ಬಾಂಗ್ಲಾದೇಶದಲ್ಲಿ ಇಂದು ಹಿಂದೂಗಳ ಮೇಲೆ ನಡೆಯುತ್ತಿರುವ ಹತ್ಯಾಕಾಂಡವು ಎಚ್ಚರಿಕೆ ಗಂಟೆಯನ್ನು ಬಾರಿಸುತ್ತಿದೆ. ಮತ್ತೊಮ್ಮೆ ಹಿಂದೂ ಸಮುದಾಯದ ಸ್ಥಿತಿಯನ್ನು ಪುನರ್ ನಿರೀಕ್ಷಣೆ ಮಾಡಬೇಕಾದ ಪರಿಸ್ಥಿತಿಯನ್ನು ಉಂಟು ಮಾಡಿದೆ.
ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯವು ಇಂದು ದ್ವೇಷ, ಹಿಂಸಾಚಾರ ಮತ್ತು ಹತ್ಯೆಯ ದಾಹದಲ್ಲಿ ನರಳುತ್ತಿದೆ. ಹಿಂದೂಗಳ ದೈವಿಕತೆಯನ್ನು ಹಾಳುಮಾಡಲು ಮತ್ತು ಅವರ ಸಂಸ್ಕೃತಿಯನ್ನು ಧೂಳಿಪಟ ಮಾಡಲು ಜಿಹಾದಿಗಳ ಪ್ರಯತ್ನಗಳು ನಡೆಯುತ್ತಲೇ ಇದೆ. ಅದಕ್ಕೆ ಉದಾಹರಣೆಯಾಗಿ ಇತ್ತೀಚೆಗೆ ನಡೆದ ಇಸ್ಕಾನ್ ಘಟನೆಯೇ ಸಾಕ್ಷಿ.
ಹಿಂದೂಗಳನ್ನು ಉಚ್ಛಿದ್ರ ಗೊಳಿಸುವಂತಹ ಇಂತಹ ಹುನ್ನಾರವು ಇದೀಗ ಬಾಂಗ್ಲಾದೇಶದಲ್ಲಿ ನಡೆಯುತ್ತಿದೆ. ಇಂದು ನಾವು ಎಚ್ಚೆತ್ತು ಕೊಳ್ಳದಿದ್ದರೆ ಮುಂದೊಂದು ದಿನ ಅದೇ ಪರಿಸ್ಥಿತಿಯನ್ನು ನಾವು ಎದುರಿಸಬೇಕಾಗುತ್ತದೆ. ಆದ್ದರಿಂದ
ನಾವು ಜಾಗರೂಕರಾಗಿರಬೇಕು ,ಎಲ್ಲದಕ್ಕೂ ಸಿದ್ಧವಾಗಿರಬೇಕು.
ಹಿಂದೂ ಧರ್ಮವು ಪವಿತ್ರ ದೇವತೆಗಳಿಗೆ ನಮನ ಮಾಡುವ ಶ್ರದ್ಧೆ, ಶಾಂತಿ ಮತ್ತು ಸಹಿಷ್ಣುತೆಗೆ ಪ್ರಸಿದ್ಧವಾಗಿದೆ. ಆದರೆ ಇಂದು ನಡೆಯುತ್ತಿರುವ ಹಲವು ಘಟನೆಗಳು ನಮಗೆ ದೇವತೆಯ ಕೈಯಲ್ಲಿ ಕೇವಲ ಹೂವಿಲ್ಲ, ಅಸ್ತ್ರಗಳು ಕೂಡ ಇವೆ ಎಂದು ನೆನಪಿಸುತ್ತದೆ.
ನಮ್ಮ ಸಮಾಜದ ರಕ್ಷಣೆಗಾಗಿ ನಮ್ಮ ರಕ್ಷಣೆಗಾಗಿ ನಾವು ದೌರ್ಜನ್ಯದ ವಿರುದ್ಧವಾಗಿ ನಿಲ್ಲಲೇ ಬೇಕು. ಅದಕ್ಕೆ ಸರಿಯಾಗಿ ಪ್ರತ್ಯುತ್ತರವನ್ನು ಅದೇ ದಾಟಿಯಲ್ಲಿ ನೀಡಬೇಕು. ಮುಳ್ಳಿನಿಂದ ಮುಳ್ಳನ್ನು ತೆಗೆಯುವ ಹಾಗೆ.
ಇಂದು ನಮ್ಮ ಸಮಾಜಕ್ಕೆ ಬಲವಂತವಾಗಿ ಬೆದರಿಕೆಗಳನ್ನು ಎದುರಿಸುವ ಅಗತ್ಯ ಸೃಷ್ಟಿಯಾಗಿದೆ. ಭಾರತ ದೇಶ ಭಾರತವಾಗಿ ಆಗಿ ಉಳಿಯಬೇಕಾದರೆ ಹಿಂದೂ ಸಮುದಾಯದ ಅಸ್ತಿತ್ವ ಅತೀ ಅವಶ್ಯಕ.
ಶಾಂತಿ, ಸಹಿಷ್ಣುತೆ, ಮತ್ತು ಧರ್ಮಪ್ರಧಾನ ಬದುಕು ನಮ್ಮ ಮೌಲ್ಯಗಳಾದರೂ, ನಮ್ಮ ರಕ್ಷಣೆಗಾಗಿ ನಾವು ಸ್ವತಃ ತಯಾರಾಗಬೇಕು. ನಾವು ನಮ್ಮ ರಕ್ಷಣೆಗಾಗಿ ಬೇರೆ ಯಾರನ್ನಾದರೂ ನಿರೀಕ್ಷಿಸುವಂತಾಗಬಾರದು ನಮ್ಮನ್ನು ನಾವೇ ಕಾಪಾಡಿಕೊಳ್ಳುವುದನ್ನು ಅರಿತಿರಬೇಕು.
ನಮ್ಮ ರಕ್ಷಣೆಗಾಗಿ, ಉಳಿವಿಗಾಗಿ ಕಟ್ಟಕಡೆಯದಾಗಿ ಉಳಿದಿರುವ ಒಂದೇ ಒಂದು ದಾರಿ ಅದು ದೌರ್ಜನ್ಯದ ವಿರುದ್ಧ ನಾವು ನಡೆಸುವ ಹೋರಾಟ. ಹೊರಾಟವೇ ಉತ್ತರ ಎಂಬ ಸಂವೇದನೆಯನ್ನು ನಾವು ಹೃದಯದಲ್ಲಿ ಉಳಿಸಿಕೊಂಡು, ನಮ್ಮ ಧರ್ಮ, ಸಂಸ್ಕೃತಿ, ಮತ್ತು ಆಸ್ತಿಗಳನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದೆ.
ಭಾರತ ಉಳಿಯಬೇಕಾದರೆ ಹಿಂದೂಗಳು ಎಚ್ಚರವಾಗಬೇಕು, ರಕ್ಷಣೆಗೆ ಸಜ್ಜರಾಗಬೇಕು.
ಅಕ್ಷಯ್ ರಜಪೂತ್ ಕಲ್ಲಡ್ಕ