ಸಕಲೇಶಪುರ:ಕರ್ನಾಟಕ ರಾಜ್ಯದ ವಕ್ಫ್, ಅಲ್ಪಸಂಖ್ಯಾತ ಮತ್ತು ವಸತಿ ಸಚಿವರಾದ ಝಮೀರ್ ಅಹಮದ್ ಅವರು ಹುಬ್ಬಳ್ಳಿಯಲ್ಲಿ ನಡೆದ ಸರ್ಕಾರಿ ವಕ್ಫ್ ಕಾರ್ಯಕ್ರಮದಲ್ಲಿ ಪ್ರಚೋದನಾತ್ಮಕವಾಗಿ ಉರ್ದು ಭಾಷೆಯಲ್ಲಿ ಭಾಷಣ ಮಾಡಿದ ಸಂದರ್ಭದಲ್ಲಿ, ಹಿಂದೂಗಳ ವಿರುದ್ಧ ಅವಹೇಳನಾತ್ಮಕವಾಗಿ ಮಾತನಾಡಿ ರೈತರ ಜಮೀನನ್ನು ವಕ್ಫ್ ಬೋರ್ಡ್‌ಗೆ ಸೇರಿಸಲು ಪ್ರಚೋದನೆ ನೀಡಿದ ಆರೋಪವಿದೆ. ಅವರು ದೇವರಾದ *ಅಲ್ಲಾಹು ನಮಗೆ ನೀಡಿರುವ ಜಮೀನನ್ನು ಹಸಿರು ಬಣ್ಣದಿಂದ ಮುಚ್ಚಿ ಶೈತಾನಗಳು ಬರಲು ಹೆದರಬೇಕು* ಎಂದು ಹೇಳಿದರೆಂದು ದೂರಿನಲ್ಲಿ ತಿಳಿಸಲಾಗಿದೆ. ಈ ಹೇಳಿಕೆಯಿಂದ ಹಿಂದೂ ಸಮಾಜದ ಭಾವನೆಗಳಿಗೆ ಧಕ್ಕೆಯಾಗಿದ್ದು, ಅದು ಆತಂಕಕಾರಿ ಬೆಳವಣಿಗೆ ಕಾಣಿಸಿಕೊಂಡಿದೆ.
ಝಮೀರ್ ಅಹಮದ್ ಕರ್ನಾಟಕ ಸರ್ಕಾರದ ಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವಾಗ ಪ್ರಾಮಾಣಿಕವಾಗಿ, ಪಾರದರ್ಶಕತೆ ಹಾಗು ಯಾವುದೇ ದ್ವೇಷ ಭಾವನೆಯಿಂದ ಕರ್ತವ್ಯ ನಿರ್ವಹಿಸುವುದಿಲ್ಲ ಎಂದು ಪ್ರಮಾಣ ಮಾಡಿ , ವಕ್ಫ್ ಆಸ್ತಿ ವಿಚಾರದಲ್ಲಿ, ಅವರು ತಮ್ಮ ಭಾಷಣದಲ್ಲಿ ಹಿಂದೂಗಳ ವಿರುದ್ಧ ಕೋಪದಿಂದ ಮಾತನಾಡಿ, *ಅಲ್ಲಾನಿಗೆ ನಾವು ಲೆಕ್ಕ ಕೊಡಬೇಕು ಹಾಗಾಗಿ ವಕ್ಫ್ ಅಸ್ತಿ ಎಂದು ಪಹಣಿಯಲ್ಲಿ ನಮೂದಾಗಿರುವ ಯಾವ ಜಮೀನನ್ನು ಬಿಡಬಾರದು* ಎಂದು ಸಮಾಜದ ಸ್ವಾಸ್ಥ್ಯ ಕದಡುವ ರೀತಿ ಮಾತನಾಡಿ ಶಾಂತಿ ಬಂಗ ಮಾಡಲು ಪ್ರಚೋದನೆ ನೀಡಿರುವ ಮಂತ್ರಿ ಮೇಲೆ ದೂರು ದಾಖಲಿಸಿದ್ದಾರೆ. ಈ ಕ್ರಮದಿಂದ ಸಮಾಜದಲ್ಲಿ ಶಾಂತಿ ಮತ್ತು ಸ್ವಾಸ್ಥ್ಯ ಕದಡು ಹೊತ್ತಿದೆ ಎಂಬುದಾಗಿ ದೂರಿನಲ್ಲಿ ಸ್ಪಷ್ಟಪಡಿಸಲಾಗಿದೆ.
