ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದ ದುರಂತದಲ್ಲಿ 11 ಅಮೂಲ್ಯ ಜೀವಗಳು ನಾಶವಾದ ಘಟನೆಗೆ ಸಂಬಂಧಿಸಿದಂತೆ ಸಿಐಡಿ ಮಹತ್ವದ ತನಿಖೆ ನಡೆಸಿದೆ.
ವರದಿ ಪ್ರಕಾರ, ವಿರಾಟ್ ಕೊಹ್ಲಿಯ ವಿಶೇಷ ಕಾರ್ಯಕ್ರಮಕ್ಕಾಗಿ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಆತುರದಲ್ಲಿ ತೀರ್ಮಾನ ತೆಗೆದುಕೊಂಡಿದ್ದು, ಈ ದುರಂತಕ್ಕೆ ಕಾರಣವೆಂದು ತಿಳಿಸಿದೆ.
ಆರ್‌ಸಿಬಿಯ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ, ಕೊಹ್ಲಿಯ ಯುಕೆಗೆ ತೆರಳುವ ಕಾರ್ಯಕ್ರಮದ ಮುನ್ನವೇ ಈ ಕಾರ್ಯಕ್ರಮ ನಡೆಯಬೇಕು ಎಂಬ ಕಡ್ಡಾಯವಾಗಿಒತ್ತಡ ಹಾಕಿದ್ದರು. ಈ ಕಾರಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಹರಿದು ಬಂದಿದ್ದರು.
ಟಿಕೆಟ್ ವಿತರಣೆಯಲ್ಲಿ ಗೊಂದಲ ಮತ್ತು ಫ್ರೀ ಟಿಕೆಟ್ ಘೋಷಣೆ ಹಾಗೆಯೇ ಸಾಮಾಜಿಕ ಜಾಲತಾಣದ ಪ್ರಚಾರದಿಂದ ಜನಸಂಖ್ಯೆ ಹೆಚ್ಚಾಯಿತು ಎಂದೂ ಅದಲ್ಲದೆ ಈ ವೇಳೆಯಲ್ಲಿ ಗೇಟ್‌ಗಳ ಬಳಿ ಪೊಲೀಸರ ಸಿಬ್ಬಂದಿಗೆ ಸ್ಪಷ್ಟ ಸೂಚನೆಗಳ ಕೊರತೆ ಮತ್ತು ಬಂದೋಬಸ್ತ್ ವೈಫಲ್ಯ ಇವೆಲ್ಲ ಈ ದುರ್ಘಟನೆಗೆ ಕಾರಣವಾಯಿತು ಎಂಬುದಾಗಿ ಹೇಳಿದ್ದಾರೆ.
ಸಿಐಡಿ ಇದೀಗ ಅಂತಿಮ ವರದಿಯನ್ನು ಕೋರ್ಟ್‌ಗೆ ಸಲ್ಲಿಸಲು ಸಿದ್ಧತೆ ನಡೆಸುತ್ತಿದೆ.