಗಳ ಮೇಲೆ ಪ್ರತೀಕಾರದ ದಾಳಿಗಾಗಿ ಡ್ರೋನ್‌ಗಳನ್ನ ಕಳಿಸಿತು. ಜಮ್ಮು, ಪಠಾಣ್‌ಕೋಟ್‌, ಅಖ್ನೂರ್‌, ರಾಜೌರಿ, ಪೂಂಚ್‌ ಸೇರಿದಂತೆ ಗಡಿ ಭಾಗಗಳಲ್ಲಿ ಡ್ರೋನ್‌ ದಾಳಿಗೆ ಪಾಕ್ ಪ್ರಯತ್ನಿಸಿದರೂ ಕೂಡ ಭಾರತೀಯ ಸೇನೆ ಹಾಗೂ ವಾಯುಪಡೆಯ ತ್ವರಿತ ಕಾರ್ಯಾಚರಣೆಯಿಂದ ಎಲ್ಲಾ ಡ್ರೋನ್‌ಗಳನ್ನು ಪತ್ತೆಹಚ್ಚಿ ಧ್ವಂಸಗೊಳಿಸಿದೆ.

 

 

 ಪಾಕ್‌ನ ಎಫ್‌-16 ಫೈಟರ್‌ ಜೆಟ್‌ ಅನ್ನು ಭಾರತೀಯ ವಾಯುಪಡೆ ಹೊಡೆದುರುಳಿಸಿದ್ದು, ವಿಮಾನ ಪತನಗೊಳ್ಳುತ್ತಿದ್ದಂತೆಯೇ ಪೈಲೆಟ್ ಪ್ಯಾರಚೂಟ್ ಮೂಲಕ ಭಾರತದಲ್ಲಿ ಕೆಳಗಿಳಿದಿದ್ದು ಆ ಪೈಲೆಟ್‌ನ್ನು ಭಾರತೀಯ ಸೇನೆ ಜೀವಂತವಾಗಿ ಸೆರೆಹಿಡಿದಿದೆ. ಇದರ ಜೊತೆಗೆ ಪಾಕ್‌ನ ಇನ್ನೆರಡು ಜೆಎಫ್‌-17 ಯುದ್ಧವಿಮಾನಗಳನ್ನೂ ಭಾರತೀಯ ಸೇನೆ ಹೂಡೆದುರುಳಿಸಿದೆ.

 

ಪಾಕಿಸ್ತಾನ ಜಮ್ಮು ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಲು ಯತ್ನಿಸಿದರೂ, ಭಾರತ ಸ್ಥಾಪಿಸಿದ್ದ ಎಸ್-400 ಕ್ಷಿಪಣಿಯ ನಿರೋಧಕ ವ್ಯವಸ್ಥೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ಹಲವು ಡ್ರೋನ್‌ ಹಾಗೂ ಕ್ಷಿಪಣಿಗಳನ್ನು ದ್ವಂಸ ಮಾಡಿದೆ. ಈ ಘರ್ಷಣೆಯಿಂದ ಜಮ್ಮು ಭಾಗದಲ್ಲಿ ಭಾರಿ ಬಿಗು ಪರಿಸ್ಥಿತಿ ಸೃಷ್ಟಿಯಾಗಿದೆ.