ಬಡ ರೈತರ ಜೀವನವನ್ನು ಅಸ್ಥಿರಗೊಳಿಸಿರುವ ಝಮೀರ್ ಅಹಮದ್ ಖಾನ್, ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಚೋದನೆ ನೀಡಿದಷ್ಟೆ ಅಲ್ಲದೆ, ನೂರಾರು ವರ್ಷಗಳಿಂದ ರೈತರ ಹೆಸರಿನಲ್ಲಿ ಇರುವ ಜಮೀನನ್ನು ವಕ್ಫ್ ಸಂಸ್ಥೆಗೆ ಸೇರಿಸುವಂತೆ ಅಧಿಕಾರಿಗಳಿಗೆ ಒತ್ತಡ ಹಾಕಿದರು ಎಂದು ದೂರಿನಲ್ಲಿ ವಿವರಿಸಲಾಗಿದೆ. ಇವರ ಈ ಕ್ರಮದಿಂದ ರೈತರಿಗೆ ಭಯ ಹಾಗೂ ಆತಂಕ ಸೃಷ್ಟಿಯಾಗಿದ್ದು, ಕಣ್ಣೆರಲ್ಲಿ ಬದುಕು ದೂಡುವಂತೆ ಮಾಡಿದ್ದಾರೆ.
ಝಮೀರ್ ಅಹಮದ್ ತವೊಬ್ಬರು ರಾಜ್ಯದಮಂತ್ರಿ ಎನ್ನುವುದನ್ನು ಮರೆತು, ನಿರ್ಧಿಷ್ಟ ಕೋಮಿಗೆ ಸೇರಿದ ಮುಸ್ಲಿಂ ಮುಖಂಡನಾಗಿ ವರ್ತನೆ ಮಾಡಿದರೆಂದು ಆರೋಪಿಸಲಾಗಿದೆ. *ವಕ್ಫ್ ಬೋರ್ಡ್‌ಗೆ ಎಷ್ಟು ಆಸ್ತಿ ನೀಡಿದ್ದೀಯ* ಎಂದು ಪ್ರಶ್ನಿಸುವ ಮೂಲಕ, ಸಾಮಾಜಿಕ ಸಾಮರಸ್ಯವನ್ನು ಕದಿಯುವ ಪ್ರಚೋದನೆ ಮಾಡಿದರು ಎಂದು ದೂರಿನಲ್ಲಿ ಕಟು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಇದರ ಪರಿಣಾಮವಾಗಿ, ಕೋಮು ಗಲಭೆಗಳು ಸೃಷ್ಟಿಯಾಗುವ ವಿಷಯಗಳೆಂದು ಹೇಳಲಾಗಿದೆ. ಆದ್ದರಿಂದ, *ಝಮೀರ್ ಅಹಮದ್ ಅವರ ವಿರುದ್ಧ FIR ದಾಖಲಿಸಿ, ಅವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ, ಹಾಗೂ ರೈತರಿಗೆ ನ್ಯಾಯ ಒದಗಿಸುವಂತೆ ಮಾಡಿ ಎಂದು ಇದರಿಂದ ನಮಗೆ.ಆಗಿರುವ ನೋವನ್ನು ಕಡಿಮೆ ಮಾಡಿ ಕೊಡಿ* ಎಂದು ರಘು ಸಕಲೇಶಪುರ ಅವರು ದೂರನ್ನು ನೀಡಿದ್ದಾರೆ.