ಬ್ರಹ್ಮಾಂಡದ ಅಧಿಪತಿಗೆ
ದೇವತೆಗಳೆಲ್ಲ ಶರಣು ನಿನಗೆ
ಭಸ್ಮಧಾರಿ ಭುಜಂಗನೆ
ತ್ರಿನೇತ್ರಧಾರಿ ಸೃಷ್ಟಿಕರ್ತನೇ
ಭೂಮಿಯ ಭೋರ್ಗರೆತಕೆ
ಭಂಗಿಯಲೆ ತಾಂಡವವನ್ನೆಬ್ಬಿಸಿ
ಸರ್ವವ ಸರಿದೂಗಿಸಿದ ಅಖಿಲಾಂಡೇಶ್ವರನೇ ನಂಜನುಂಡರೂ ನಂಜೇ ಸೋಕದ ನಂಜುಂಡೇಶ್ವರನೇ
ಪಂಚಮುಖಗಳ ಪಂಚಲಿಂಗೇಶ್ವರನೇ ಸರ್ವವೂ ಇಹುದಿಲ್ಲಿ ನಿನ್ನ ಮುಷ್ಠಿಯೊಳಗೆ ಪವಿತ್ರ ಭಕ್ತಿಯ ಭಾವ ಬೆಳೆಸು ಪ್ರತಿ ಮನುಜನ ಮನದೊಳಗೆ..
✍️ಭವ್ಯಜ್ಯೋತಿ ಕೆ. ವಿಟ್ಲ