ಪುನೀತ್ ಕೆರೆಹಳ್ಳಿ ಯಾರು ?

  • 04 Nov 2024 05:53:02 PM

ಹಿಂದೂತ್ವಕ್ಕಾಗಿ ಮತ್ತು ಗೋ ರಕ್ಷಣೆಗಾಗಿ ತನ್ನ ಬದುಕನ್ನೇ ಒತ್ತೆ ಇಟ್ಟವರು, ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕರಾದ ಪುನೀತ್ ಕೆರೆ ಹಳ್ಳಿ. ತನ್ನ ನೇರ ನಿಖರವಾದ ಮಾತುಗಳಿಂದ ಜಿಹಾದಿಗಳ ಕೆಂಗಣ್ಣಿಗೆ ಗುರಿಯಾದ ಪ್ರಖರ ಹಿಂದೂವಾದಿ. ಸ್ವಾರ್ಥವಿಲ್ಲದ, ರಾಜಿ ರಾಜಕೀಯ ಮಾಡದ ಗಜಕೇಸರಿ ನಡೆಯ ಮೂಲಕ ಹಿಂದೂ ಯುವ ಮಾನಸದಲ್ಲಿ ಶಕ್ತಿಯಾಗಿ ನಿಂತ ಧೀಮಂತ ನಾಯಕ ಅನ್ನೋದಕ್ಕಿಂತಲೂ ತಾಯಿ ಭಾರತಾಂಬೆಯ ಶ್ರೀಮಂತ ಸೇವಕ ಅನ್ನುವ ಔಚಿತ್ಯಪೂರ್ಣವಾದ ಪದವನ್ನು ಬಳಸಬೇಕು. 

 

ಒಬ್ಬ ಹಿಂದೂವಾಗಿದ್ದುಕೊಂಡು ಪ್ರತಿ ಹೆತ್ತವರೂ ಕೂಡಾ ಹೆಮ್ಮೆಪಡುವ ಮಗ.ಧರ್ಮಕ್ಕಾಗಿ ಪ್ರಾಣ ಭಯವಿಲ್ಲದೆ ಇರುವ ಸತ್ಯದ ಬಾಣಗಳಿಂದ ವಿರೋಧಿಗಳನ್ನು ನಡುಗಿಸುವ ಧೈರ್ಯವಂತ. ಎಷ್ಟೋ ಗೋವುಗಳನ್ನು ಕಟುಕರ ಕೈಯಿಂದ ಕಾಪಾಡಿದ ಗೋ ರಕ್ಷಕ ಪುನೀತ್ ಕೆರೆಹಳ್ಳಿಯವರು ಎಂದು ಮನೆಮಾತಾಗಿದ್ದಾರೆ. ಹಿಂದೂ ಅಭಿಮಾನದ ಹೃದಯದಲ್ಲಿ ಪ್ರಜ್ವಲಿಸುವ ಶಕ್ತಿಯಾಗಿದ್ದಾರೆ. 

 

