ಸೇನೆ ಚಲನವಲನದ ವಿಡಿಯೋ ಕಂಡು ಬಂದಲ್ಲಿ ಹಂಚಿಕೆ ತಪ್ಪು: ನಾಗರಿಕರಿಗೆ ಎಚ್ಚರಿಕೆಯ ಸೂಚನೆ!

  • 11 May 2025 04:27:12 PM


ದೆಹಲಿ: ನಿಮ್ಮ ಪಟ್ಟಣ ಅಥವಾ ನಗರದಲ್ಲಿ ಭಾರತೀಯ ಸೇನೆ, ವಾಯುಪಡೆ ಅಥವಾ ನೌಕಾಪಡೆಯ ವಾಹನಗಳು ಸಾಗುತ್ತಿರುವುದನ್ನು ಕಂಡಲ್ಲಿ, ದಯವಿಟ್ಟು ಅದನ್ನು ರೆಕಾರ್ಡ್ ಮಾಡಿ ವಿಡಿಯೋ/ರೀಲ್ ರೂಪದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಬೇಡಿ ಎಂದು ಅಧಿಕಾರಿಗಳು ವಿನಂತಿಸಿದ್ದಾರೆ.

 

ಹೀಗೆ ಮಾಡುವುದರಿಂದ ಭಾರತ ವಿರೋಧಿ ಶಕ್ತಿಗಳಿಗೆ ಉಪಯೋಗವಾಗ ಬಹುದಾದ ಭದ್ರತಾ ಮಾಹಿತಿಯನ್ನು ನೀಡುವ ಸಾಧ್ಯತೆ ಉಂಟುಮಾಡುತ್ತದೆ. ಆದ್ದರಿಂದ ರಾಷ್ಟ್ರದ ಭದ್ರತೆಗಾಗಿ ಅಪಾಯಕಾರಿ ಎನಿಸಬಹುದಾದ ಕ್ರಮಗಳನ್ನ ಮಾಡದಿರಿ ಎಂದು ಹೇಳಿದ್ದಾರೆ.

 

 ಭದ್ರತಾ ದಳಗಳ ಚಲನವಲನಗಳು ಅತ್ಯಂತ ಸೂಕ್ಷ್ಮವಾಗಿದ್ದು, ಸಾರ್ವಜನಿಕರು ಈ ಕುರಿತಾಗಿ ಜಾಗರೂಕರಾಗಿರಬೇಕು.

 

ನಿಮ್ಮ ಜವಾಬ್ದಾರಿಯ ಭಾಗವಾಗಿ, ನೀವು ಈ ಸಂದೇಶವನ್ನು ನಿಮ್ಮ ಪ್ರತಿಯೊಂದು ಸ್ನೇಹಿತರ ಗುಂಪುಗಳಲ್ಲಿ ಹಂಚಿಕೊಳ್ಳಿ. ದೇಶದ ಭದ್ರತೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿರುತ್ತದೆ.