ಪೈವಳಿಕೆ: ಬಿಜೆಪಿ ಮಂಜೇಶ್ವರ ಮಂಡಲ ಸಮಿತಿಯ ಹಿರಿಯ ಸದಸ್ಯ ಕೆ.ಪಿ. ಪ್ರಶಾಂತ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿರುವ ಜಿಲ್ಲಾಧ್ಯಕ್ಷೆಯ ತೀರ್ಮಾನ ಪಕ್ಷದ ಆಂತರಿಕ ರಾಜಕೀಯದಲ್ಲಿ ಭಾರೀ ಭುಗಿಲು ಎಬ್ಬಿಸಿದೆ.
ಪೈವಳಿಕೆಯಲ್ಲಿ ಈ ತೀರ್ಮಾನವನ್ನು ವಿರೋಧಿಸಿ ಸಭೆಗಳು ನಡೆಯುತ್ತಿದ್ದು, ಮಂಡಲ ಮಟ್ಟದಲ್ಲಿ ಸಾಮೂಹಿಕ ರಾಜೀನಾಮೆಗೆ ಚಿಂತನೆ ನಡೆಸಲಾಗುತ್ತಿದೆ ಎನ್ನುವ ಮಾಹಿತಿಗಳು ಕೇಳಿ ಬರುತ್ತಿದೆ.
30 ವರ್ಷಗಳಿಂದ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿರುವ ಪ್ರಶಾಂತ್ ರನ್ನು, ಪಕ್ಷದ ಸಂವಿಧಾನದ ಹೊರಗಿನ ನಿಯಮದ ಆಧಾರದ ಮೇಲೆ ಹಾಗೂ ಮಂಡಲ, ಜಿಲ್ಲಾ ಸಮಿತಿಗಳ ಅನುಮತಿ ಇಲ್ಲದೆ ಅಮಾನತು ಗೊಳಿಸಿರುವುದು "ಸರ್ವಾಧಿಕಾರಿ ಧೋರಣೆ" ಎಂದು ಪಕ್ಷದೊಳಗಿನ ಹಲವಾರು ಮುಖಂಡರು ಗುಪ್ತ ಸಭೆಗಳಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸೋಮವಾರ ತಡರಾತ್ರಿ ಜೋಡುಕಲ್ಲಿನಲ್ಲಿ ನಡೆದ ರಹಸ್ಯ ಸಭೆಯಲ್ಲಿ ಜಿಲ್ಲಾಧ್ಯಕ್ಷೆಯ ರಾಜೀನಾಮೆ ಅಥವಾ ಪ್ರಶಾಂತ್ ರವರ ಅಮಾನತನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಲು ನಿರ್ಧಾರ ಕೈಗೊಳ್ಳಲಾಗಿದೆ.
Kp ಪ್ರಶಾಂತ್ ಬಿಜೆಪಿ ಜಿಲ್ಲಾ ಅಧ್ಯಕ್ಷೆಯ SDPI ಬಾಂಧವ್ಯ ಹೊರ ಹಾಕಿದ್ದೆ ಅಮಾನತಿಗೆ ಕಾರಣ ಎಂಬ ಮಾತು ಕೇಳಿ ಬರುತ್ತಿದೆ . ಮೂಲಗಳ ಪ್ರಕಾರ ರೈಲ್ವೆ ಸಹಾಯಕ ಸಚಿವರಿಗೆ ನೀಡಲು ಬಿಜೆಪಿ ಉದ್ದೇಶಿಸಿದ್ದ ಮನವಿಯನ್ನು ನೀಡದೆ ಹಾಗೂ ಜಿಲ್ಲೆಯ ಬಿಜೆಪಿ ನೇತೃತ್ವಕ್ಕೆ ತಿಳಿಸದೇ ಮಂಜೇಶ್ವರ sdpi ನೇತಾರರನ್ನು ಜೊತೆ ಸೇರಿಸಿ ಕೇಂದ್ರ ಮಂತ್ರಿಯನ್ನು ಭೇಟಿ ಆದದ್ದು ಯಾಕೆ ಎಂಬುದಾಗಿ ಪ್ರಶ್ನೆಸಿದವರನ್ನು ಪಕ್ಷದಿಂದ ಹೊರ ಹಾಕಲಾಗಿದೆ ಎಂದು ಸುದ್ದಿ ಕೇಳಿ ಬರುತ್ತಿದೆ.
ಮಾತ್ರವಲ್ಲ ಜಿಲ್ಲೆ ಪ್ರಮುಖ sdpi ಮುಖಂಡನ ಶೋ ರೂಮ್ ಉದ್ಘಾಟನೆಯ ಪ್ರಮೋಷನ್ ವಿಡಿಯೋ ವನ್ನು ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಉಪಯೋಗಿಸಿ ಮಾಡಿರುವುದು ನೀಡಿರುವ ಜಿಲ್ಲಾ ಅಧ್ಯಕ್ಷೆಯ ನಡವಳಿಕೆಯನ್ನು ಪ್ರಶ್ನೆಸಿದಕ್ಕೆ ಈ ಅಮಾನತೆ ಎಂದು ಪೈವಳಿಕೆ ಯಲ್ಲಿ ಚರ್ಚೆ ಆಗುತ್ತಿದೆ.
