ವಿಶ್ವ ಸಂತೋಷ ದಿನ

  • 20 Apr 2025 12:08:39 PM

 

ಜೀವನದಲ್ಲಿ ಸುಖ ಮತ್ತು ದುಃಖ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಜೀವನದಲ್ಲಿ ಸಂತೋಷ ಯಾರನ್ನು ಹುಡುಕಿಕೊಂಡು ಹೋಗುವುದಿಲ್ಲ. ನಾವೇ ಅದನ್ನು ಸೃಷ್ಠಿಸಿ ಕೊಳ್ಳಬೇಕು. 

ಸಂತೋಷ್ ಎಂಬುದು ಯಾವ ವ್ಯಕ್ತಿಗಳ ಮೇಲೆ. ವಸ್ತುಗಳ ಮೇಲೆ ಅವಲಂಬಿತ ವಾಗಿರುವುದಿಲ್ಲ. ಅದು ನಮ್ಮ ಮೆಂಟಲಿಟಿ ಮೇಲೆ ಅವಲಂಬಿತ ವಾಗಿರುತ್ತದೆ. 

ಇಲ್ಲಿ ನಾವು ಒಂದು ಕಥೆಯನ್ನು ನೆನೆಸಿ ಕೊಳ್ಳ ಬಹುದು. ಒಬ್ಬ ರಾಜನು ಮಾನಸಿಕ ನೆಮ್ಮದಿ ಇಲ್ಲದೇ ತೋಳಲಾಡುತ್ತಿದ್ದ. ಆಗ ಮಂತ್ರಿಯು ಯಾರು ಸಂತೋಷದಿಂದ ಇರುತ್ತಾರೋ ಅವರ ಅಂಗಿಯನ್ನು ಹಾಕಿ ಕೊಳ್ಳಿ ಎಂದು ಹೇಳಿದನು. ಅದರಂತೆ ರಾಜನು ಆ ವ್ಯಕ್ತಿಯನ್ನು ಹುಡುಕಿ ಕೊಂಡು ಹೊರಟಾಗ ಆ ವ್ಯಕ್ತಿಯು ಸಿಕ್ಕಿದ ಆದರೆ ಆ ವ್ಯಕ್ತಿಗೆ. ಅಂಗಿಯೇ ಇರಲಿಲ್ಲ. ಅಂದರ್ ಆ ವ್ಯಕ್ತಿಗೆ ಅಂಗಿ ಇರದಿದ್ದರೂ ಆ ವ್ಯಕ್ತಿ ಸಂತೋಷದಿಂದ ಇದ್ದ. 

ನಮ್ಮಲ್ಲಿರುವ ಚಿಕ್ಕ ಪುಟ್ಟ ಸಂಗತಿಗಳಿಂದ ಸಹ ನಾವು ಸಂತೋಷವನ್ನು ಕಂಡು ಕೊಳ್ಳ ಬಹುದು.

ಒಂದು ಸಣ್ಣ ಸೋಲೋ ಡ್ರೈವ್ ಹೋಗುವುದು

ನಿಸರ್ಗವನ್ನು ಆನಂದಿಸುವುದು.

ಚಿಕ್ಕ ಮಕ್ಕಳ ಜೊತೆ ಆಟ ವಾಡುವುದು.

ಸುಮಧುರ ಸಂಗೀತ ಆಲಿಸುವುದು.

ಇಷ್ಟವಾದ ಪುಸ್ತಕ ಓದುವುದು.

ಉತ್ತಮ ರಿಸಿಪಿ ಟ್ರೈ ಮಾಡಬಹುದು.

ಇಂತಹ ಸಣ್ಣ ಸಣ್ಣ ಸಂಗತಿ ಗಳಿಂದ ಸಹ ಸಂತೋಷ ಹೊಂದ ಬಹುದು.

ಬದುಕೆಂಬ ಜರ್ನಿಯಲ್ಲಿ ಇಂತಹ ಚಿಕ್ಕ ಪುಟ್ಟ ಮರಗಳ ನೆರಳು ಸಾಕು, ಸ್ವಲ್ಪ ರೆಸ್ಟ್ ಮಾಡಿ ಜರ್ನಿ. ಮುಂದುವರಿಸಲು,______, ಏನಂತೀರಾ..

✍️ಗಾಯತ್ರಿ ಸುಕಂದ್ ಬದಮಿ