ಭೂಲೋಕ ವೈಕುಂಠವೆಂದೇ ಪ್ರಸಿದ್ಧಿ ಪಡೆದಿರುವ ಗುರುವಾಯೂರಪ್ಪನ ಲೀಲಾ ಮಹಿಮೆಗಳ ಕಥೆಗಳನ್ನು ಎಷ್ಟು ಕೇಳಿದರೂ, ಹೇಳಿದರೂ ಸಾಕಾಗಲ್ಲ.ಗುರುವಾಯೂರ್ ಕ್ಷೇತ್ರಕ್ಕೆ ಸುಮಾರು 5000ವರ್ಷಕ್ಕೂ ಹೆಚ್ಚಿನ ಐತಿಹ್ಯವಿದೆ.ಅಲ್ಲಿನ ವಿಗ್ರಹಗಳಿಗೆ ಯುಗಗಳ ಹಿಂದಿನ ಚರಿತ್ರೆಇದೆ. ಸ್ವತಃ ಭಗವಾನ್ ಶ್ರೀಕೃಷ್ಣನೇ ಪೂಜಿಸಿದ ವಿಗ್ರಹವೆಂದು ಕರೆಯಲ್ಪಡುತ್ತದೆ. ಕಾರಾಗೃಹದಲ್ಲಿ ವಾಸುದೇವ ದೇವಕಿಯರಿಗೆ ಒಲಿದ ವಿಷ್ಣುವಿನ ವಿಗ್ರಹವೇ ಇಲ್ಲಿ ಪ್ರತಿಷ್ಠಾಪಿಸಲಾಗಿದೆ ಎಂಬ ನಂಬಿಕೆಗಳಿವೆ. ಈ ದೇವಸ್ಥಾನ ಕುಷ್ಠ ರೋಗ ನಿವಾರಣೆಗೂ ಖ್ಯಾತಿ ಪಡೆದಿದೆ. ಈ ಶ್ರೀಕೃಷ್ಣಾ ಕ್ಷೇತ್ರ ಸ್ಥಳ ಮಹಿಮೆಯಿಂದಲೂ, ಪ್ರತಿಷ್ಠಾ ಮಹಿಮೆಯಿಂದಲೂ, ವಿಗ್ರಹ ಮಹಿಮೆಯಿಂದಲೂ ಮಹಿಮಾತೀತ ಕಾರನಿಕ ಭೂಮಿ, ಪುಣ್ಯ ಭೂಮಿ ಅನ್ನುವುದರಲ್ಲಿ ಯಾವುದೇ ತರ್ಕವಿಲ್ಲ.
ಕ್ಷೇತ್ರದಲ್ಲಿ ಆಚಾರ ಅನುಷ್ಠಾನ ಕಾಲದ ಸುಳಿಗೆ ಸಿಲುಕದೆ ಶಿಸ್ತು ಮತ್ತು ನಿಷ್ಠೆಯಿಂದ ಅಂದಿನಿಂದ ಇಂದಿನ ವರೆಗೂ ಚಾಚು ತಪ್ಪದೆ ನಡೆದುಕೊಂಡು ಬರುತ್ತಿರುವುದು ವಿಶೇಷ. ಕ್ಷೇತ್ರಗಳ ಕಟ್ಟುನಿಟ್ಟಾದ ಕ್ರಮ ತಂತ್ರಿವರ್ಯರ ಮತ್ತು ಅರ್ಚಕರ ವೇದಮಂತ್ರ ಘೋಷಣೆ,ಪಠನೆ, ಪಾರಾಯಣ, ತಾಂತ್ರಿಕ, ವೈಧಿಕ ವಿಧಿ ವಿಧಾನಗಳು, ಉತ್ಸಾವಾದಿ ಕಾರ್ಯಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ.ವಿಶ್ವಕರ್ಮರೇ ಈ ದೇಗುಲವನ್ನು ನಿರ್ಮಿಸದರೆಂದು ಐತಿಹ್ಯವಿದೆ.