ಮಂಗಳೂರು: ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗದಂತೆ ಕಾಯ್ದುಕೊಳ್ಳಲು, ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರು ಡ್ರೋನ್ ಹಾರಾಟದ ಮೇಲಿನ ನಿಷೇಧಕ್ಕೆ ಖಡಕ್ ಆದೇಶ ಹೊರಡಿಸಿದ್ದಾರೆ.
ಈ ಆದೇಶ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಅನ್ವಯವಾಗಲಿದೆ. ಇಂದು (ಮೇ 11) ಸಂಜೆ 4 ಗಂಟೆಯಿಂದ ಆರಂಭವಾಗಿ ಮೇ 14ರ ಸಂಜೆ 4 ಗಂಟೆಯವರೆಗೆ ನಾಲ್ಕು ದಿನಗಳ ಕಾಲ ಯಾವುದೇ ರೀತಿಯ ಡ್ರೋನ್ ಹಾರಾಟ ಅಥವಾ ಡ್ರೋನ್ ಬಳಸಿ ಶೂಟಿಂಗ್ ನಡೆಸುವುದು ಸಂಪೂರ್ಣವಾಗಿ ನಿಷಿದ್ಧವಾಗಿದೆ.
ಈ ನಿಷೇಧವು ಡ್ರೋನ್ ನಿಯಮಗಳಡಿ ಜಾರಿಗೆ ಬರುತ್ತಿದ್ದು, ಸಾರ್ವಜನಿಕರು ಇದನ್ನು ಕಟ್ಟುನಿಟ್ಟಾಗಿ ಪಾಲಿಸ ಬೇಕಾಗಿಮನವಿ ಮಾಡಲಾಗಿದೆ.
ಕಾನೂನು ಉಲ್ಲಂಘನೆ ಅಥವಾ ಶಾಂತಿಗೆ ಧಕ್ಕೆಯಾಗುವಂತಹ ಘಟನೆಗಳು ನಡೆಯದಂತೆ ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಆದ್ದರಿಂದ ಯಾವುದೇ ತುರ್ತು ಅಗತ್ಯವಿದ್ದಲ್ಲಿ ಕಮಿಷನರ್ ಕಚೇರಿ ಅಥವಾ ಸಂಬಂಧಿತ ಅಧಿಕಾರಿಗಳ ಅನುಮತಿ ಕಡ್ಡಾಯವಾಗಿದೆ.