ವಿಶ್ವ ಕಲಾ ದಿನ
ಕಲೆ ಎನ್ನುವುದು ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ. ನಮ್ಮ ನೋವುಗಳನ್ನು ಮರೆಯಲು,ನಮ್ಮ ಸೃಜನಶೀಲತೆಯನ್ನು ,ಹೊರ ತೆಗೆಯಲು ಕಲೆ ಯಂತಹ ಸಾಧನ ಮತ್ತೊಂದಿಲ್ಲ.
ಚಿತ್ರಕಲೆ, ಪೇಂಟಿಂಗ್, ಕಸೂತಿ, ರಂಗೋಲಿ, ಮುಂತಾದವುಗಳು ಕಲೆಯ ವಿವಿಧ ಮಾಧ್ಯಮ ಗಳಾಗಿವೆ. ಹಿಂದಿನ ಕಾಲದಲ್ಲಿ ಮಲೆನಾಡಿನಲ್ಲಿ ರಂಗೋಲಿ ಹಾಕ ಬೇಕಾದರೆ,ಅಕ್ಕಿ ಹಿಟ್ಟನ್ನು ಬಳಸುತ್ತಿದ್ದರು, ಇದರ ಮೂಲಕ ಚಿಕ್ಕ ಪುಟ್ಟ ಕೀಟ ಗಳಿಗೆ ಪರೋಕ್ಷವಾಗಿ ಆಹಾರ ವಾಗುತ್ತಿತ್ತು. ಇಲ್ಲಿ ಕಲೆಯ ಅಭಿವ್ಯಕ್ತಿಯ ಜೊತೆಗೆ ಮಾನವೀಯತೆಯ ಸಾಕಾರ ವಾಗುತ್ತಿತ್ತು.
ವಿಜ್ಞಾನ ಮತ್ತು ತಂತ್ರಜ್ಞಾನ ಬುದ್ಧಿಯ ಮೂಲಕ ಆರ್ವಿ ಭೂತವಾಗುತಿತ್ತು.ಆದರೆ ಕಲೆಯ ಅಭಿವ್ಯಕ್ತಿ ಆಗ ಬೇಕಾದರೆ ಅಲ್ಲಿ ಹೃದಯದಿಂದ ಸಾಕಾರ ವಾಗುತ್ತಿತ್ತು. ಅದಕ್ಕೆ ಕಲೆಯ ಅಭಿವ್ಯಕ್ತಿ ಗಾಗಿಯೇ ಪ್ರತಿ ವರ್ಷ ಏಪ್ರಿಲ್ 15ರಂದು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತದೆ.
ಕಲೆ ಕೇವಲ ನಮ್ಮಲ್ಲಿಯ ಸೃಜನ ಶೀಲತೆಯ ಉತ್ತೇಜನಕ್ಕೆ ಅಷ್ಟೇ ಅಲ್ಲ, ಇದು ಈಗಲೂ ಎಷ್ಟೋ ಜನರ ಜೀವನದ ಅಡಿಪಾಯ ವಾಗಿದೆ.
'' ಗಂಜೀಫಾ"" ದ ಮೂಲಕ ಪ್ರಸಿದ್ಧರಾದ ರಘುಪತಿ ಭಟ್, ಚಿತ್ರಕಲೆಯ ಮೂಲಕ ಭಾರತೀಯ ಸಂಸ್ಕೃತಿ ಯ ಪರಿಚಯ ಮಾಡಿಸಿದ ರಾಜಾರವಿವರ್ಮ, ಭರತ ನಾಟ್ಯದ ಮೂಲಕ ಕಲೆಯನ್ನು ಸಾಕಾರ ಗೊಳಿಸಿದ ಸುಧಾ ಚಂದ್ರನ್ ಮುಂತಾದವರು ಕಲೆಯ ಆರಾಧಕರು.
ನಾವೆಷ್ಟು ವಿಜ್ಞಾನ, ಮತ್ತು ತಂತ್ರಜ್ಞಾನದ ಜಂಭ ಕೊಚ್ಚಿ ಕೊಂಡರೂ ನಮ್ಮ ಮನಸ್ಸಿಗೆ ಮುದ ನೀಡಲು, ನಮ್ಮಲ್ಲಿಯ ಒಳ್ಳೆಯ ಗುಣಗಳನ್ನು ಅರಳಿಸಲು ಕಲೆಯ ಆರಾಧನೆ ಅತ್ಯವಶ್ಯಕ.
ನಮ್ಮ ಮನಸ್ಸಿನ ಭಾವನೆಗಳನ್ನು ಅರಳಿಸಲು,ಭಾಷೆ ಹೇಗೆ ಅವಶ್ಯಕವೋ,ಹಾಗೆ ನಮ್ಮ ಜೀವನವು ಫ್ರೆಶ್ ಆಗಿ relax. ಆಗಲು ಕಲೆ ನಮ್ಮ ಜೀವನದ ಅವಿಭಾಜ್ಯ ಅಂಗ ವಾಗಬೇಕು.
ಏನಂತೀರಾ??..
✍️ಗಾಯತ್ರಿ ಸುಕಂಡ್ ಬದಮಿ