ರಘುನಂದನನ ವೈಭವದ ದಿನ

  • 14 Oct 2024 06:36:42 PM

*ರಘುನಂದನನ ವೈಭವದ ದಿನ* 

 

ಕೋಟಿ ಕೋಟಿ ಭಕ್ತಹೃದಯದ ಮಹೋನ್ನತ ಧ್ಯೇಯವೇ ಸಾರವೇ ಸಾಕಾರಗೊಳ್ಳುವ ಸುದಿನವಿಂದು.... ಬೇಡಿ ಪಡೆದ ಭಕುತರ ಕನಸಿಂದು ಅಮೋಘವಾಗಿ ವೈಭವೀಕರಣಗೊಂಡು ಮರ್ಯಾದ ಪುರುಷೋತ್ತಮನ ಪ್ರಾಣ ಪ್ರತಿಷ್ಠೆಯ ಅತ್ಯದ್ಭುತ ಘಳಿಗೆಯಿಂದು

 

ಧನ್ಯತೆಯು ಮೆರೆದಿಲ್ಲಿ ಪುಣ್ಯವು ಫಲಿಸಿಲ್ಲಿ ಧರ್ಮವೇ ಧರೆಗಿಳಿದ ಐತಿಹಾಸಿಕ ಕಥೆಯಿಲ್ಲಿ ದೇಗುಲದ ನೆರಳಲ್ಲಿ ವಿಶ್ವವೇ ಸುಭೀಕ್ಷಗೊಂಡು ಸರ್ವವು ಸ್ವಾಮಿಯ ಪಾದದಡಿಗಿಟ್ಟು ನನ್ನಾತ್ಮದ ಪರಮಾತ್ಮ ಶ್ರೀರಾಮನಿಗೆ ಸಕಲವೂ ಸಮರ್ಪಣೆಯಲ್ಲಿ...

 

ಎಷ್ಟೆಷ್ಟೋ ಅಪಮಾನ ಅವಮಾನಗಳ ಸಾಲುಗಳೇ ಹರಿಹರಿದು ಬಂದರೂ ಹರಿಕಾರರು ಹಠವಿಟ್ಟು ಕಾದರೂ ಶಬರಿಯಂತೆ..

 

ಛಲಕುಸುರದಂತಹ ಮನನಿಟ್ಟು ಧರ್ಮದೆಡೆಗೊಯ್ದೆಯೋ ದುರಿತಗಳ ದೂಡಿದೆಯೋ ಅಗಣಿತ ಮಹಿಮಾ ಶ್ರೀರಾಮನೇ...

 

ಅಹಿಂಸೆಗಳ ಆರ್ಭಟವೇ ಆರೋಹಣವಾಗಲು ಹಚ್ಚಿದ ಕಿಚ್ಚುಗಳು ಹುಚ್ಚೆದ್ದು ಹಬ್ಬಲು "ಬೆಚ್ಚಿದರಲ್ಲವೇ ಶ್ರೀರಾಮ ನಿನ್ನ ಬಡಪಾಯಿ ಭಕುತರು ...

 

ಅಭಯದ ಸೂಚನೆಯ ದರ್ಶಿಸುತ ಸಮಯದಲ್ಲಿ ಒಲಿದನೋ ಬ್ರಹ್ಮಾಂಡದೊಡೆಯ ಭಕುತರ ಪಾಲಿಗೆ ಶೋಭಿಸುತ ದಿವ್ಯತೆಯ... 

 

ನೀ ಜನಿಸಿದ ಪರಮಪವಿತ್ರ ಮಣ್ಣದುವೆ ಸಂಜೀವಿನಿ ನೀ ಆಡಿ ಬೆಳೆದ ತಾಣವದು ದೇವತೆಗಳ ಬಿಡದು ಜಗದ್ವಿಖ್ಯಾತಗೊಳ್ಳುವುದು ಅಯೋಧ್ಯೆಯ ಶ್ರೀರಾಮ ಮಂದಿರ ಮನೆ ಮನಗಳಲ್ಲಿ ದ್ಯೋತಕದ ಬೆಳಕು ಚೆಲ್ಲುತಾ ಶ್ರೀರಾಮಚಂದಿರ...

 

ರಚನೆ : ಭವ್ಯಜ್ಯೋತಿ ಕೆ ವಿಟ್ಲ