ನನ್ನೊಲವಿನ ಪ್ರೀತಿಯ ತಂಗಿ..
ಪರಿಚಯದ ಹಾದಿಯಲ್ಲಿ ಊಹಿಸದೇ ಸಿಕ್ಕ
ಸ್ವಾತಿ ಮುತ್ತು ನಿ...
ಪರದೆಯೊಳಗಿನ ಪ್ರೀತಿ ಸ್ನೇಹವೆನ್ನುವ
ಮುಸುಕಿನ ಗುದ್ದಾಟದಲ್ಲಿ...
ಪರಿಚಯಕ್ಕೆ ಹೊಸ ಭಾಷ್ಯ ಬರೆದು ನನ್ನಲ್ಲಿ
ಬೆರೆತು ಹೋದ ಅನುಪಮ ಚೈತನ್ಯ ನಿ..
ಕಳೆದುಕೊಳ್ಳಲು ಏನಿದೆ ನಿನ್ನನ್ನು
ಪಡೆದುಕೊಂಡ ಮೇಲೆ...
ಸಾವಿರ ಚಿಂತೆಯಿದ್ದರೂ ಅದೆಲ್ಲವ ಬದಿಗೊತ್ತಿ
ನಗಲು ಸಾಕು ನಿನ್ನಯ ಅಮೃತ ನೆನಪೊಂದೆ
ಮೇಘನಾ - ಪುತ್ತೂರು