ಮಾದಕತೆ ತುಂಬಿಹುದು ಆ ನೋಟಗಳಲಿ... ಮಾರ್ದವತೆ ತುಂಬಿಹುದು ಆ ಮಾತುಗಳಲಿ.. ಆ ನೀಲಿ ಹೂವ ಅಪ್ಸರೆಯ ಮರೆಯಲಾದೀತೇ.... ಅವಳ ಬೆಡಗನ್ನು ಈ ಕವನದೊಳು ಹಿಡಿಯಲಾದೀತೇ...
ತುಂಟಾತನದ ರಂಗನ್ನು ಹಚ್ಚಿರುವಳು ತುಟಿಗೆ... ಮುಗುಳ್ನಗೆಯು, ಹೊಸ ಮೆರಗನ್ನು ನೀಡುತಿಹುದು ಬಾಳಿಗೆ......ಮನ ಗೆಲ್ಲುವ ವಿದ್ಯೆಯು ಕರಗತವೇನೋ... ಹೃದಯಂತರದೋಳು ಅಚ್ಚಾಗಿ ಬಿಡುವಳೆನೋ...
ಮಿರ ಮಿರನೆ ಮಿಂಚುವ ಕಿನ್ನರಿ ಇವಳು.... ಸೌಂದರ್ಯದ ಮಾಧುರ್ಯದ ಒಡತಿ ಇವಳು... ನಗೆಯ ಹೊನಲನ್ನು ಹರಿಸುವ ಮುಚ್ಚು ಮರೆಯಿಲ್ಲದ ಮಾತು... ಕೇಳುಗರ ಮನದೊಳು ಉಳಿಯುದು ಅಚ್ಚ ಅಳಿಯದ ಈ ನೆನಪು....
ಹಚ್ಚ ಹಸುರದ ಹೊಲದ, ತುಂಬಿದ ತೆನೆಯಂತೆ ಬಳಕುವಳು... ಹುಚ್ಚು ಮನಸೆಂಬ ಕುದುರೆಯ ಲಗಾಮೆಳೆದು ಬಿಡುವಳು.... ಹರೆಯ ಹುಡುಗರ ಎದೆಯೊಲು ಕಿಚ್ಚಿಟ್ಟು ಬಿಡುವಳು... ಯಾರ ಕೈಗೂ ಸಿಗದ ಚಿನ್ನದ ಜಿಂಕೆ ಇವಳು...
ಕಮಲದಂತಹ ಕಣ್ಣಿಗೆ ಕಾಡಿಗೆಯ ಶೃಂಗಾರ... ಎನ್ನ ಪಾಲಿಗಿವಳು ಗೆಳತಿಎಂಬ ಬಂಗಾರ... ಕಣ್ಣಲ್ಲಿ ಕಣ್ಣಿಟ್ಟು ಕಾಯುವೆ ಈ ಕಣ್ಮಣಿಯ... ಕಾವ್ಯವೂ ಸೋತಿತು ವರ್ಣಿಸಲು ಈ ಚಿನ್ಮಯಿಯ....
ರಚನೆ :ಸುದರ್ಶನ್_ ಕಾಸರಗೋಡು