ವಿರಾಟ್ ಕೊಹ್ಲಿಯ ಸೋದರಳಿಯ ಆರ್ಯವೀರ್ ಕೊಹ್ಲಿ ಡಿಪಿಎಲ್ 2025ರಲ್ಲಿ ಸೌತ್ ದಿಲ್ಲಿ ಸೂಪರ್ ಸ್ಟಾರ್ಸ್ ತಂಡಕ್ಕೆ ಆಯ್ಕೆ!

  • 07 Jul 2025 03:19:03 PM


ದೆಹಲಿ: ವಿರಾಟ್ ಕೊಹ್ಲಿಯ ಸೋದರಳಿಯನಾದ ಆರ್ಯವೀರ್ ಕೊಹ್ಲಿ, ಇದೀಗ ಕ್ರಿಕೆಟ್ ಲೋಕದಲ್ಲಿ ತಮ್ಮ ಹೆಜ್ಜೆ ಇಡುತ್ತಿದ್ದಾರೆ. 

 

ವಿರಾಟ್ ಅವರ ಹಿರಿಯ ಸಹೋದರ ವಿಕಾಸ್ ಕೊಹ್ಲಿಯವರ ಪುತ್ರನಾದ ಆರ್ಯವೀರ್, ದೆಹಲಿ ಪ್ರೀಮಿಯರ್ ಲೀಗ್ (DPL) 2025ರ ಹರಾಜಿನಲ್ಲಿ ಸೌತ್ ದಿಲ್ಲಿ ಸೂಪರ್ ಸ್ಟಾರ್ಸ್ ತಂಡದಿಂದ ಖರೀದಿ ಯಾಗಿದ್ದಾರೆ.

 

15 ವರ್ಷದ ಆರ್ಯವೀರ್, ಡಿಪಿಎಲ್ ಹರಾಜಿಗೆ ಹೆಸರು ನೊಂದಾಯಿಸಿಕೊಂಡಿದ್ದ ಅವರು, ಎಲ್ಲರ ಗಮನ ಸೆಳೆದಿದ್ದರು.

 

 ಬ್ಯಾಟಿಂಗ್ ಶೈಲಿ ಹೊಂದಿರುವ ವಿರಾಟ್‌ ಕೊಹ್ಲಿಗೆ ಭಿನ್ನವಾಗಿ, ಆರ್ಯವೀರ್ ಲೆಗ್ ಸ್ಪಿನ್ನರ್ ಆಗಿದ್ದಾರೆ. 

 

ಅವರು ಪಶ್ಚಿಮ ದೆಹಲಿಯ ಕ್ರಿಕೆಟ್ ಅಕಾಡೆಮಿಯಲ್ಲಿ ವಿರಾಟ್ ಅವರ ಹಳೆಯ ಕೋಚ್ ರಾಜ್ ಕುಮಾರ್ ಶರ್ಮಾ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

 

ಈ ಹಿಂದೆ ಅವರು ದೆಹಲಿ ಅಂಡರ್-16 ತಂಡವನ್ನು ಪ್ರತಿನಿಧಿಸಿದ್ದು, ಅಲ್ಲಿಯೂ ಉತ್ತಮ ಸ್ಪಿನ್ ಬೌಲಿಂಗ್ ಪ್ರದರ್ಶನದಿಂದ ಗಮನ ಸೆಳೆದಿದ್ದರು. 

 

ಈಗ ಅವರು ಡಿಪಿಎಲ್ ಸೀಸನ್-2ರಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಿದ್ಧರಾಗಿದ್ದಾರೆ.