ವಿಶ್ವ ಕುಟುಂಬ ದಿನ --- ಜೀವನದ ಸಾರ್ಥಕತೆಯನ್ನು ಎತ್ತಿ ತೋರಿಸುವ ಪರಿಕಲ್ಪನೆ.
ಕುಟುಂಬ ಎನ್ನುವುದು ನಮ್ಮ. ಸಮಾಜದ ಅವಿಭಾಜ್ಯ ಅಂಗ.ಮನುಷ್ಯ ಹುಟ್ಟುವುದಕ್ಕಿಂತ ಮುಂಚೆಯೇ ಕುಟುಂಬ ಮನುಷ್ಯನ. ಜೀವನದಲ್ಲಿ ಬಂದು ಕುಳಿತಿರುತ್ತದೆ. ವಿಶ್ವದಲ್ಲಿ ಮೂರು ವಸ್ತುಗಳು ಅತ್ಯಮೂಲ್ಯವೆಂದು ಪರಿಗಣಿಸಲ್ಪಟ್ಟಿವೆ. ಅಮೆರಿಕದ ಡಾಲರ್, ಚೈನಾ ಡಿಶ್ ಮತ್ತು ಭಾರತೀಯ ಕುಟುಂಬ ವ್ಯವಸ್ಥೆ.
ಕುಟುಂಬ ಎನ್ನುವುದು ಮನುಷ್ಯನನ್ನು ಮತ್ತು ಅವನ ವ್ಯಕ್ತಿತ್ವವನ್ನು ರೂಪಿಸಲಿಕ್ಕೆಂದು ಹುಟ್ಟಿರುವ ಒಂದು ಸಮಾಜದ ಘಟಕ.
""ಕುಟುಂಬ"" ಎನ್ನುವುದು ನಮ್ಮ ದೇಶದಲ್ಲಿ ಅಷ್ಟೇ ಅಲ್ಲ, ಪಾಶ್ಯಾತ್ಯ ದೇಶಗಳಲ್ಲಿಯೂ ಕೂಡ ಕಂಡು ಬರುವ ಒಂದು ವ್ಯವಸ್ಥೆ, . ನಾಗರಿಕ ಪ್ರಜ್ಞೆ ಇಲ್ಲದ ದೇಶಗಳಲ್ಲಿಯೂ ಕೂಡ ಕುಟುಂಬ ವ್ಯವಸ್ಥೆ ತನ್ನ ಬೇರುಗಳನ್ನು ಚಾಚಿ ನಿಂತಿದೆ,.
ಮನುಷ್ಯ. ಶಿಲಾಯುಗ ಮುಗಿದ ಮೇಲೆ ಒಂದು ಕಡೆ ನೆಲೆಯೂರಿ ನಿಂತಾಗ ಹುಟ್ಟಿದ್ದೇ ಈ ಕುಟುಂಬ ವ್ಯವಸ್ಥೆ.
ವಿವಾಹ ಎಂಬ ಚೌಕಟ್ಟಿನ ನಂತರ ದಂಪತಿಗಳಿಗಾಗಿ ಶುರುವಾದ ವ್ಯವಸ್ಥೆ ಮನುಷ್ಯನನ್ನು ಒಬ್ಬ ಪ್ರಜ್ಞಾವಂತನಾಗಿ ರೂಪಿಸಲು ಕೆಲಸ ಮಾಡುತ್ತದೆ.
ನಮ್ಮಲ್ಲಿ ಕುಟುಂಬ ವ್ಯವಸ್ಥೆಯನ್ನು ಅವಿಭಕ್ತ, ವಿಭಕ್ತ, ಮಾತೃ ಪ್ರಧಾನ, ಮತ್ತು ಪಿತೃ ಪ್ರದಾನ ಕುಟುಂಬಗಳನ್ನಾಗಿ ವಿಭಾಗಿಸಲಾಗಿದೆ. ಆದರೆ ಎಲ್ಲ ಪ್ರಕಾರದ ಕುಟುಂಬ ವ್ಯವಸ್ಥೆಗಳ. ಉದ್ದೇಶ ಒಂದೇ ಎಂದು ಹೇಳ ಬಹುದು, ಅದು ಹುಟ್ಟುವ ಮಗುವಿಗೆ ಒಂದು ಸುಭದ್ರವಾದ ತಳಪಾಯ ಮತ್ತು ಒಂದು ಸುರಕ್ಷಿತ ವ್ಯವಸ್ಥೆ.ಅಲ್ಲಿ ಮಗು ಸಭ್ಯತೆ,ಸಂಸ್ಕೃತಿ, ಭಾವನೆಗಳ ಪಾಠವನ್ನು ಕಲಿಯುತ್ತದೆ.