ಉದಯಸ್ತದ ಸೂರ್ಯ ಕಿರಣ ವಿಗ್ರಹದ ಪಾದದ ಮೇಲೆ ಬೀಳುವ ಹಾಗೇ ಕ್ಷೇತ್ರವನ್ನು ನಿರ್ಮಿಸಲಾಗಿದೆ. ಭಗವಂತನ ಕರುಣೆಗೆ ಅರ್ಹರಾದ ಭಕ್ತರ ಬದುಕಿನ ಅನುಭವದ ಕಥೆಗಳು ಹೇಳಿ ಮುಗಿಸುವಂತದ್ದಲ್ಲ.ದೇವರ ಮೇಲೆ ನಂಬಿಕೆ ಇರುವ ಯಾವುದೇ ಮಲಯಾಳಿಗರು ದುಃಖದಲ್ಲೂ ಸುಖದಲ್ಲೂ *ಎಂಡೆ ಗುರುವಾಯೂರಪ್ಪ* ಎಂದರೆ *ನನ್ನ ಗುರುವಾಯೂರಪ್ಪ* ಅನ್ನೋದು ನೀವು ಕೇಳಿರುತ್ತೀರಿ, ನೋಡುರುತ್ತೀರಿ. ಅದರಿಂದ ನಾವು ಅರ್ಥೈಸಬೇಕು, ಭಗವಂತ ನಂಬಿದವರ ಮನಸ್ಸಲ್ಲೂ, ನಾಲಿಗೆ ತುದಿಯಲ್ಲೂ ನಿತ್ಯ ಕುಳಿತಿರುತ್ತಾನೆ ಅಂತ.
ಗುರುವಾಯೂರ್ ಕ್ಷೇತ್ರ ಉದ್ಭವಿಸಲು ಕಾರಣವಾಗಿರೋ ಒಂದು ಕತೆ ನಾರಾದ ಪುರಾಣದಲ್ಲಿ ವಿವರಿಸಲಾಗಿದೆ. ಕುರುವಂಶದ ಅಭಿಮನ್ಯುವಿನ ಪುತ್ರನಾದ ಪರೀಕ್ಷಿತ ಮಹಾರಾಜ ಮುನಿ ಶಾಪದ ನಿಮಿತ್ತ ತಕ್ಷಕನಾ ಆಕ್ರಮಣದಿಂದ ಅಸುನಿಗುತ್ತಾನೆ. ಈ ವಿಷಯ ತಿಳಿದ ಅವನ ಮಗ ಜನಮೇಜಯ ಸರ್ಪ ಯಾಗ ಮಾಡಿ ಸರ್ಪಗಳೆಲ್ಲವನ್ನು ನಾಶ ಮಾಡುತ್ತಿದ್ದಾಗ ತಕ್ಷಕನೂ ಸೆರೆ ಯಾಗುತ್ತಾನೆ ಆದ್ರೆ ತಕ್ಷಕ ಅಮೃತ ಕುಡಿದ ಸರ್ಪವಾದ ಕಾರಣ ಅವನನ್ನು ವಧಿಸುವುದು ಸಾಧ್ಯವಾಗುವುದಿಲ್ಲ.ಅದೆಷ್ಟೋ ನಿರಪರಾಧಿ ಸರ್ಪಗಳನ್ನು ಭಸ್ಮ ಮಾಡಿದ ಜನಮೇಜೆಯನ ಸರ್ಪ ಯಾಗ ಮತ್ತೂ ಮುಂದುವರಿಯುತ್ತೆ. ಇದನ್ನರಿತ ದೇವಾನು ದೇವತೆಗಳು ಗುರು ಬೃಹಸ್ಪತಿ ಅವರನ್ನ ಜನಮೇಜಯನಾ ಮನ ಪರಿವರ್ತನೆ ಮಾಡಲು ವಿನಂತಿಸುತ್ತಾರೆ. ಗುರು ಬ್ರಹಸ್ಪತಿ ನಿಮ್ಮ ಪಿತರ ಸಾವಿಗೆ ಅವರ ಕರ್ಮ ಫಲವೇ ಕಾರಣ ಹೊರತು ಸರ್ಪಗಳಲ್ಲ.
