ಮಣಿಯೂರಿನಲ್ಲಿ ದೀಪಾವಳಿ ಹಬ್ಬದ ಸಂಭ್ರಮ: ವಿಶ್ವ ಹಿಂದೂ ಪರಿಷತ್ ಅಡೂರು ಘಟಕದಿಂದ ಅದ್ದೂರಿ ಗೋ ಪೂಜಾ ಕಾರ್ಯಕ್ರಮ

  • 05 Nov 2024 08:51:34 PM

ಮಣಿಯೂರು: ವಿಶ್ವ ಹಿಂದೂ ಪರಿಷತ್ ಭಜರಂಗದಳದ ಮಾತೃಶಕ್ತಿ ದುರ್ಗವಾಹಿನಿ ಅಡೂರು ಇದರ ಆಶ್ರಯದಲ್ಲಿ ಶ್ರೀ ಗಣೇಶ ಭಜನಾ ಮಂದಿರ, ಮಣಿಯೂರಿನಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗೋ ಪೂಜಾ ಕಾರ್ಯಕ್ರಮವನ್ನು ಆಕರ್ಷಕವಾಗಿ ಮತ್ತು ಯಶಸ್ವಿಯಾಗಿ ಆಯೋಜಿಸಲಾಯಿತು.

 

 

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಕ್ಷಯ್ ರಾಜಪುತ್ ಅವರು ದಿಕ್ಷುಚಿ ಭಾಷಣ ನೀಡಿದರು. ಅವರು ಗೋ ಮಹತ್ವ, ಲವ್ ಜಿಹಾದ್, ಮತ್ತು ಭಾರತದಲ್ಲಿ ಈಸ್ಲಾಮೀಕರಣದ ಕುರಿತಾದ ಪ್ರಮುಖ ವಿಚಾರಗಳನ್ನು ಪ್ರಸ್ತುತಪಡಿಸಿದರು. ಅವರು ಮಾತನಾಡುತ್ತಾ, *ಬಾಂಗ್ಲಾ ಪೇಪರ್ ಸ್ನೇಕ್ ಹಿಡಿದು ಹಿಂದೂ ಸಮಾಜವನ್ನು ಹೆದರಿಸುವುದು ಸಾಧ್ಯವಿಲ್ಲ. ಹಿಂದೂ ಸಮಾಜವನ್ನು ಕೆಣಕುವುದು 440 ವೋಲ್ಟ್ ವಿದ್ಯುತ್ ತಂತಿಯನ್ನು ಮುಟ್ಟಿದಂತೆ,* ಎಂದು ಹೇಳಿದ್ದಾರೆ..ಇವರು ಹಿಂದುತ್ವಕ್ಕಾಗಿ, ಹಿಂದೂಪರ ಸಂಘಟನೆಗಳಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುವ ಕೆಲಸವನ್ನು ಮಾಡುತ್ತಿದ್ದಾರೆ.

 

ಈ ಸಮಾರಂಭವು ಭಕ್ತಿಯ ಉತ್ಸಾಹವನ್ನು ಹರಿಯುವುದರ ಜೊತೆಗೆ, ಹಿಂದೂ ಪರಂಪರೆಯ ಸಾಂಸ್ಕೃತಿಕತೆಯನ್ನು ಎತ್ತಿ ತೋರಿಸುತ್ತದೆ. ಈ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಆಡೂರು ಭಾಗದ ಪ್ರಮುಖರು, ದುರ್ಗಾ ವಾಹಿನಿಯ ಕಾರ್ಯಕರ್ತರು ಮತ್ತು ಊರಿನ ಹಿರಿಯರು, ಬಜ್ಪೆಯ ಪ್ರಮುಖರು ಉಪಸ್ಥಿತರಿದ್ದರು.