ಕಾಸರಗೋಡಿನ ಸಿಂಹ ಪುತ್ರ ಜ್ಯೋತಿಷ್ ಕುಮಾರ್ ಯಾನೆ ಜೋ ಭಾಯ್

  • 14 Oct 2024 06:34:21 PM

ಕಾಸರಗೋಡಿನ ಮಾತ್ರವಲ್ಲ ಹೊರ ರಾಜ್ಯದ ಇಡೀ ಹಿಂದೂಗಳ ಹೃದಯ ಗೆದ್ದ ಕಾಸರಗೋಡಿನ ಜ್ಯೋತಿಷ್ ಕುಮಾರ್ ಹೆಸರು ನೀವು ಕೇಳಿರಬಹುದು.ಹಿಂದೂ ರಾಷ್ಟ್ರ ಭಕ್ತ ಯುವಕರಿಗೆ ಜೋ ಬಾಯ್ ಹೆಸರು ಪ್ರೀತಿಯ, ಅಭಿಮಾನದಾ ಪ್ರತೀಕವಾಗಿತ್ತು.

 

ಅವರ ಹೆಸರು ಕೇಳಿದ್ರೆ ಜಿಹಾದಿಗಳ ಎದೆ ನಡುಗುತ್ತಾ ಇತ್ತು.ಎಷ್ಟೋ ಹಿಂದೂ ವಿರೋಧಿ ಕಮ್ಮಿ ನಿಷ್ಠರ ಮತ್ತು ಮತಾಂಧರ ಹುಟ್ಟಡಗಿಸಿದ ಧೀಮಂತ ಹಿಂದೂ ಸಿಂಹವಾಗಿದ್ದ ಕೇರಳ ಕರ್ನಾಟಕ ಗಡಿ ಭಾಗದಲ್ಲಿ ಜನಿಸಿದ ಅಪ್ರತಿಮ ಹಿಂದೂ ಹೋರಾಟಗಾರ, ಕೆಚ್ಚೆದೆಯ ರಣಧೀರ ಜ್ಯೋತಿಷ್ ಕುಮಾರ್.ಜ್ಯೋತಿಷ್ ಇದ್ದ ಕಾಸರಗೋಡಿಗೂ ಈಗಿನ ಕಾಸರಗೋಡಿಗೂ ವ್ಯತ್ಯಾಸವಿದೆ.

 

ಜ್ಯೋತಿಷ್ ಅವರು ನಿಧನವಾಗಬೇಕಾದರೆ ಕಾಸರಗೋಡಿನಲ್ಲಿ ಮತಾಂಧ ಪುಡಾರಿಗಳು ಪಟಾಕಿ ಹಚ್ಚಿ ಸಂಭ್ರಮಿಸಿದ್ದರು. ಅವರಿದ್ದಾಗ ಕೇಸರಿ ಓಂಕಾರ್ ಭಗವಧ್ವಜ ಕಂಡ್ರೆ ಭಯದಿಂದ ಜಿಹಾದಿಗಳು ಕಾಲ್ಕಿತ್ತು ಓಡುವ ವಾತಾವರಣ ಕಾಸರಗೋಡಿನಲ್ಲಿ ಸೃಷ್ಠಿಯಾಗಿತ್ತು. ಹಿಂದೂ ಸಮಾಜಕ್ಕಾಗಿ ಜ್ಯೋತಿಷ್ ಕುಮಾರರ ತ್ಯಾಗ ಮರೆಯುವಂತದ್ದಲ್ಲ. ಕಾನೂನು ದೃಷ್ಠಿಯಲ್ಲಿ ಅವರನ್ನು ಅಪರಾಧಿ ಎಂದು ಕರೆದರೂ, ಜಿಹಾದಿ, ಲವ್ ಜಿಹಾದ್, ಮತಾಂತರ ಮಾಡೋ ಮತಾಂಧರಿಂದ ಹಿಂದೂ ಹೆಣ್ಣು ಮಕ್ಕಳಿಗೆ ಹಿಂದೂ ಮನೆಗಳಿಗೆ ಅವರು ರಕ್ಷಾ ಕವಚವಾಗಿದ್ರು. ಅವರು ತನಗಾಗಿ ಏನೂ ಮಾಡಿಲ್ಲ.

