ಜ್ಞಾನ ಬೆಳಕು ಟ್ರಸ್ಟಿನ ವತಿಯಿಂದ ನಿಸ್ವಾರ್ಥ ಸುಂದರ ಪುತ್ತೂರು ಕಾರ್ಯಕ್ರಮ

  • 10 Nov 2024 12:33:32 PM

ಪುತ್ತೂರು: ದಿನಾಂಕ 9/11/24 ರಂದು ಬೆಳಿಗ್ಗೆ 9 ಘಂಟೆಯ ಸಮಯಕ್ಕೆ ಪುತ್ತೂರಿನ ಪ್ರಸಿದ್ದ ಸ್ಥಳವಾದ ಬೀರಮಳೆ ಗುಡ್ಡೆಯಲ್ಲಿ ಮೊದಲ ಹಂತದ ಸ್ವಚ್ಛತಾ ಕಾರ್ಯಕ್ರಮ ಸ್ವದೇಶಿ ಮಾರ್ಟ್ ಇದರ ಸ್ಥಾಪಕಾಧ್ಯಕ್ಷರು ಪ್ರಣವ್ ಭಟ್ ಹಾಗು ಜ್ಞಾನ ಬೆಳಕು ಟ್ರಸ್ಟೀ ಜಯಪ್ರಸಾದ್ ಅವರ ನಿರ್ದೇಶನದಲ್ಲಿ ತುಂಬಾ ಅತ್ಯುತ್ತಮವಾಗಿ ಮೂಡಿಬಂದಿತು.

 

ಈ ಕಾರ್ಯಕ್ರಮವು ಸ್ವಚ್ಛತೆಯ ಅರಿವಿಗಾಗಿ,ಜ್ಞಾನದ ದೀವಿಗೆಗಾಗಿ,

 

ಆರೋಗ್ಯದ ದೃಷ್ಟಿಕೋನದಿಂದ ಆಯೋಜನೆಯಾಗಿದ್ದು , ಈಗೀಗ ಹೆಚ್ಚಾಗುತ್ತಿರುವ ಕಸ ಹಾಗು ಆ ಸ್ಥಳವು ಈಗೀಗ ಮಧ್ಯಪ್ರೇಮಗಳ ತವರು ಮನೆಯಾಗಿದೆ ಎಂಬುವುದು ನಿನ್ನೆಯ ಕಾರ್ಯಕ್ರಮದಿಂದ ಬೆಳಕಿಗೆ ಬಂದಿದೆ, ಆದಕಾರಣ ಸಾರ್ವಜನಿಕರು ಈಗೀಗ ಈ ಸ್ಥಳಕ್ಕೆ ಬೇಟಿ ಕೊಡಲು ಹಿಂಜರಿಯುತ್ತಿದ್ದಾರೆ.

 

 ಮುಂದಿನ ದಿನಗಳಲ್ಲಿ ಈ ಸ್ಥಳಕ್ಕೆ ಏನಾದರೂ ಪರಿಹರಿಸಿ,ತುಂಬಾ ಅತ್ಯುತ್ತಮವಾಗಿ ಇಟ್ಟರೆ ಪ್ರಕೃತಿ ರಮಣೀಯ ಸ್ಥಳಕ್ಕೆ ಎಲ್ಲರೂ ಬಂದು ಇನ್ನೂ ಉತ್ತುಂಗಕ್ಕೆ ಏರುವಲ್ಲಿ ಸಹಕಾರಿಯಾಗುತ್ತದೆ ಎನ್ನುವುದು ಜ್ಞಾನ ಬೆಳಕು ಟ್ರಸ್ಟಿನ ಆಶಯ.

 

ವಿದ್ಯಾರ್ಥಿ ಸ್ವಯಂಸೇವಕರಾದ ನಿಸ್ವಾಲ್, ಪವನ್‌ರಾಜ್ ಬಿ, ಎ ವಿ ಅಶ್ವಿತ್ ಶೆಟ್ಟಿ, ವಿಷಾಲ್ ಬಿ, ದರ್ಶನ್ ಕೆ ಜೆ, ಹಾಗೂ ಕೆ ವೈ ಅಧಿತ್ಯ ಅವರು ತಮ್ಮ ಶ್ರಮವನ್ನು ಸಮರ್ಪಿಸಿದರು. ಇವರೆಲ್ಲರೂ ತೀವ್ರ ತ್ಯಾಗಭಾವದಿಂದ ಬಂದು ಪ್ರಜ್ಞಾಶ್ರಮದ ಸುತ್ತಮುತ್ತಲಿನ ಪ್ರದೇಶವನ್ನು ಶುಚಿಗೊಳಿಸಲು ಮತ್ತು ಪರಿಸರ ಸುಂದರಗೊಳಿಸಲು ದುಡಿದರು.

 

ಕಾರ್ಯಕ್ರಮ ಮುಗಿದ ಬಳಿಕ ಪ್ರಜ್ಞಾ ಆಶ್ರಮಕ್ಕೆ ಭೇಟಿ ಕೊಟ್ಟು ದೇವರ ಮಕ್ಕಳೊಂದಿಗೆ ಕೆಲ ಕಾಲ ಕಳೆದು ,ಸಿಹಿ ತಿಂಡಿ ಹಂಚಿ ,ಬಂದಂತಹ ವಿದ್ಯಾರ್ಥಿಗಳು ಸಂತೋಷ ಪಟ್ಟರು.

 

ಹಾಗೆ ಕೊನೆಗೆ ಅಲ್ಲಿ ಕೂಡಿಸಿದ ಕಸವನ್ನು ನಗರಸಭೆಗೆ ತಲುಪಿಸಲಾಯಿತು.