ಕುಟುಂಬ ವ್ಯವಸ್ಥೆಯನ್ನು ಕೇವಲ ಮನುಷ್ಯರಷ್ಟೇ ಅಲ್ಲ, ಪ್ರಾಣಿಗಳಲ್ಲಿಯೂ ನೋಡ ಬಹುದು. ಪಕ್ಷಿಗಲ್ಲಿಯೂ ಕೂಡ ಗಂಡು ಪಕ್ಷಿ,ಆಹಾರ ತಂದು ತನ್ನ,ಸಂಗಾತಿ ಮತ್ತು ಮರಿಗಳಿಗೆ ತಿನ್ನಿಸುವುದನ್ನು ನೋಡ ಬಹುದು.
ಆದರೆ ಸುಭದ್ರವಾದ ಕುಟುಂಬ ವ್ಯವಸ್ಥೆಯಲ್ಲಿಯೂ ಕೂಡ ಬಿರುಕುಗಳು ಬಂದಿರುವುದನ್ನು ನೋಡ ಬಹುದು.ಒಂದಾನೊಂದು ಕಾಲದಲ್ಲಿ ಅವಿಭಕ್ತ ಕುಟುಂಬ ವ್ಯವಸ್ಥೆಗೆ ಪ್ರಸಿದ್ಧವಾದ ಭಾರತದಲ್ಲಿ ಡೈವೋರ್ಸ್ ಎನ್ನುವುದು ಸಾಮಾನ್ಯ ವಾಗುತ್ತಿದೆ. ಗಂಡ,ಹೆಂಡತಿ ಜೊತೆಗಿದ್ದರೆ ಅದೇ ಫ್ಯಾಮಿಲಿ ಎನ್ನುವ ಜೋಕು ಎಲ್ಲ ಕಡೆ ಕೇಳಿ ಬರುತ್ತಿದೆ.
ಪಾಶ್ಚಾತ್ಯ ದೇಶಗಳ ಅಂಧಾನುಕರಣೆ ಫಲವಾಗಿ ಕುಟುಂಬ ವ್ಯವಸ್ಥೆ ಕೇಳಿ ಬರುತ್ತಿದೆ ಎಂಬ ಸೊಲ್ಲು ಕೇಳಿ ಬರುತ್ತಿದೆಯಾದರೂ,ನಮ್ಮ ಯುವ ಜನತೆ ಬರುಬರುತ್ತಾ ತಮ್ಮ ಕುಟುಂಬದ ಜೊತೆ ಅದೇ. ಆಟಾಚಮೆಂಟ್ ಬೆಳೆದಿರುವುದನ್ನು ನೋಡ ಬಹುದು.ಪ್ರತಿ ಹಬ್ಬಕ್ಕೆ ತಮ್ಮ ಊರಿಗೆ ಓಡಿ ಬರುವ,ಯುವ ಜನತೆ, ಕೋವಿಡ್ ಫಲಶ್ರುತಿಯಾಗಿ ಸಿಕ್ಕ ವರ್ಕ್ ಫ್ರಮ್ ಹೋಮ್ ಪರಿಕಲ್ಪನೆ ಜನರನ್ನು ಇನ್ನಷ್ಟು ಕುಟುಂಬಕ್ಕೆ. ಹತ್ತಿರ ವಾಗಿಸಿದೆ. ದುಬೈಗೆ ಹೋಗಿ ಸಾಕಷ್ಟು ದುಡ್ಡು ಮಾಡಿಕೊಂಡು ಬಂದು ಊರಿನಲ್ಲಿ ಮನೆಕಟ್ಟಿಸಿ ಬಂದು ಬಳಗದವರ ಜೊತೆ ಹಾಯಾಗಿ ಜೀವಿಸುವ ಕನಸು ಕಾಣುವವರಿಗೆ ಏನು ಕೊರತೆಯಿಲ್ಲ.,
ನಮ್ಮ ತಮ್ಮನಿಗೆ ಕೆಲಸ ಕೊಡಿ ಎಂದು ರೆಫರೆನ್ಸ್ ಕೇಳುವ,ತಂಗಿಗೆ ಒಂದು ಗಂಡು ನೋಡಿ ಎಂದು ಗೊತ್ತಿದ್ದ ಕಡೆಯೆಲ್ಲಾ ಕಾಂಟ್ಯಾಕ್ಟ್ಸ್ ಉಪಯೋಗಿಸಿ ಕೊಳ್ಳುವ ಯುವ ಜನತೆಯನ್ನು ನೋಡಿದಾಗಲೆಲ್ಲ ನಮ್ಮ ಕುಟುಂಬ ವ್ಯವಸ್ಥೆ ಬೇರು ಇನ್ನೂ ಜೀವಂತವಾಗಿದೆ ಅನಿಸುತ್ತದೆ.
ಬನ್ನಿ, ಕುಟುಂಬ ವ್ಯವಸ್ಥೆಯನ್ನು ಸಂಭ್ರಮಿಸಿ ಖುಷಿ ಪಡೋಣ.
ಏನಂತೀರಾ...??