ನಿಮ್ಮ ಮನೆಯಲ್ಲಿ ಕಾಲೇಜು, ನರ್ಸಿಂಗ್, ಹೋಟೆಲ್ ಮ್ಯಾನೆಜ್ಮೆಂಟ್ ಹೀಗೆ ಓದುವ ಗಂಡುಮಕ್ಕಳು ಹೆಣ್ಮಕ್ಕಳು ಇದ್ದರೆ ಅವರ ಮೇಲೊಂದು ಕಣ್ಣಿಡಿ

  • 19 Nov 2024 03:10:18 PM

ಮಕ್ಕಳು ಮತ್ತು ಯುವಕರು ಡ್ರಗ್ಸ್ ಗೆ ಶರಣಾಗುತ್ತಿದ್ದಾರೆ. ಅಫೀಮು ಗಾಂಜಾ ಆರ್.ಡಿ.ಎಕ್ಸ್ ನಂತಹ ಮಾಧಕದ್ರವ್ಯಗಳ ದಾಸರಾಗುತ್ತಿದ್ದಾರೆ. ನಮ್ಮ ಮನೆಯಿಂದ ಹೊರಡುವ ನಮ್ಮ ಮಕ್ಕಳು ಚೆನ್ನಾಗಿರಲಿ ನಾವು ಕಷ್ಟ  ಅನುಭವಿಸಿದ್ದೇವೆ ಮಕ್ಕಳು ಸುಖವಾಗಿರಲಿ ಎನ್ನುವ ಅತಿಯಾದ ಬಾವುಕತೆಯಿಂದ ಸಾಕುತ್ತೇವೆ. ಅವರ ಮೇಲೆ ಯಾವತ್ತೂ ಒಂದು ಕಣ್ಣಿಟ್ಟಿರಿ ಯಾಕೆಂದರೆ, ಮಕ್ಕಳು ಕೆಲವು ವಿಷಯಗಳಲ್ಲಿ ಅರಿವಿಲ್ಲದೇ ಡ್ರಗ್ಸ್ ಗೆ ದಾಸರಾಗುತ್ತಿದ್ದಾರೆ ಎಚ್ಚರವಿರಲಿ.

ಓದು ತಲೆಗೆ ಹತ್ತದ ಸಾವಿರ ಆಲೋಚನೆಗಳು, ಓದುವ ಕಾಲದ ಲವ್, ಮನೆಯಲ್ಲಿನ ವಾತಾವರಣ, ಇವುಗಳೆಲ್ಲದರಿಂದ ಮುಕ್ತಿ ಹುಡುಕುವ ಮನಸ್ಸುಗಳಿಗೆ ಡ್ರಗ್ಸ್ ಮಾಧಕ ದ್ರವ್ಯದ ನಶೆ ಈ ಲೋಕದ ಜಂಜಾಟದಿಂದ ಮುಕ್ತಿ ಸಿಗುವುದೆಂಬ ಭ್ರಮೆಯಲ್ಲಿ ನಶೆಯಲ್ಲಿ  ತೇಲಾಡಲು ಪ್ರಯತ್ನಿಸುತ್ತಾರೆ.

ಅತಿಯಾದ ಮಾಧಕ ದ್ರವ್ಯ ತಂಬಾಕು ಸಾರಾಯಿ ಇವೆಲ್ಲವೂ ಮನುಷ್ಯರನ್ನು ನಪುಸಂಕರನ್ನಾಗಿಸುವುದಲ್ಲದೆ ನರಗಳ ದೌರ್ಬಲ್ಯ ಧಾಂಪತ್ಯ ಗಲಭೆ,  ಮಾನಸಿಕ ವಿಭ್ರಾಂತಿ ಆತ್ಮಹತ್ಯಾ ಯೋಚನೆ, ಇಂತಹ ಸಮಸ್ಯೆಗಳು ಬಂದು ಹುಟ್ಟಿಸಿದ  ಮನೆಗೆ ಮಕ್ಕಳ ಉಪಯೋಗವೂ ಇಲ್ಲ ದೇಶಕ್ಕೆ ಊರಿಗೆ ಮಾರಿಯಾಗುವ ಸಂಭವವೇ ಹೆಚ್ಚು.

