ವಿಶ್ವ ಆರೋಗ್ಯ ದಿನ- ಜಾಗತಿಕ ಮಹತ್ವ!

  • 08 Apr 2025 01:32:10 PM

 

ಪ್ರತಿ ವರ್ಷವೂ ಏಪ್ರಿಲ್ 7ರಂದು ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ.1945ರಲ್ಲಿ ವಿಶ್ವ ಸಂಸ್ಥೆ ತೆಗೆದು ಕೊಂಡ ನಿರ್ಣಯದಂತೆ ಏಪ್ರಿಲ್ 7ರನ್ನು ಜಾಗತಿಕ ಆರೋಗ್ಯ ದಿನವೆಂದು ಘೋಷಿಸಲಾಗಿದೆ. ಜನರಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಇದನ್ನು ಆಚರಿಸಲಾಗುತ್ತಿದೆ.

ಆರೋಗ್ಯದ ಬಗ್ಗೆ ಈಗೀಗ ಜನರಲ್ಲಿ concerrn ಹೆಚ್ಚಿರುವುದನ್ನು ನಾವು ಕಾಣಬಹುದು. ಬೆಳಿಗ್ಗೆ ಬೇಗ ಎದ್ದು ವಾಕಿಂಗ್ ಹೋಗುವವರನ್ನು, ಯೋಗ ಕ್ಲಾಸಿಗೆ ಹೋಗುವವರ, ಜನರನ್ನು ನಾವು ಕಾಣಬಹುದು. ಆದರೂ ನೂರೆಂಟು ಚಟಗಳ ದಾಸರಾಗಿ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಕೆಡಿಸಿ ಕೊಳ್ಳುವವರಿಗೆ ಏನೂ ಕೊರತೆಯಿಲ್ಲ.ಈಗಿನ ಯಾಂತ್ರೀಕೃತ ಜೀವನದಲ್ಲಿ ನಮ್ಮ ಜೀವನದಲ್ಲಿ ಅನೇಕ ಬದಲವಣೆಗಳನ್ನು ಕಾಣಬಹುದು. ನಮ್ಮ ಮನೆಯಲ್ಲಿದ್ದ ಇಡ್ಲಿ,ದೋಸೆಗಳು ಮಾಯವಾಗಿ ಪಿಜ್ಜಾ, ಬರ್ಗರ್ ಗಳು ಆಕ್ರಮಿಸಿ ಕುಳಿತಿವೆ.

ಹಿತ ಭುಕ್,ಮಿತ ಭುಕ್, ಎಂಬುದು ಮಾಯವಾಗಿ ಬಿಟ್ಟಿದೆ. ಬಿ.ಪಿ, ಶುಗರ್.ನಮ್ಮ ಪಿತ್ರಾರ್ಜಿತ ಆಸ್ತಿಯೆಂದು ಭಾಸವಾಗಿ ಬಿಟ್ಟಿದೆ. ವಿಪರೀತ ಬೊಜ್ಜು, , ಮೈ ಕರಗಿಸಲು ನೂರೆಂಟು ಸರ್ಕಸ್ ಮಾಡುವವರನ್ನು ನಾವು ಕಾಣುತ್ತೇವೆ. ಬ್ರಾಂಡೆಡ್. ಶೋರೂಮ್ಗಳಿಗೆ ಹೋಗಿ ಚಪ್ಪಲಿ ಖರೀದಿಸುವ ನಾವು ರಸ್ತೆ ಬದಿಯಲ್ಲಿ ತರಕಾರಿ ಖರೀದಿಸಲು ಚೌಕಾಸಿ ಮಾಡುತ್ತೇವೆ. ಕೆಲವೊಂದು ಜನ ಮುಂಜಾನೆ ಟಿಫಿನ್ ಗಿಂತ ಹೆಚ್ಚು ಮಾತ್ರೆ ನುಂಗುವುದುಂಟು ಎಂದು ತಮಾಷೆ ಮಾಡುವುದುಂಟು.

ಆದರೆ ದೈಹಿಕ ಆರೋಗ್ಯಕ್ಕಿಂತ ಹೆಚ್ಚು ಮಾನಸಿಕ ಆರೋಗ್ಯ ಕೂಡ. ಅಷ್ಟೇ ಮಹತ್ವದ್ದಾಗಿದೆ.

ಅತಿಯಾದ ನಿರೀಕ್ಷೆ, ವಿಪರೀತ ಸ್ಪರ್ಧೆ, ಮಾನಸಿಕ ನೋವು,ಖಿನ್ನತೆ ಮುಂತಾದವುಗಳು ಮಾನಸಿಕ ಆರೋಗ್ಯ ಕೆಡಲು ಕಾರಣಗಳಾಗಿವೆ. 

ಯೋಗ,ಧ್ಯಾನ ಪ್ರಾಣಾಯಾಮ, ಟಾಕ್ಸಿಕ್ ಸಂಗತಿಗಳಿಂದ ದೂರವಿರುವುದು, ಆಧ್ಯಾತ್ಮಿಕ ಆಸಕ್ತಿ, ಪ್ರಾರ್ಥನೆ,ಗಳಿಂದ ಮಾನಸಿಕ ಆರೋಗ್ಯ ಕಾಯ್ದು ಕೊಳ್ಳ ಬಹುದು. ""ಪಾಲಿಗೆ ಬಂದಿದ್ದೇ ಪಂಚಾಮೃತ "" ಎಂದು ಮಾನಸಿಕ ನೆಮ್ಮದಿ ಕಾಯ್ದು ಕೊಳ್ಳುವುದು, ಕುಟುಂಬದವರ ಜೊತೆ ಸಮಯ ಕಳೆಯುವುದು ,, ಇವೆಲ್ಲವೂ ಮಾನಸಿಕ ಸ್ಥಿಮಿತ ಕಾಯ್ದು ಕೊಳ್ಳಲು ಸಹಾಯ ಮಾಡುತ್ತವೆ.

ಬನ್ನಿ, ಉತ್ತಮ ಆರೋಗ್ಯ ಕಾಯ್ದು ಒಳ್ಳೆಯ ಸಮಾಜ ನಿರ್ಮಿಸೋಣ.

ಏನಂತೀರಾ....?

 

✍️ಗಾಯತ್ರಿ ಸುಂಕದ್