ರಿಪಬ್ಲಿಕ್ ಹಿಂದೂ:- ರಾಜ್ಯಸರ್ಕಾರ ಮನ ಬಂದಂತೆ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ತಾವು ಮಾಡಿದ್ದೇ ಆಟ ಎಂಬಂತಾಗಿದೆ. ಹಿಂದೂಗಳನ್ನು ಮೂಲೆಗುಂಪು ಮಾಡಲಾಗುತ್ತಿದೆ. ಕಾನೂನು ವ್ಯವಸ್ಥೆಯಲ್ಲಿ ಕೂಡಾ ಕೇವಲ ಹಿಂದೂಗಳನ್ನೇ ಟಾರ್ಗೆಟ್ ಮಾಡಲಾಗುತ್ತಿದೆ. ಈ ಹಿನ್ನೆಲೆ ವಿನಾ ಕಾರಣ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಸಿದ್ರೆ ಮಾತ್ರ ಯಾವ ಹೋರಾಟಕ್ಕೂ ಸಿದ್ಧ, ಏನು ಮಾಡಲೂ ಸಿದ್ಧ ಎಂದು ವಿಧಾನಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ ಹೇಳಿದರು.
ಪೊಲೀಸರ ಮಾನಸಿಕ ಹಿಂಸೆ ಸಹಿಸಲು ಸಾಧ್ಯವಿಲ್ಲ-ಕಿಶೋರ್
ಉಡುಪಿಯಲ್ಲಿ ಹಿಂದೂ ಜಾಗರಣ ವೇದಿಕೆಯ ನಾಯಕರ ಮೇಲೆ ಸುಮೊಟೋ ಕೇಸ್ ದಾಖಲಿಸಿರುವುದರ ವಿರುದ್ಧ ಮಾತನಾಡಿದ ಕಿಶೋರ್ ಕುಮಾರ್ `ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಕೈಗೆತ್ತಿಕೊಂಡ ಬಳಿಕ ಇವರು ಮಾಡುತ್ತಿರುವ ರಾಜಕೀಯದ ಬಗ್ಗೆ ಕೇಳುವವರು ಯಾರೂ ಇಲ್ಲ. ಸುಖಾಸುಮ್ಮನೆ ಹಿಂದೂ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ, ಗಡೀಪಾರು ಕೇಸ್, ಇಲ್ಲ ಸಲ್ಲದ ಕೇಸ್ ದಾಖಲಿಸಲಾಗುತ್ತಿದೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.
ರಾಜ್ಯದಲ್ಲಿ ತುಘಲಕ್ ಮಾದರಿಯ ಆಡಳಿತ ಜಾರಿ...
ಕಾಂಗ್ರೆಸ್ ಸಂವಿಧಾನ ಪ್ರಜೆಗಳಿಗೆ ನೀಡಿರುವ ಹಕ್ಕನ್ನು ಕೂಡಾ ಕಸಿದುಕೊಳ್ಳುತ್ತಿದೆ. ಕಾನೂನು ವ್ಯವಸ್ಥೆ ಕಾಪಾಡುವ ಪೊಲೀಸ್ ಇಲಾಖೆ ಇವರ ಕೈಗೊಂಬೆಯಾಗಿದೆ. ಸಂಘ ಪರಿವಾರದ ಕಾರ್ಯಕರ್ತರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ. ಇನ್ನು ಮುಂದೆಯೂ ಇದೇ ರೀತಿ ಮುಂದುವರೆದರೆ ನಾವು ಯಾವ ಹೋರಾಟಕ್ಕೂ ಸಿದ್ಧರಿದ್ದೇವೆ. ಮತ್ತು ಪೊಲೀಸ್ ಠಾಣೆಯ ಮುಂದೆಯೇ ಧರಣಿ ಕೂರೋದಂತೂ ಗ್ಯಾರಂಟಿ ಎಂದು ಖಡಕ್ ಆಗಿ ಎಚ್ಚರಿಸಿದರು.