ಮಕ್ಕಳಿಗೆ ಚಾಕ್ಲೆಟ್ ಗಿಂತಲೂ ಸುಲಭವಾಗಿ ಸಿಗುವ ಮಾಧಕದ್ರವ್ಯಗಳನ್ನು ಸರಬರಾಜು ಮಾಡುವ ಉದ್ದೇಶಕ್ಕೇ ಇತರ ರಾಜ್ಯಗಳಿಂದ ಕರ್ನಾಟಕದಲ್ಲಿ ಬಂದು ಕಲಿತು ಒಡನಾಟ‌ ಮಾಡಿಕೊಂಡು ಗೆಳೆಯರನ್ನಾಗಿಸಿಕೊಂಡು ಹುಡುಗಿ ಹುಡುಗ ಎಂಬ ಬೇದಭಾವವಿಲ್ಲದೆ ನಷೆಯ ಮದವೇರಿಸಿ ತಮಗೆ ಬೇಕಾದಂತೆ ಬಳಸಿಕೊಂಡು ಕಾಮತೃಷೆಗೆ ಬಳಸುವ ಮತ್ತು ಇದೇ ವೀಡಿಯೋವನ್ನು ಬಳಸಿ‌ ಜೀವನ ಪೂರ್ತಿ ಬ್ಲ್ಯಾಕ್ ಮೈಲ್ ಮಾಡಿಸಲೆಂದೇ ಪಳಗಿದ ದೇಶದ್ರೋಹಿ ಸಂಘಟನೆಗಳೂ ಇದರ ಹಿಂದಿವೆ.

ಪಾಕಿಸ್ತಾನ ಬಾಂಗ್ಲಾ ನೈಜೀರಿಯಾಗಳಿಂದ ಕಳ್ಳದಾರಿಗಳ ಮೂಲಕ ತರಿಸಿ ಅದನ್ನು ಮಾರ್ಕೆಟಿಂಗ್ ಮಾಡಲೆಂದು ಕೇರಳ ಮೂಲದ ಹುಡುಗರನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ.ರಾತ್ರಿ ಹೊತ್ತು ಊಟದ ನೆಪದಲ್ಲಿ ಅಥವಾ ಮಧ್ಯಾಹ್ನ ಜ್ಯೂಸ್ ಚಹಾ ನೆಪದಲ್ಲಿ ಸಲುಗೆ ಬೆಳೆಸುವ ಅನ್ಯ ಊರುಗಳ ಗೆಳೆಯರು ನಿಮ್ಮ ಜೀವನಕ್ಕೆ ಮುಳ್ಳಾಗಿಬಿಡುತ್ತಾರೆ ಎಚ್ಚರವಿರಲಿ.

ಮಕ್ಕಳ ಫೋನ್ ಮೆಸೇಜ್ ಚೆಕ್ ಮಾಡಿ ಮಾತನಾಡುವುದನ್ನು ಕದ್ದಾಲಿಸುವುದು

 ಬೈಕ್ ಗಾಡಿಗಳನ್ನು ಚೆಕ್ ಮಾಡುವುದು,ಷೂ, ಚೆಕ್ ಮಾಡುವುದು.
 ಕರ್ಚೀಫ್ ಗಳ ವಾಸನೆಯನ್ನು ಗಮನಿಸುವುದು, ಅನಗತ್ಯ ನೆಪ ಹೇಳಿ ಮನೆಯಿಂದ ಹೊರಹೋಗುವಾಗ ಫೊಲೋ ಮಾಡುವುದು.
ವಿಪರೀತ ಆಲೋಚನೆ ಮಾಡುತ್ತಿರುವರೇ? ಗೊಂದಲದಲ್ಲಿರುವರೇ? ಎಂಬುದನ್ನು ಗಮನಿಸುವುದು,ಅವರ ಗೆಳೆಯರನ್ನು ಮನೆಗೆ ಕರೆದು ಪರಿಚಯ ಮಾಡಿಕೊಳ್ಳುವುದು ಮಾಡಿಕೊಳ್ಳುವುದನ್ನೂ ಮರೆಯಬೇಡಿ.

*ನನ್ನ ಮಕ್ಕಳು ಅಂತಹವರಲ್ಲ ಎಂದು ಖಾತರಿಪಡಿಸಿಕೊಳ್ಳುವುದು ಪೋಷಕರ ಹೊಣೆಯಾಗಿರುತ್ತದೆ.ಸಂಶಯವಿದ್ದಲ್ಲಿ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ*

ದಯಾ ಆಕಾಶ್ ಕಾಸರಗೋಡು