ವಿಶ್ವ ಒಡಹುಟ್ಟಿದವರ ದಿನ

  • 10 Apr 2025 11:52:30 AM

 

ನಮ್ಮ ಜೀವನದಲ್ಲಿ ತಂದೆ, ತಾಯಿ ಎಷ್ಟು ಮಹತ್ವವೂ, ಅಷ್ಟೇ ಮಹತ್ವ ನಮ್ಮ ಜೊತೆ ಹುಟ್ಟಿದವರು ಆಗಿರುತ್ತಾರೆ.

ಒಡ ಹುಟ್ಟಿದವರು,ಅಕ್ಕ,ತಂಗಿ, ಅಣ್ಣ,ತಮ್ಮ ನಮ್ಮ ಜೀವನದಲ್ಲಿ ತಮ್ಮದೇ ಆದ ಪ್ರಭಾವವಿದೆ. ರಾಖಿ ಕಟ್ಟಲು, ದೀಪಾವಳಿ ಹಬ್ಬದಲ್ಲಿ ಆರತಿ ಮಾಡುವಾಗ,ಮದುವೆಯಲ್ಲಿ ಬತ್ತ ರಳು ಹಾಕಲು,ಬಂದು ನಮ್ಮ ಜೀವನದ ಮಧುರ ಕ್ಷಣಗಳನ್ನು ನೀಡಿ ಹೋಗುತ್ತಾರೆ. 

ಚಿಕ್ಕವರಿದ್ದಾಗ ಮನೆಯಲ್ಲಿ ಜಗಳವಾಡಲು, ಹೋಂವರ್ಕ್ ಮಾಡಿ ಕೊಡಲು, ಪೈಸೆ ತೆಗೆದು ಕೊಂಡು ಅಂಗಡಿಗೆ ಓಡಿ ಹೋಗುವಾಗ ನಮ್ಮ ಪಾರ್ಟನರ್ಸ್ ನಮ್ಮ ಒಡ ಹುಟ್ಟಿದವರು.

ನಾವು ಚಿಕ್ಕವರಿದ್ದಾಗ ನಮ್ಮ ಅಣ್ಣ ಓದಿದ textbook, ಕಂಪಾಸ್ box ಎಲ್ಲವೂ ನಮ್ಮ ಪಾಲಿಗೆ. ಮನೆಯಲ್ಲಿ ಅಜ್ಜಿ ಕೊಟ್ಟ ದುಡ್ಡು ತೆಗೆದು ಕೊಂಡು ಅಂಗಡಿಗೆ ಹೋಗಿ ಕುಲ್ಫೀ ತೆಗೆದುಕೊಂಡರೆ ಅದರ ಅರ್ಧ ಪಾಲು ಅವರಿಗೆ ಕೊಡುವ tax.

ದೊಡ್ಡವ ರಾದಾಗಲೂ ನಮ್ಮ ಜೀವನದ ನಿರ್ಧಾರ ಗಳಾದ, ಕೆರಿಯರ, ಶಿಕ್ಷಣ, ಮದುವೆಗಳ ನಿರ್ಧಾರದಲ್ಲಿ ನಮ್ಮ ಒಡ ಹುಟ್ಟಿದವರ ಪ್ರಭಾವ ಅಧಿಕ.

 ""ಹುಟ್ಟುವಾಗ ಅಣ್ಣ ತಮ್ಮಂದಿರು, ಬೆಳೆದ ಮೇಲೆ ದಾಯಾದಿಗಳು"" ಎಂಬ ನುಡಿ ಇದ್ದಾಗಲೂ ಅವರು ನಮ್ಮವರೇ ಆಗಿರುತ್ತಾರೆ. 

ಈಗಿನ ಯಾಂತ್ರಿಕ ಯುಗದಲ್ಲಿ ಕೂಡ ನಾವು ಎಷ್ಟೇ ಕಮರ್ಷಿಯಲ್ ಮೈಂಡ್ ಆಗಿದ್ದ್ದರೂ ಅವರು ಎಮೋಷನಲ್ ಆಗಿ ಕನೆಕ್ಟ್ ಆಗಿ ಬಿಟ್ಟಿರುತ್ತಾರೆ. ಅದಕ್ಕೆ ಹೇಳುವುದು ""ಅಂಗಾಲಿಗೆ ಹೇಸಿಕೆಯಿಲ್ಲ, ಕರುಳಿಗೆ ನಾಚಿಕೆಯಿಲ್ಲ"" ನಮ್ಮ ಜೀವನದ ಜೊತೆಗೆ ಸುಖ, ದುಃಖ ಹಂಚಿಕೊಂಡ,, ಹಂಚಿ ಕೊಳ್ಳುವ. ನಮ್ಮ ಒಡ ಹುಟ್ಟಿದವರಿಗೆ ನಮ್ಮ ಪ್ರೀತಿಯ ಹಾರೈಕೆಗಳು.