ಹೆಬ್ರಿ: ಗಾಂಜಾ ಹಾಗೂ ಬೆಟ್ಟಿಂಗ್ ದಂಧೆ ಭೇದಿಸಿದ ಪೊಲೀಸರು; ಮೂವರು ಅರೆಸ್ಟ್, ನಗದು ಹಾಗೂ ಗಾಂಜಾ ವಶ!

  • 20 May 2025 05:48:40 PM


ಹೆಬ್ರಿ: ಹೆಬ್ರಿ ತಾಲೂಕಿನ ಬೆಳಂಜೆ ಗ್ರಾಮದಲ್ಲಿ ಗಾಂಜಾ ಹಾಗೂ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಮೂವರು ಯುವಕರನ್ನು ಪೊಲೀಸರ ಬಂಧಿಸಿದ್ದಾರೆ.

 

 ಗ್ರಾಮದ ತುಂಬೆಜಡ್ಡು ಎಂಬಲ್ಲಿ ಸೋಮವಾರ ರಾತ್ರಿ ನಡೆದ ದಾಳಿಯಲ್ಲಿ ಪೊಲೀಸರು ಈ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

 

ಖಚಿತ ಮಾಹಿತಿ ಮೇರೆಗೆ ಪೊಲೀಸರ ತಂಡವು ಮೋಹನ್ ದಾಸ್ ಅವರ ಮನೆಯ ಪಕ್ಕದಲ್ಲಿರುವ ಕಟ್ಟಡದ ಮೇಲೆ ದಾಳಿ ನಡೆಸಿದಾಗ ತೇಜಸ್, ಪ್ರಜ್ವಲ್ ಹಾಗೂ ಪ್ರವೀಣ್ ಎಂಬವರನ್ನು ಗಾಂಜಾ ಮಾರಾಟ ಹಾಗೂ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ.

 

 

ಸ್ಥಳದಲ್ಲಿಂದ ಪೊಲೀಸರು ರೂ. 89,000 ನಗದು, ಎಂಟು ಮೊಬೈಲ್‌ಗಳು, ಏಳು ಎಟಿಎಂ ಕಾರ್ಡ್‌ಗಳು, ಮೂರು ಸಿಮ್‌ ಕಾರ್ಡ್‌ಗಳು, ಎರಡು ನೋಟು ಪುಸ್ತಕಗಳು ಹಾಗೂ 21 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

 

 ಈ ಸಂಬಂಧ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.