ದಯಮಾಡಿ ಸರ್ಪ ಯಾಗವನ್ನು ಕೈ ಬಿಡಿ ಎಂದು ಹೇಳಿದಾಗ ಅವರ ಮಾತನ್ನು ಜನಮೇಜಯ ಪಾಲಿಸುತ್ತಾರೆ.ಆದರೆ ಸರ್ಪಗಳನ್ನು ನಿರ್ಧಯರಾಗಿ ಕೊಂದ ಕರ್ಮಫಲವಾಗಿ ಜನಮೇಜಯರಿಗೆ ಸರ್ಪದೋಷವಾಗಿ ತೀವ್ರ ಕುಷ್ಠ ರೋಗ ಬಾಧಿಸಿತ್ತದೆ.ಚಿಕಿತ್ಸೆಗಾಗಿ ನಾನಾ ದಾರಿಗಳನ್ನು ಕಂಡುಕೊಂಡರೂ ಯಾವುದೇ ದಾರಿ ಕಾಣಿಸುವುದಿಲ್ಲ.ಕೊನೆಗೆ ಅವರ ಮುಂದೆ ಗುರು ದತ್ತಾತ್ರೇಯರು ಪ್ರತ್ಯಕ್ಷರಾಗಿ ಸರ್ಪ ಶಾಪದ ಕುಷ್ಠ ರೋಗದ ವಿಮೋಚನೆಗೆ ಗುರುವಾಯೂರ್ ಕ್ಷೇತ್ರವೇ ಪರಿಹಾರ, ಅಲ್ಲಿನ ಭಗವಾನ್ ವಿಷ್ಣುವನ್ನು ಪೂಜಿಸಿದರೆ ನಿಮ್ಮ ದೋಷ ನಿವಾರಣೆ ಆಗುವುದು ಎಂಬುವುದಾಗಿ ಉಪದೇಶವಿತ್ತರು. ಜೊತೆಗೆ ಅಲ್ಲಿನ ಸ್ಥಳ ಮಹಾತ್ಮೆಯನ್ನು ವಿವರಿಸಿದರು.ಅಂದು ಬ್ರಹ್ಮ ಕಮಲದ ನಡುವೆ ಬ್ರಹ್ಮ ದೇವರು ಸೃಷ್ಠಿ ಕಾರ್ಯದಲ್ಲಿ ನಿರತರಾಗಿದ್ದಾಗ ಮಹಾ ವಿಷ್ಣು ಅವರ ಮುಂದೆ ಪ್ರತ್ಯಕ್ಷವಾಗುತ್ತಾರೆ.
ನನಿಗೂ ನನ್ನ ಸೃಷ್ಟಿಗಳಿಗೂ ಕರ್ಮ ಬಂಧನ ಇಲ್ಲದೇ ಮೋಕ್ಷ ಮಾರ್ಗ ಸೇರಲು ಅನುಗ್ರಹಿಸಬೇಕು ಎಂಬುದಾಗಿ ಬ್ರಹ್ಮ ದೇವರು ವಿಷ್ಣುವಲ್ಲಿ ಪ್ರಾರ್ಥಿಸಿಕೊಂಡಾಗ ಭಗವಾನ್ ವಿಷ್ಣು ಒಂದು ವಿಗ್ರಹವೊಂದನ್ನು ನಿರ್ಮಿಸಿ ಬ್ರಹ್ಮ ದೇವರಿಗೆ ನೀಡುತ್ತಾರೆ.ಅವರು ವಿಷ್ಣುವಿನ ಅವತಾರದ ಮಗು ನಮ್ಮ ಬದುಕಲ್ಲಿ ಬರಬೇಕೆಂದು ನಿತ್ಯ ವಿಷ್ಣು ಕುರಿತಾಗಿ ಪೂಜಿಸುತ್ತಿದ್ದ ಸುತಪಾ ಮತ್ತು ಸೃಷ್ಠಿ ದಂಪತಿಗಳಿಗೆ ಆ ವಿಗ್ರಹವನ್ನು ನಿಷ್ಠೆಯಿಂದ ಪೂಜಿಸಿ ನಿಮ್ಮ ಮನದ ಇಚ್ಛೆ ನೆರವೆರುವುದಾಗಿ ಹೇಳುತ್ತಾರೆ. ದಂಪತಿ ಭಕ್ತಿಗೆ ಮೆಚ್ಚಿದ ಭಗವಾನ್ ಮಹಾವಿಷ್ಣು ಒಲಿದು ನಿಮ್ಮ ನಾಲ್ಕು ಜನ್ಮದಲ್ಲಿ ನಾನು ನಿಮ್ಮ ಮಗನಾಗಿ ಜನಿಸುತ್ತೇನೆ. ಆ ಸಂದರ್ಭದಲ್ಲೆಲ್ಲ ಈ ವಿಗ್ರವನ್ನು ಪೂಜಿಸುವ ಭಾಗ್ಯವೂ ನಿಮ್ಮ ಪಾಲಿಗೆ ಒದಗಿ ಬರುವುದು ಎನ್ನುವುದಾಗಿ ಹೇಳುತ್ತಾರೆ.ಆ ಮಾತಿನಂತೆ ಸತ್ಯ ಯುಗದಲಿ ಸೃಷ್ಠಿ ಸುತಾಪ ಋಷಿ ದಂಪತಿಗಳಿಗೆ ಪೃಷ್ಟಿಗರ್ಭನಾಗಿಯೂ ಅದಿತಿ ಕಶ್ಯಪರಾಗಿ ಜನ್ಮ ಪಡೆದಾಗ ವಾಮನನಾಗಿಯೂ, ತ್ರೇತಾ ಯುಗದಲ್ಲಿ ದಶರಥ ಕೌಸಲ್ಯ ಜನ್ಮ ಪಡೆದಾಗ ಶ್ರೀರಾಮನಾಗಿಯೂ,ದ್ವಾಪರದಲ್ಲಿ ವಾಸುದೇವ, ದೇವಕಿಯರಾಗಿ ಜನ್ಮ ತಳೆದಾಗ ಶ್ರೀಕೃಷ್ಣನಾಗಿಯೂ ಅವತರಿಸಿದರು.
ಈ ಜನ್ಮಗಳಲ್ಲಿ ಆ ವಿಗ್ರಹವನ್ನು ಪೂಜಿಸುವ ಪುಣ್ಯವೂ ಲಭಿಸುತ್ತೆ.ಹಾಗೆಯೇ ತನ್ನ ಮಾತಾ ಪಿತರು ಪೂಜಿಸುತ್ತಿದ್ದ ವಿಗ್ರಹವನ್ನು ಭಗವಾನ್ ಶ್ರೀಕೃಷ್ಣ ಪೂಜಿಸುತ್ತಿದ್ದರು.ಹೀಗೆ ಪೂಜಿಸುತ್ತಿರುವಾಗ ದ್ವಾಪರ ಯುಗದ ಅಂತ್ಯದಲ್ಲಿ ಗುರು ಉದ್ಧವರನ್ನು ಕರೆಸಿ ಇಂದಿನಿಂದ ಏಳು ದಿನದಾ ನಂತರ ದ್ವಾಪರ ಜಲದಲ್ಲಿ ಮುಳುಗುವುದು. ನಾನು, ನನ್ನ ಮಾತಾ ಪಿತರು ಪೂಜಿಸುತ್ತಿದ್ದ ಪರಮ ಪಾವನ ವಿಗ್ರಹವನ್ನು ನೀವು ಗುರು ಬ್ರಹಸ್ಪತಿ ಅವರಿಗೆ ಒಪ್ಪಿಸಬೇಕಾಗಿ ಅಜ್ಞಾಪಿಸುತ್ತಾರೆ. ದೇವರ ಅಜ್ಞಾನುಸಾರ ವಿಗ್ರಹದಾ ವಿಚಾರ ಗುರು ಬ್ರಹಸ್ಪತಿಯರಲ್ಲಿ ಉದ್ಧವ ಋಷಿ ತಿಳಿಸುತ್ತಾರೆ. ಆದ್ರೆ ಅವರು ಬರಬೇಕಾದರೆ ಇಡೀ ದ್ವಾರಕ ಜಲಮಯವಾಗಿರುತ್ತೆ ಆದ್ರೆ ಆ ವಿಗ್ರಹ ಮಾತ್ರ ನೀರಲ್ಲಿ ಮುಳುಗದೆ ತೇಲಿರುವುದನ್ನು ಹಿಡಿಯಲಾಗದೆ ವಾಯು ದೇವನನ್ನು ಕರೆಸಿಕೊಳ್ಳುತ್ತಾರೆ.
