ಕೇರಳದ ವಿಷ ಪದಾರ್ಥ ಕೊಡಗಿನಲ್ಲಿ ??? ಆಹಾರ ಸುರಕ್ಷತಾ ಅಧಿಕಾರಿಗಳಿಂದ ಮಿಂಚಿನ ದಾಳಿ???? ಸತ್ಯ ವಿಷಯವೇನು?????

  • 10 Nov 2024 04:32:45 PM

ಕೊಡಗು (ನ.9) : ಬಾಯಿಗೆ  ಅಂತೂ ರುಚಿ ರುಚಿಯಾಗಿ ಇರುತ್ತೆ, ಇವುಗಳನ್ನು ತಿನ್ನುತ್ತಾನೆ ಇರಬೇಕು ಎಂಬ ಹಂಬಲ.....ಇಷ್ಟಪಟ್ಟು ಈ ತಿಂಡಿ ತಿನಿಸುಗಳ ತಿಂದರೆ ಮಾರಣಾಂತಿಕ ಕಾಯಿಲೆಗಳು ಬರುತ್ತೆ ಜಾಗ್ರತೆ ....ಅಂತಹ ತಿಂಡಿ ತಿನಿಸುಗಳ ( ಪಾಲಕ್ ಮುರುಕ್, ಚಕ್ಕುಲಿ, ಕೋಡುಬಳೆ, ಚಿಪ್ಸ್, ಜಾಮೂನು, ಹಲ್ವಾ, ಕಡ್ಲೆಬರ್ಫಿ, ಡ್ರೈಕಿವಿ ಫ್ರೂಟ್ಸ್, ಖಾರ ಮಿಕ್ಸ್ಚರ್)  ಅವುಗಳು ಎಷ್ಟೊಂದು ಡೇಂಜರ್ ಎನ್ನುವುದನ್ನು ನೀವು ಕೇಳಿದ್ರೆ  ನಿಮಗೆ  ಅಚ್ಚರಿ ಆಗುತ್ತೆ ಅದರೊಂದಿಗೆ ಆತಂಕವುಂಟುಮಾಡುತ್ತದೆ

 


 ಇದು ನಿಜವೇ? ???ಹೌದು ಅಂತಹ ಅಪಾಯ ತಿಂಡಿ ತಿನಿಸುಗಳು ಬರುವುದು ನಮ್ಮ ಪಕ್ಕದ ಕೇರಳ ರಾಜ್ಯದಿಂದ. ಕೊಡಗು ಜಿಲ್ಲೆಗೆ ಹೊಂದಿಕೊಂಡಂತೆ ಇರುವ ಕೇರಳದಲ್ಲಿ ತಯಾರಾಗುತ್ತಿರುವ 90ಕ್ಕೂ ಅಧಿಕ  ತಿಂಡಿ ತಿನಿಸುಗಳು ಕೊಡಗಿನಲ್ಲಿ ಮಾರಾಟವಾಗುತ್ತವೆ. ಅವುಗಳಲ್ಲಿ 30ಕ್ಕಿಂತ ಜಾಸ್ತಿ ತಿಂಡಿ ತಿನಿಸುಗಳು ಅತ್ಯಂತ ಅಪಾಯಕಾರಿಯಾಗಿವೆ ಎನ್ನುವುದು ಆಹಾರ ಸುರಕ್ಷಿತ ಅಂಕಿತ ಅಧಿಕಾರಿಗಳು ನಡೆಸಿದ ಪ್ರಯೋಗಾಲಯದ ಪರಿಶೀಲನೆಯಲ್ಲಿ ದೃಢಪಟ್ಟಿದೆ. 

 

 ಕೇರಳದಿಂದ ಬರುತ್ತಿರುವ ಕರಿದ ಮತ್ತು ಇತರೆ ತಿಂಡಿ ತಿನಿಸುಗಳ ಮೇಲೆ ಅನುಮಾನ ಮೂಡಿದ್ದರಿಂದ ಕೊಡಗಿನ ಆಹಾರ ಸುರಕ್ಷತಾ ಅಂಕಿತಾ ಅಧಿಕಾರಿಗಳು ಕೊಡಗು ಕೇರಳ ಗಡಿಭಾಗವಾದ ಮಾಕುಟ್ಟದಲ್ಲಿ ಸಡನ್ ರೈಡ್ ಮಾಡಿ ಕೇರಳದಿಂದ ಬರುತ್ತಿದ್ದ ವಾಹನಗಳಿಂದ 90 ರೀತಿಯ ತಿನಿಸುಗಳ ಸ್ಯಾಂಪಲ್ಸ್ ಸಂಗ್ರಹಿಸಿ ಬೆಂಗಳೂರಿನ ಲ್ಯಾಬ್ ಗೆ ಕಳುಹಿಸಿದ್ದರು. ಆ 90 ತಿನಿಸುಗಳ ಪೈಕಿ 31 ತಿನಿಸುಗಳಲ್ಲಿ ವಿಷಕಾರಿ ಬಣ್ಣಗಳ ಬಳಸಿರುವುದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ

 

ಬಾಳೆಹಣ್ಣು ಚಿಪ್ಸ್, ಜಾಮೂನು, ಚಕ್ಕುಲಿ ಹಲ್ವಾ,. ಬಾಳೆಹಣ್ಣು ಚಿಪ್ಸ್ ನಲ್ಲಿ ಸನ್ಸೆಟ್ ಯೆಲ್ಲೋ ಎಂಬ ವಿಷಕಾರಿ ಬಣ್ಣವನ್ನು ಎತ್ತೇಚ್ಛವಾಗಿ ಬಳಕೆ ಮಾಡಲಾಗಿದ್ದು ಇದು ಅಪಾಯಕಾರಿ ಕ್ಯಾನ್ಸರ್ ತರುತ್ತದೆ ಎನ್ನುವುದು ಬಯಲಾಗಿದೆ. ಅಷ್ಟಕ್ಕೂ ಈ ಬಣ್ಣಗಳನ್ನು ಬಳಸುತ್ತಿರುವುದು ಈ ತಿನಿಸುಗಳು ಬಣ್ಣ ಬಣ್ಣಗಳಿಂದ ಆಕರ್ಷಿತವಾಗಿರಲಿ ಎನ್ನುವುದಕ್ಕೆ. ತಮ್ಮ ಮಾರಾಟಕ್ಕೆ ಆಕರ್ಷಕವಾಗಿರಲಿ ಎಂದು ಈ ಬಣ್ಣಗಳನ್ನು ಬಳಸಿ ತಯಾರು ಮಾಡಲಾಗುತ್ತಿದೆ. ಇಂತಹ ತಿನಿಸುಗಳನ್ನು ಕೇರಳದಿಂದ ಕೊಡಗು ಮತ್ತು ಮೈಸೂರು, ಮಂಗಳೂರು ಹಾಗೂ ಹಾಸನ ಜಿಲ್ಲೆಗಳಿಗೆ ಸಾಗಿಸಿ ಮಾರಾಟ ಮಾಡಿ ಒಂದ್ ಸಾಮಾನ್ಯ ಜನರಿಗೆ ವಂಚನೆ ಮಾಡುತಿದ್ದಾರೆ. 

 

ದಿನ ನಿತ್ಯ ಹತ್ತಾರು ಲೋಡ್ ಆಹಾರ ಪದಾರ್ಥಗಳನ್ನು ಕೊಡಗಿನ ವಿರಾಜಪೇಟೆ, ಪೊನ್ನಂಪೇಟೆ ಗೋಣಿಕೊಪ್ಪ ಮುಂತಾದೆಡೆ ಮಾರಾಟ ಮಾಡಲಾಗುತ್ತಿದೆ.  ಅದರಲ್ಲೂ ಈ ಜಿಲ್ಲೆಗಳ ರೈಲ್ವೇ ನಿಲ್ದಾಣಗಳಲ್ಲಿ ಅತ್ಯಂತ ಕಡಿಮೆ ಬೆಲೆಗೆ ಅತೀ ಹೆಚ್ಚು ಮಾರಾಟ ಮಾಡಲಾಗುತ್ತಿದೆ. ವಿಷಕಾರಿಯುಕ್ತ ಆಹಾರ ಪದಾರ್ಥಗಳ ಕರ್ನಾಟಕಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೇರಳದ ಅಧಿಕಾರಿಗಳಿಗೆ ಎರಡು ಮೂರು ಬಾರಿ ಪತ್ರ ಬರೆದರೂ ಅಲ್ಲಿನ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಕೊಡಗು ಜಿಲ್ಲೆಯ ಅಧಿಕಾರಿಗಳೇ ಗಡಿಯಲ್ಲಿ ಸ್ವತಃ ತಾವೇ ರೈಡ್ ಮಾಡಿದ್ದಾರೆ. 

 

ಈ ತಿಂಡಿ ತಿನಿಸುಗಳ ಮೇಲೆ ಯಾರು ತಯಾರಕರು  ಹೇಗೆ ತಯಾರು ಮಾಡುವುದು ಎಲ್ಲಿ ತಯಾರು ಆಗುವುದು, ಯಾವಾಗ ಇದರ ಡೇಟ್ ಮುಗಿಯುತ್ತದೆ ಎನ್ನುವ ಯಾವ ಮಾಹಿತಿಯೂ ಇರುವುದರಿಲ್ಲ. ಇಂತಹ ತಿಂಡಿ ತಿನಿಸುಗಳ ಮಾರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಅನಿಲ್ ಧವನ್ ಎಚ್ಚರಿಕೆ ನೀಡಿದ್ದಾರೆ.