ಪಕ್ಷದ ಹಿರಿಯ ನಾಯಕರ ಅಭಿಪ್ರಾಯದಂತೆ, ಇಂತಹ ಅಮಾನತು ಕ್ರಮಕ್ಕೆ ಪಾಲಿಸಬೇಕಾದ ಕೆಲವು ನಿಯಮಗಳಿವೆ ಹಾಗೂ ಈ ಅಧಿಕಾರ ರಾಜ್ಯಾಧ್ಯಕ್ಷರಿಗೆ ಮಾತ್ರ ಸಲ್ಲುತ್ತದೆ. ಜಿಲ್ಲಾಧ್ಯಕ್ಷೆಗೆ ಈ ವಿಧದ ಕಠಿಣ ಕ್ರಮ ಕೈಗೊಳ್ಳುವ ಅಧಿಕಾರವಿಲ್ಲ ಎಂಬುದು ಸ್ಪಷ್ಟವಾಗಿದೆ.
ಪ್ರಶಾಂತ್ ರಿಗೆ ಯಾವುದೇ ಅಧಿಕೃತ ನೋಟಿಸ್ ನೀಡುವುದಕ್ಕೂ ಮುನ್ನ ಜಿಲ್ಲಾ ಅಧ್ಯಕ್ಷೆ ಪತ್ರಿಕಾ ಹೇಳಿಕೆ ನೀಡಿರುವುದು ಪಕ್ಷದ ನಿಯಮಿತ ಪ್ರಕ್ರಿಯೆಗಳಿಗೂ, ಗೌಪ್ಯತೆಗೂ ವಿರುದ್ಧವಾಗಿರುವುದಾಗಿರುತ್ತದೆ ಎಂಬುದಾಗಿ ಆರೋಪಗಳು ಕೇಳಿ ಬರುತ್ತಿದೆ
ಜಿಲ್ಲಾ ಅಧ್ಯಕ್ಷೆ ಕೇವಲ ನಾಲ್ಕು ವರ್ಷಗಳ ಹಿಂದೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ರಾಜಕೀಯ ಅನುಭವದ ಕೊರತೆಯಿಂದ ಕಾಸರಗೋಡು ಜಿಲ್ಲೆಯ ಬಿಜೆಪಿ ಸಂಘಟನೆಯೇ ಹೀನಗತಿಗೆ ತುತ್ತಾಗಿದೆ ಎಂಬ ಆತಂಕ ಕೂಡಾ ಕಾರ್ಯಕರ್ತರ ನಡುವೆ ಚರ್ಚೆಯಾಗುತ್ತಿದೆ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಅವರ ಹಲಾಲ್ ಚಿಕನ್ ಸೆಂಟರ್ ಉದ್ಘಾಟನೆ ಯನ್ನು ಮುಸ್ಲಿಂ ಲೀಗ್ ಶಾಸಕರಿಂದ ಮಾಡಿಸಿದ್ದು ಕೂಡ ಕಾರ್ಯಕರ್ತರಲ್ಲಿ ಅಸಮಾಧಾನ ಉಂಟಾಗಿದೆ.
ಪ್ರಶಾಂತ್ ರ ಅಮಾನತು ಕ್ರಮವನ್ನು ಹಿಂತೆಗೆದು ಕೊಳ್ಳದೇ ಇದ್ದಲ್ಲಿ, ಮಂಡಲ ಮಟ್ಟದ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸೋಮವಾರ ತಡ ರಾತ್ರಿ ಜೋಡುಕಲ್ಲು ನಲ್ಲಿ ಅಧ್ಯಕ್ಷೆಯ ಸರ್ವಧಿಕಾರ ಧೋರಣೆ ಖಂಡಿಸಿ ಬಿಜೆಪಿ ನೇತಾರರ, ಕಾರ್ಯಕರ್ತರ ರಹಸ್ಯ ಸಭೆ ನಡೆದಿದೆ, ಜಿಲ್ಲಾ ಅಧ್ಯಕ್ಷೆಯ ರಾಜೀನಾಮೆ ಅಥವಾ ಅವರು ನೀಡಿರುವ ಅಮಾನತು ವಾಪಾಸ್ ಪಡೆಯಲು ನಿರ್ಣಯ ಅಂಗಿಕರಿಸಲಾಗಿದೆ ಎಎಂಬ ಮಾಹಿತಿ ತಿಳಿದು ಬಂದಿದೆ.