ವಿಶ್ವ ಸಂಗೀತ ದಿನ

  • 21 Jun 2025 03:16:44 PM


ವಿಶ್ವ ಸಂಗೀತ ದಿನ

ಹಲೋ 

ಹೇಗಿದ್ದೀರಾ ?

ಸಂಗೀತವು ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿ ಇರುವ ಮಧುರವಾದ ಧ್ವನಿ. ಮಗುವು ಕೂಡ ಜೋಗುಳ. ಎಂಬ ಸಂಗೀತಕ್ಕೆ ಮಾರು ಹೋಗಿ ನಿದ್ದೆ ಮಾಡುತ್ತದೆ. ದನಕರುಗಳು ಕೂಡ ಸಂಗೀತಕ್ಕೆ ಮಾರು ಹೋಗಿ ಹೆಚ್ಚು ಹಾಲು ಹಿಂಡುತ್ತವೆ ಎಂಬ ಪ್ರತೀತಿ ಇದೆ.

 

ಕೃಷ್ಣನ ಕೊಳಲಿನ ಸಂಗೀತಕ್ಕೆ ಗೋವುಗಳು ಕೂಡ ಮಾರು ಹೋಗಿದ್ದವು. ಸರಿಗಮಪ ಎಂಬ ಸಪ್ತ ಸ್ವರಗಳಿಗೆ ಮಾರು ಹೋಗದವರು ಯಾರು ಇಲ್ಲ.

 

ಭಾರತೀಯ ಸಂಗೀತವನ್ನು ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ಎಂದು ಎರಡು ಭಾಗಗಳನ್ನಾಗಿ ವಿಂಗಡಿಸಿದ್ದಾರೆ.

 

ಪುರಂದರ ದಾಸರು, ತ್ಯಾಗರಾಜರು ನಮ್ಮ ಭಾರತೀಯ ಸಂಗೀತಕ್ಕೆ ತನ್ನದೇ  ಕೊಡುಗೆ ನೀಡಿದ್ದಾರೆ.

 

ವೀಣೆ, ತಬಲಾ, ಹಾರ್ಮೋನಿಯಂ. , ಕೊಳಲು ತಮ್ಮ. ಮಧುರ ಧ್ವನಿಯಿಂದ ನಮ್ಮ ಮನಸ್ಸಿಗೆ ಉಲ್ಲಾಸ ನೀಡುತ್ತವೆ.

 

ಪಾಶ್ಚಾತ್ಯ ಸಂಗೀತವು ಎಷ್ಟೇ ಅಬ್ಬರವಿದ್ದರು, ಭಾರತೀಯ ಸಂಗೀತವು ಮನಸ್ಸಿಗೆ ಆನಂದ ನೀಡುತ್ತದೆ.

 

ಬನ್ನಿ,ಸುಮಧುರವಾದ ಸಂಗೀತವನ್ನು ಆಸ್ವಾದಿಸಿ .ಏನಂತೀರಾ??...