 

ಬರಿ ಬಡತನದ್ದಲ್ಲೇ ಬದುಕು ನಿರ್ವಹಿಸುತ್ತಿದ್ದ ಅವರ ಜೀವನ ಪೂರ್ತಿ ಹಿಂದೂ ಧರ್ಮಕ್ಕಾಗಿ ಮೀಸಲಿಟ್ಟಿದ್ದರು.ಗೂಂಡಾ, ಕ್ರಿಮಿನಲ್, ಕೊಲೆಗಾರ ಅಂತೆಲ್ಲ ಕರೆಸಿಕೊಂಡರೂ ಹಿಂದೂಗಳ ಪಾಲಿಗೆ ಅವರು ವೀರಗಾತೆಯ ಕ್ಷತ್ರಿಯ ರಾಜನಂತೆ ಶೋಭಿಸುತ್ತಿದ್ದರು. ಬದುಕಿದ್ದ ಅಷ್ಟೂ ದಿನ ಎಷ್ಟೋ ಯುವಕರ ಅಣ್ಣನಾಗಿ ಕಣ್ಮಣಿಯಾಗಿದ್ದವರು. ಅವರು ಇದ್ದಾಗ ಯುವಕರಲ್ಲಿ ಆನೆಬಲವಿತ್ತು, ಧೈರ್ಯವಿತ್ತು. ಜ್ಯೋತಿಷ್ ಒಂದು ವ್ಯಕ್ತಿ ಆಗಿರಲಿಲ್ಲ ಯುವಕರ ಭರವಸೆಯ ಶಕ್ತಿಯಾಗಿದ್ರು. ಅಂತಹ ಒಬ್ಬ ಮಹಾನ್ ಹಿಂದೂ ಧರ್ಮದ ಪ್ರತಿಪಾದಕನನ್ನೂ, ಪ್ರಬಲ ನಾಯಕನನ್ನೂ ಕಳೆದುಕೊಂಡಿರುವುದು ನಮ್ಮ ಹಿಂದೂ ಧರ್ಮಕ್ಕೆ ದೊಡ್ಡ ನಷ್ಟವೇ ಸರಿ. ಆರ್ಥಿಕವಾಗಿರಲಿ, ಇಲ್ಲ ಏನೇ ಸಮಸ್ಯೆ ಎದುರಾಗಲಿ ನಿನ್ನ ಜೊತೆಗೆ ನಾನಿದ್ದೇನೆ ಅನ್ನುವವರು ಬೇಕು.

 

ಯಾರನ್ನೂ ರಾಜಕೀಯ ದಾಳವಾಗಿ ಬಳಸಿಕೊಳ್ಳದೆ,ಕಷ್ಟ ಇದ್ರೂ ಯಾರಲ್ಲೂ ಸಹಾಯ ಬೇಡದೆ ಧರ್ಮದ ಏಳಿಗೆಗಾಗಿ ತನ್ನ ಬದುಕಿನ ನಾಳೆಯ ಬಗ್ಗೆ ಚಿಂತಿಸದೆ, ತನ್ನವರಿಗಾಗಿ ಏನನ್ನೂ ಗಳಿಸದೇ ನಮ್ಮನ್ನು ಅಗಲಿದ ಜೋ ಬಾಯ್ ಅವರನ್ನ ನೆನೆದು ಬರೆದ ಲೇಖನ.ಧರ್ಮೋ ರಕ್ಷತಿ ರಕ್ಷಿತಃ ಅನ್ನೋ ಮಾತಿದೆ ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಆದ್ರೆ ಜ್ಯೋತಿಷ್ ಅಣ್ಣನನ್ನ ನಮ್ಮ ಕೈಯಲ್ಲಾಗಲಿ, ಧರ್ಮದ ಕೈಯಲ್ಲಿ ಆಗಲಿ ಉಳಿಸಿಕೊಳ್ಳಲು ಆಗಲಿಲ್ಲ.

 

ಕಾಸರಗೋಡಿನಲ್ಲಿ ಆಗಲಿ ಮಂಜೇಶ್ವರದಲ್ಲಿ ಆಗಲಿ ಧರ್ಮವನ್ನ ಪ್ರತಿನಿಧಿಸುವ ರಾಜಕೀಯ ಪಕ್ಷ ಅಧಿಕಾರಕ್ಕೆ ಬರಲೇ ಇಲ್ಲ.ಕಾರಣ ಹೆಚ್ಚಿನ ಹಿಂದೂಗಳಿಗೆ ಧರ್ಮದ ಮೇಲೆ ಅಭಿಮಾನವಿಲ್ಲ. ಧರ್ಮ, ಹಿಂದುತ್ವಕ್ಕಿಂತಲೂ ತಮ್ಮ ಪಕ್ಷದ ಸಿದ್ಧಾಂತಗಳು, ಅಧಿಕಾರ ಸ್ವಾರ್ಥವೇ ಹೆಚ್ಚಾಗಿದೆ. ಜ್ಯೋತಿಷ್, ಜೋ ಬಾಯ್ ಅವರಿಗೆ ಮರಣವಿಲ್ಲ, ಹಿಂದೂ ಹೃದಯದಲ್ಲಿ ನೆನಪಾಗಿ ನಿತ್ಯ ರಾರಾಜಿಸುವ ಧರ್ಮ ಯೋಧನಿಗೆ ಅಕ್ಷರ ನಮನ...

 

#ಮಣಿರಾಜ್_ಕಾಸರಗೋಡು