ಐಸಿಸಿ ನೂತನ ಸಿಇಒ ಆಗಿಸಂಜೋಗ್ ಗುಪ್ತಾ ನೇಮಕ

  • 08 Jul 2025 02:10:16 PM


ಮುಂಬೈ: ಜಿಯೋಸ್ಟಾರ್‌ನ ಸಿಇಒ ಆಗಿ ಸೇವೆ ಸಲ್ಲಿಸುತ್ತಿದ್ದ ಸಂಜೋಗ್ ಗುಪ್ತಾ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ನ ನೂತನ CEo ಆಗಿ ನೇಮಿಸಲಾಗಿದೆ. 

 

ಜಯ್ ಶಾ ನೇತೃತ್ವದ ಐಸಿಸಿ ಅಧ್ಯಕ್ಷರ ಅನುಮೋದನೆಯೊಂದಿಗೆ, ಅವರು ತಕ್ಷಣದಿಂದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. 

 

25 ದೇಶಗಳಿಂದ 2,500 ಕ್ಕೂ ಹೆಚ್ಚು ಅರ್ಜಿಗಳಲ್ಲಿ 12 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿತ್ತು.

 

ಗುಪ್ತಾ ಅವರು ಪತ್ರಕರ್ತರಾಗಿ ವೃತ್ತಿ ಪ್ರಾರಂಭಿಸಿದರು. 2010ರಲ್ಲಿ ಸ್ಟಾರ್ ಇಂಡಿಯಾ ಸೇರಿದರು. ಡಿಸ್ನಿ ಮತ್ತು ಸ್ಟಾರ್ ಇಂಡಿಯಾದಲ್ಲಿ ಕ್ರೀಡಾ ವಿಭಾಗದ ಮುಖ್ಯಸ್ಥರಾಗಿದ್ದು, 2024 ರ ನವೆಂಬರ್‌ನಲ್ಲಿ ಜಿಯೋಸ್ಟಾರ್ ಸ್ಪೋರ್ಟ್ಸ್‌ನ ಸಿಇಒ ಆಗಿ ನೇಮಕಗೊಂಡಿದ್ದರು.

 

 ಇದೀಗ ಐಸಿಸಿ ನೇತೃತ್ವದ ಪ್ರಮುಖ ಹುದ್ದೆಗೆ ಅವರನ್ನು ಆಯ್ಕೆ ಮಾಡಲಾಗಿದೆ.