ನಮ್ಮ ಸಂಪರ್ಕ ಮಾಧ್ಯಮಗಳಲ್ಲಿ ದೂರವಾಣಿ ಕೂಡ ಒಂದು. ಪತ್ರ, ಆಮೇಲೆ ಬಂದ ಟೆಲಿಗ್ರಾಂ, ಫ್ಯಾಕ್ಸ, ಪೇಜರ್, ಆಮೇಲೆ ಬಂದ ಮೊಬೈಲ್ ಇವೆಲ್ಲವೂ ನಮ್ಮ. ಸಂಪರ್ಕ ಮಾಧ್ಯಮಗಳ ಅನೇಕ ರೂಪಗಳಾಗಿವೆ,
ಪತ್ರದ ನಂತರ ಬಂದ ದೂರವಾಣಿ ನಮ್ಮಲ್ಲಿ ಕ್ರಾಂತಿಯನ್ನೇ ಉಂಟು ಮಾಡಿತು, ಆಗ ಬಂದ STD, coin box calls ನಮ್ಮ ಜೀವನದ ಅವಿಭಾಜ್ಯ ಅಂಗ ಗಳಾದವು.
STD booth ಗಳು ಅನೇಕ ಜನರಿಗೆ ಜೀವನೋಪಾಯದ ಮಾರ್ಗ ಗಳಾಗಿದ್ದವು .
ಸಣ್ಣ ಪುಟ್ಟ. ಕಿರಾಣಿ ಅಂಗಡಿಗಳು ಕೂಡ coin box ಇಟ್ಟು ಸೈಡ್ ಬಿಸಿನೆಸ್ ಮಾಡಲು ಶುರು ಮಾಡಿದ್ವು. ಒಂದು, ಒಂದು ರೂಪಾಯಿ ಯ coin ಹಾಕಿ ಕಾಲ್ ಮಾಡುವವರಿಗೆ ಅನುಕೂಲವಾಗಿ ಪರಿಣಮಿಸಿದ್ದು ನಿಜ.ನಾವು ಕಾಲ್ ಬುಕ್ ಮಾಡಿ ಮಾತನಾಡುವ ಟ್ರಂಕ್ ಕಾಲ್ ಸಿಸ್ಟಮ್, ನಮ್ಮ ಪಾಲಿಗೆ. ಅದ್ಭುತವಾಗಿತ್ತು. ಪೊಲೀಸರು ಬಳಸುವ, wireless, ಬಳಸಿ ಮಾತನಾಡುವುದನ್ನು ನೋಡಿ ನಾವು ಬೆರಗಾಗುತ್ತಿದ್ದೆವು.
ಈಗಂತೂ ಮೊಬೈಲ್ ಬಂದಿದೆ, ಎಷ್ಟೋ ಮನೆಗಳಲ್ಲಿ, ಕಚೇರಿಗಳಲ್ಲಿ ಈಗಲೂ ಲ್ಯಾಂಡ್ಲೈನ್ ಇದೆ.
ಒಟ್ಟಿನಲ್ಲಿ ಈಗಲೂ ದೂರವಾಣಿ ನಮ್ಮನ್ನು ಹತ್ತಿರಕ್ಕೆ ತಂದಿದ್ದು ನಿಜ.
BSNL, Airtel, Idea, Jio ಮುಂತಾದ ಕಂಪನಿಗಳು ದೂರವಾಣಿ ಕ್ಷೇತ್ರದಲ್ಲಿ ಲಗ್ಗೆ ಇಟ್ಟಿವೆ.ಈಗಲೂ ದನ ಕಾಯುವ ಹುಡುಗರು ಕೂಡ ಮೊಬೈಲ್ ಬಳಸುತ್ತಿದ್ದಾರೆ. ಒಟ್ಟಿನಲ್ಲಿ ದೂರವಾಣಿ ದಿನಾಚರಣೆ ಇನ್ನೊಮ್ಮೆ ಸವಿ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿದೆ.
ಏನಂತೀರಾ???
✍️ಗಾಯತ್ರಿ ಸುಂಕದ್