ಧರ್ಮಸ್ಥಳ: ಪಂಜಾಬ್‌ನ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯಲ್ಲಿ ಧರ್ಮಸ್ಥಳದ ಮೂಲದ ಏರೋಸ್ಪೇಸ್ ಎಂಜಿನಿಯರ್ ಆಕಾಂಕ್ಷ ಎಸ್ ನಾಯರ್ (22) ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಇದೀಗ ಭಾರಿ ಚರ್ಚೆಗೆ ಕಾರಣವನ್ನುಂಟು ಮಾಡಿದೆ. ಇದೀಗ ಆ ಪ್ರಕರಣದಲ್ಲಿ ಹೊಸ ತಿರುವು ಕೂಡ ಸಂಭವಿಸಿದೆ.
ಈ ಪ್ರಕರಣದಲ್ಲಿ ಪ್ರಾಧ್ಯಾಪಕ ಬಿಜಿಲ್ ಮ್ಯಾಥ್ಯೂ (45) ಅವರನ್ನು ಜಲಂಧರ್ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈಗ ದೊರೆತ ಮಾಹಿತಿಯ ಪ್ರಕಾರ
ಆಕಾಂಕ್ಷ ಮತ್ತು ಮ್ಯಾಥ್ಯೂ ನಡುವೆ ಪ್ರೇಮ ಸಂಬಂಧವಿದ್ದು, ಆಕಾಂಕ್ಷ ಅವರು ಮ್ಯಾಥ್ಯೂ ಅವರ ಮನೆಗೆ ತೆರಳಿ ಮದುವೆಯ ಒತ್ತಾಯ ಮಾಡಿದ್ದಾಗಿ ತಿಳಿದುಬಂದಿದೆ. ಮ್ಯಾಥ್ಯೂ ಮದುವೆಯಾಗಿ ಎರಡು ಮಕ್ಕಳ ತಂದೆಯಾಗಿರುತ್ತಾನೆ.
ಮೇ 16ರಂದು ಶೈಕ್ಷಣಿಕ ದಾಖಲೆಗಳಿಗಾಗಿ ಪಂಜಾಬ್‌ಗೆ ಬಂದಿದ್ದ ಆಕಾಂಕ್ಷ, ಯೂನಿವರ್ಸಿಟಿಯ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ದೆಹಲಿಯ ಸ್ಪೈಸ್‌ಜೆಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆಕಾಂಕ್ಷ, ಮುಂದಿನ ತರಬೇತಿಗಾಗಿ ಜರ್ಮನಿಗೆ ಹೋಗಲು ತಯಾರಿ ನಡೆಸುತ್ತಿದ್ದು ಅದರ ಸಂಬಂಧಿತ ಶೈಕ್ಷಣಿಕ ದಾಖಲೆಗಳಿಗಾಗಿ ಯೂನಿವರ್ಸಿಟಿ ಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದು ಈ ನಿಗೂಢ ಸಾವಿನ ಕುರಿತಾಗಿ ರಾಜ್ಯದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.