ಮ್ಯಾಡ್ರಿಡ್ : ಫುಟ್ಬಾಲ್ ಕ್ಲಬ್‌ನ ಸ್ಟಾರ್ ಆಟಗಾರ ಡಿಯೋಗೊ ಜೋಟಾ (28) ಭೀಕರ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಉತ್ತರ ಸ್ಪೇನ್‌ನ ಝಮೊರಾ ಪ್ರಾಂತ್ಯದ ಸೆರ್ನಾಡಿಲ್ಲಾ ಬಳಿ A-52 ಹೆದ್ದಾರಿಯಲ್ಲಿ ಕಾರಿನ ಟೈರ್ ಸ್ಫೋಟದಿಂದ ಲ್ಯಾಂಬೋರ್ಘಿನಿ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಅಪಘಾತದಲ್ಲಿ ಜೋಟಾ ಅವರ ಜೊತೆಗೆ ಇದ್ದ ಅವರ ಸಹೋದರ ಆಂಡ್ರೆ ಸಿಲ್ವಾ (26) ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂಬ ಮಾಹಿತಿ ದೊರಕಿದೆ.
ಇಬ್ಬರೂ ಕಾರಿನೊಳಗೆಯೇ ಸಿಲುಕಿದ ಕಾರಣ ವಾಹನಕ್ಕೆ ಬೆಂಕಿ ಹೊತ್ತಿಕೊಂಡು ಜೀವ ಕಳೆದುಕೊಂಡಿದ್ದಾರೆ ಎಂದು ಸ್ಥಳೀಯ ಅಗ್ನಿಶಾಮಕ ದಳ ತಿಳಿಸಿದ್ದಾರೆ.
ಜೂನ್ 22ರಂದು ಪೋರ್ಟೊದಲ್ಲಿ ಜೋಟಾ, ರೂಟ್ ಕಾರ್ಡೋಸೊ ಅವರನ್ನು ವಿವಾಹವಾಗಿದ್ದರು. ಕೇವಲ ಎರಡು ವಾರಗಳ ಬಳಿಕವೇ ಈ ಘಟನೆ ನಡೆದಿರುವುದು ಅಭಿಮಾನಿಗಳಿಗೆ ಆಘಾತವನ್ನು ಉಂಟು ಮಾಡಿದೆ.
ಐಕ್ಯ ಏಕತಾ ಮತ್ತು ಪ್ರತಿಭಾವಂತ ಆಟಗಾರರ ದುರಂತ ಅಂತ್ಯಕ್ಕೆ ವಿಶ್ವದಾದ್ಯಂತದಿಂದ ಸಂತಾಪ ವ್ಯಕ್ತಪಡಿಸುತ್ತಿದೆ.