ಹಣೆಯಲ್ಲಿ ವಿಜಯದ ವೀರ ನಾಮ. ಕ್ರಾಂತಿಕಾರಿ ಮೀಸೆ, ಕೇಸರಿ ಶುಭ್ರ ಶ್ವೇತ ವರ್ಣದ ಉಡುಗೆ, ರಾಜ ಗಾಂಭೀರ್ಯದ ನಡಿಗೆ ಇದೆಲ್ಲ ಈ ಯುವ ತೇಜಸ್ಸಿನ ಲಕ್ಷಣ. ತನ್ನ ಹೋರಾಟದ ಪಥದಲ್ಲಿ ಅನೇಕ ಸವಾಲುಗಳ ಜೊತೆಗೆ ಧರ್ಮಕ್ಕಾಗಿ ಪ್ರಚಾರದ ಗೀಳು ಇಲ್ಲದೆ ಎಷ್ಟೋ ಕೇಸುಗಳನ್ನು ಇವರ ಮೇಲೆ ಹೊರಿಸಿದರೂ ಅದ್ಯಾವುದಕ್ಕೂ ಬಗ್ಗದೆ ಜಗ್ಗದೆ ಮತ್ತೂ ನವೋತ್ಸಾಹದಿಂದ ಕಾರ್ಯೋನ್ಮುಖರಾಗಿರುವುದೇ ಇವರ ಸಾಧನೆ. ಹಿಂದೂ ಯುವಕರಿಗೆ ಪುನೀತ್ ಕೆರೆಹಳ್ಳಿಯವರೇ ಆದರ್ಶ. ಎಷ್ಟೋ ಹಿಂದೂ ದೇವರ ಹೆಸರಲ್ಲಿ ಗೋ ಅಕ್ರಮ ಸಾಗಾಟ ಮಾಡುವ ಜಿಹಾದಿಗಳ ನೈಜ ಬಣ್ಣ ಬಯಲು ಮಾಡಿದ್ದೂ ಇವರೇ.! ಕೆಲವು ಕಡೆಗಳಲ್ಲಿ ಹಿಂದೂ ದೇವರ ಹೆಸರಲ್ಲಿ ಕಾರ್ಯರಿಸುತ್ತಿದ್ದ ಮುಸ್ಲಿಂ ವ್ಯಾಪಾರಿಗಳ ಬೋರ್ಡ್ ತೆರವುಗೊಳಿಸಿ ಹಿಂದೂ ದೇವರ ಹೆಸರಲ್ಲಿ ವ್ಯಾಪಾರ ನಡೆಸುವ ಜಿಹಾದಿಗಳ ಮುಖವನ್ನು ಬಹಿರಂಗ ಮಾಡಿದ ಕಟ್ಟಾರ್ ಹಿಂದೂವಾದಿ ಪುನೀತ್ ಕೆರೆಹಳ್ಳಿ. ಈಗಿನ ಪ್ರಸ್ತುತ ಸರಕಾರದ ಅನ್ಯಾಯ, ಹಿಂದೂ ಧರ್ಮದ ಮೇಲೆ ಜಿಹಾದಿಗಳ ಅಕ್ರಮಣವನ್ನು ಎದುರಿಸಿ ನಿಲ್ಲಾಬಲ್ಲ ವ್ಯಕ್ತಿತ್ವ ಇವರದು.ಲವ್ ಜಿಹಾದ್, ಮತಾಂತರ ಅಲ್ಲದೇ ಅಕ್ರಮ ಗೋ ಕಳ್ಳ ಸಾಗಾಟ, ಹಿಂದೂ ಹೆಸರಲ್ಲಿ ವ್ಯಾಪಾರೀಕರಣ,ಹೀಗೇ ಪುನೀತ್ ಕೆರೆಹಳ್ಳಿ ಅವರ ಸಾಹಸಗಾತೆ ಹಲವಾರಿದೆ.

 

ಸನಾತನ ಹಿಂದೂ ಧರ್ಮ ಉಳಿಸುವಲ್ಲಿ, ಅದರ ಹಿರಿಮೆ ಸಾರುವಲ್ಲಿ ಧರ್ಮ ಹೋರಾಟಕ್ಕೆ ಕಂಕಣತೊಟ್ಟವರು ಇವರು. ಅನೇಕ ಬಾರಿ ಪೊಲೀಸ್ ಬಂಧನದಲ್ಲಿದ್ದು ದೌರ್ಜನ್ಯಕ್ಕೆ ಒಳಗಾದವರು. ತನ್ನ ಹೋರಾಟ ಅಂತ್ಯ ಮಾಡಲು ಏನೇ ಷಡ್ಯಂತರ ನಡೆಸುದರು ಜಗ್ಗದೆ ಮುನ್ನುಗ್ಗಿದವರು.ಎಷ್ಟೇ ತುಳಿದರೂ ಮತ್ತೆ ತಳೆದು ಬೆಳೆದು ಹಿಂದುತ್ವದ ಪ್ರಖರತೆಯನ್ನು ಬೆಂಕಿಯಷ್ಟೇ ಜ್ವಾಲಾಮುಖಿಯಿಂದ ಎದುರಾಳಿಗಳ ಮುಂದೆ ಎದೆ ಸಟೆದು ನಿಂತವರು. ಹೀಗೊಂದು ಯುವಶಕ್ತಿ ನಮ್ಮ ಸನಾತನ ಧರ್ಮದ ಉಳಿವಿಗೆ ಅನಿವಾರ್ಯ. ಇನ್ನೂ ಮುಂದೆ ಇನ್ನಷ್ಟು ಯುವಜನತೆಗೆ ಪ್ರೇರಣಾ ಶಕ್ತಿಯಾಗಿ ಬನ್ನಿ. ಸನಾತನ ಧರ್ಮವನ್ನು ತುಳಿಯುವ ಜಿಹಾದಿ ಶಕ್ತಿಗಳಿಗೆ ಎದುರಾಗಿ ಇನ್ನಷ್ಟು ಧರ್ಮ ರಕ್ಷಣೆಯ, ಗೋ ರಕ್ಷಣೆಯ, ಸತ್ಯ ರಕ್ಷಣೆಯ ಕಾರ್ಯಗಳು ನಿಮ್ಮಿಂದ ಭಗವಂತನು ನಡೆಸಲಿ ಎಂಬ ಹಾರೈಕೆಯೊಂದಿಗೆ 

 

ಮಣಿರಾಜ್ಕಾ ಕಾಸರಗೋಡು