ಜೀವನವೆಂಬ ನೌಕೆಯಲಿ
ಗುರಿಯಿಲ್ಲದೆ ಸಾಗುತ್ತಲಿರಲು ನಾನು
ಅಪರಿಚಿತ ನಡುವೆ
ಬೆದರಿದ ಹರಿಣಿಯಂತಾದೆ ನಾನು
ಅರಿಯದ ಹಾದಿಯಲಿ ಸಾಗುತ್ತಲಿರಲು
ನನ್ನ ಕೈ ಗೆ ಕೈ ಬೆಸೆದು ಬಂದವನು ನೀನ
ಪ್ರೀತಿಯೆಂಬ ಗುರಿಯ ಕಡೆಗೆ
ಜೊತೆಯಲಿ ಹೆಜ್ಜೆ ಇಟ್ಟು ಸಾಗಿಸಿದೆ ಎನ್ನನು
ನೀನಿರಲು ಜೊತೆಯಲಿ ಭಯವಿರದು ಎನಗೆ ನೀನಿರುವಾಗ ಬೇರೇನು ಬೇಕೆನಿಸದು ಎನಗೆ ಈ ಬದುಕೇ ನಿನಗಾಗಿ ಇನ್ನು...
ಇನಿಯನೇ ಈ ಬದುಕು ನಿನಗಾಗಿಯೇ.. ಇನ್ನು
ವಂದನಾ ಗಿರೀಶ್ _ ಮಂಗಳೂರು