ಗುರು ಬ್ರಹಸ್ಪತಿ ಮತ್ತು ವಾಯು ದೇವರು ವಿಗ್ರಹ ಪ್ರತಿಷ್ಠಾಪನೆ ಮಾಡಲು ಸೂಕ್ತ ಸ್ಥಳವನ್ನು ಅರಸಿಕೊಂಡು ಭಾರತವೆಲ್ಲ ಆಕಾಶ ಮಾರ್ಗದ ಮೂಲಕ ಸಂಚಾರಿಸುವಾಗ ಭಾರ್ಗವ ಕ್ಷೇತ್ರದ ಪಡು ದಿಕ್ಕಿನಲ್ಲಿ ತಾವರೆ ಕೆರೆಗಳನ್ನು, ಸುತ್ತ ಪಕ್ಷಿಗಳ ನೀನಾದವನ್ನು, ಪಕ್ಕದಲ್ಲಿ ಶಿವ ಪಾರ್ವತಿ ದೇವರ ನೃತ್ಯವಾಡುತ್ತಿರುವ ದೃಶ್ಯಾವನ್ನು ಗಮನಿಸುತ್ತಾರೆ.ನೇರವಾಗಿ ಪಾರ್ವತಿ ಪರಮೇಶ್ವರರಿಗೆ ವಂದಿಸಿಕೊಂಡು. ಈ ಜಾಗದ ಮಹಿಮೆಯನ್ನು ತಿಳಿದು ಇದೇ ವಿಗ್ರಹ ಪ್ರತಿಷ್ಠೆಗೆ ಯೋಗ್ಯವಾದ ಸ್ಥಳ ಎಂದು ಶಿವ ಪಾರ್ವತಿ ಮೂಲಕ ಅರಿತುಕೊಂಡ ಗುರು ಬ್ರಹಸ್ಪತಿ, ವಾಯು ದೇವ ಸಾಕ್ಷಾತ್ ಗುರುವಾಯೂರಪ್ಪನ ವಿಗ್ರವನ್ನು ಇಲ್ಲಿ ಪ್ರತಿಷ್ಠೆ ಮಾಡುತ್ತಾರೆ.
*ಗುರು ಮತ್ತು ವಾಯು ದೇವನಿಂದ ಪ್ರತಿಷ್ಠಾಪನೆ ಮಾಡಿದುದರಿಂದ ಗುರುವಾಯೂರ್ ಕ್ಷೇತ್ರವೆಂದು ಹೆಸರು ಬಂತು* ಎಂದೂ ಇಲ್ಲಿನ ದೇವರಿಗೆ ಗುರುಪವನೇಶ, ಗುರುವಾಯೂರಪ್ಪ ಅನ್ನೋ ಹೆಸರೂ ಬಂತು ಎನ್ನುವುದು ಕ್ಷೇತ್ರದಾ ಪ್ರತಿಷ್ಠೆಯ ಕತೆ.
ಇನ್ನಷ್ಟು ಕತೆಗಳ ಜೊತೆಗೆ ನಾಳೆ ಮತ್ತೆ ಬರೆಯುತ್ತೇನೆ. ಹರಿ ಓಂ ಹರೇ ಶ್ರೀ ಕೃಷ್ಣಾ !!
#ಮಣಿರಾಜ್_ಕಾಸರಗೋಡು