ಪ್ರಾಚೀನ ಧಾರ್ಮಿಕ ಪರಂಪರೆಯ ಮಂದಿರಗಳ ಪುನರುಜ್ಜೀವನಕ್ಕೆ ಹೋರಾಟ ಅತೀ ಅಗತ್ಯ.!

  • 01 Jan 2025 03:40:18 PM

ಭಾರತದ ಪುರಾತನ ಮಂದಿರಗಳು ಕೇವಲ ಧಾರ್ಮಿಕ ಸ್ಥಳವಲ್ಲ, ಅವು ಕಲೆಯ, ಸಂಸ್ಕೃತಿಯ, ಮತ್ತು ಜ್ಞಾನ ವಿದ್ಯೆಯ ಕೇಂದ್ರವಾಗಿತ್ತು. ಇತಿಹಾಸದಲ್ಲಿ ಹಲವಾರು ಮಂದಿರಗಳ ಮೇಲೆ ಮೊಗಲರ ಅಕ್ರಮ ಧಾಳಿಗಳು ನಡೆದು ಅದರಲ್ಲಿ ಸುಮಾರು ಮಂದಿರಗಳು ಸಂಪೂರ್ಣವಾಗಿ ನಾಶವಾಗಿ ಹೋಗಿದೆ. ನಾಶವಾದ ಮಂದಿರಗಳ ತಳದಲ್ಲಿ ಇವಾಗಂತೂ ಬೇರೆ ಧಾರ್ಮಿಕ ಕಟ್ಟಡಗಳ ನಿರ್ಮಾಣವಾಗಿದೆ.

 

ಇದಕ್ಕೆ ಉದಾಹರಣೆಯಾಗಿ ರಾಮ ಮಂದಿರ, ಗ್ಞಾನವಾಪಿ, ಹಾಗೂ ಅಜ್ಮೇರ್ ದರ್ಗಾದಂತಹ ಹಲವಾರು ಘಟನೆಗಳು ನಮ್ಮ ಕಣ್ಣ ಮುಂದೆ ಇದೆ. ಈ ವಿಚಾರವಾಗಿ ಇಂದಿನ ದಿನಗಳವರೆಗೂ ಚರ್ಚೆಗಳು ನಡೆಯುತ್ತಿದೆ. 

 

 

ರಾಮ ಮಂದಿರದ ವಿವಾದವನ್ನು ಸುಪ್ರೀಂ ಕೋರ್ಟ್ ತೀರ್ಪು ಮೂಲಕ ಬಗೆಹರಿಸಿದಾಗ, ಇತಿಹಾಸದಲ್ಲಿ ಒಂದು ಮಹತ್ವದ ಮೇಲುಗೈ ಸಾಧನೆಯಾಗಿದೆ.ಈ ಬೆಳವಣಿಗೆಗಳು ಹಿಂದೂ ಸಮುದಾಯದ ಎಚ್ಚರವನ್ನೂ, ಅವರ ಸಂಸ್ಕೃತಿಯ ಪುನಃಜೀವನದ ಅಗತ್ಯವನ್ನೂ ನೆನಪಿಸಿವೆ.

 

 ಅಜ್ಮೇರ್ ದರ್ಗಾದ ತಳದಲ್ಲಿ ಸಂಕಟಮೋಚನ ಶಿವ ಮಂದಿರ ಇತ್ತು ಅನ್ನುವ ಸುದ್ದಿ ಇತಿಹಾಸದ ಕಡೆಗೆ ಜನರ ಗಮನವನ್ನು ಹರಿಸಿತ್ತು. ಅದೇ ರೀತಿ, ಗ್ಞಾನವಾಪಿ ಮಸೀದಿಯ ತಳದಲ್ಲಿ ಶಿವಲಿಂಗ ಅಸ್ತಿತ್ವ ಇದೆ ಅನ್ನುವ ಸುದ್ದಿಯೂ ಬಂದಿದೆ. ಈ ಎಲ್ಲ ವಿಚಾರಗಳು ಮಂದಿರಗಳ ಪುನರ್‌ಸ್ಥಾಪನೆಗೆ ಕಾನೂನಾತ್ಮಕ ಹೋರಾಟದ ಅಗತ್ಯವಿದೆ ಎಂದು ಒತ್ತಿ ಹೇಳುತ್ತಿವೆ.

 

ಹಿಂದೂ ಸಮುದಾಯವು ಈ ಪ್ರಾಚೀನ ಪರಂಪರೆಯ ಪುನರುತ್ಥಾನಕ್ಕೆ ಒಗ್ಗಟ್ಟಿನಿಂದ ಕೈಜೋಡಿಸಬೇಕು. ಕಾನೂನು ಬದ್ಧವಾದ ಹೋರಾಟವನ್ನು ನಡೆಸಬೇಕು. ಒಗ್ಗಟ್ಟಿನಲ್ಲಿ ಬಲವಿದೆ. ಪ್ರತಿ ಹಳ್ಳಿ, ಪ್ರತಿ ಪಟ್ಟಣದಲ್ಲಿರುವವರು ಅಲ್ಲಿ ಇದ್ದಿದ ಪ್ರಾಚೀನ ಮಂದಿರಗಳ ಕುರಿತಾದ ಚರಿತ್ರೆಯನ್ನು ಅರಿತು, ಅದನ್ನು ಪುನರುಜ್ಜೀಕರಿಸುವ ಪ್ರಯತ್ನವನ್ನು ಮಾಡಬೇಕು. ಮಂದಿರಗಳ ಪುನರ್‌ಸ್ಥಾಪನೆಯು ಕೇವಲ ಪುರಾತನ ಧಾರ್ಮಿಕ ಕೇಂದ್ರಗಳ ಪುನರುತ್ಥಾನವಲ್ಲ, ಅದು ಹಿಂದೂ ಧರ್ಮದ ಆತ್ಮವನ್ನೇ ಪುನರ್ಜೀವಿತಗೊಳಿಸುವ ದೊಡ್ಡ ಕಾರ್ಯವಾಗಿದೆ.

 

 ಹಳ್ಳಿ ಹಳ್ಳಿಯಿಂದ ದೆಹಲಿವರೆಗೊ ಹಿಂದೂ ಸಮಾಜವು ಒಗ್ಗಟಾಗಿ ನಿಂತು ಇತಿಹಾಸವನ್ನು ಪುನಃಸ್ಥಾಪಿಸುವುದಕ್ಕಾಗಿ ಹೆಜ್ಜೆ ಇಡಬೇಕು. 

 

 ಈ ಕಾರ್ಯವು ನಾವು ಮಾಡುವ ಮಹತ್ತರದ ಕಾರ್ಯವಾಗಿರುತ್ತದೆ ಯಾಕೆಂದರೆ ನಮ್ಮ ಈ ಪ್ರಯತ್ನವು ಮುಂದಿನ ಪೀಳಿಗೆಗೆ ಇತಿಹಾಸವನ್ನು ಸಮರ್ಪಿಸುವ ಜವಾಬ್ದಾರಿಯುತ ವಿಷಯವಾಗಿದೆ. 

 

 *ಪ್ರಾಚೀನ ಮಂದಿರಗಳ ಪುನರುತ್ಥಾನದಿಂದ ಇತಿಹಾಸವನ್ನು ಸರಿಪಡಿಸುವ ಮಹತ್ಕಾರ್ಯವನ್ನು ಮಾಡೋಣ...* 

ಜೈ ಶ್ರೀ ರಾಮ್....

-ಅಕ್ಷಯ್ ರಜಪೂತ್ ಕಲ್ಲಡ್ಕ