ವಿವೇಕಾನಂದ ಕಾಲೇಜ್ ನ ಕಾನೂನು ವಿದ್ಯಾರ್ಥಿಗಳಿಂದ ಮಾಹಿತಿ ಕಾರ್ಯಗಾರ.

  • 10 Nov 2024 03:37:28 PM

ಬನ್ನೂರು - ದಿನಾಂಕ 10/11/2024 ನೇ ಬಾನುವಾರ ದ. ಕ. ಜಿ. ಪ. ಹಿ. ಪ್ರಾ. ಶಾಲೆ, ಬನ್ನೂರು ಇಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಶ್ರೀ ಕ್ಷೇತ್ರ ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಭಿ. ಸಿ. ಟ್ರಸ್ಟ್ (ರಿ ) ಪುತ್ತೂರು ಬನ್ನೂರು ಎ ಒಕೂಟ ದ ಸಹಬಾಗಿತ್ವದಲ್ಲಿ ಯುವ ಮತ್ತು ಮಹಿಳಾ ಸಬಲೀಕರಣ ಕಾರ್ಯಕ್ರಮವನ್ನು ಆಯೋಜಿಸಲಾಗಿತು.

 


ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿ ಯಾಗಿ ಶ್ರೀ ವಿಷ್ಣು ಪ್ರದೀಪ. ಎನ್ ಉಪನ್ಯಾಸಕರು ಅಂಬಿಕಾ ಪದವಿ ಪೂರ್ವ ವಿದ್ಯಾಲಯ ಪುತ್ತೂರು ಇವರು ಯುವ ಮತ್ತು ಮಹಿಳಾ ಸಬಲೀಕರಣ ಕಾರ್ಯಕ್ರಮದಲ್ಲಿ ಮನೆ ನಿರ್ವಹಣೆಯಲ್ಲಿ ನೈ ಪುಣ್ಯತೆ ಮತ್ತು ಕಲಾತ್ಮಕತೆ ಎಂಬ ವಿಷಯ ದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಲೆಕ್ಕ ಪರಿಶೋಧಕರಾದ ಕು. ಲತಾ ಅವರು ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿದರು.
ಸಂಘದ ಉಪಾಧ್ಯಕ್ಷರಾದ ರವಿಚಂದ್ರ ಗೌಡ ಹಾಗೂ ಸಂಘದ ಜೊತೆ ಕಾರ್ಯದರ್ಶಿ ಯಾದ ಚಂದ್ರಕಲಾ ಇವರು ಉಪಸ್ಥಿತರಿದ್ದರು. ಸ್ವಸಹಾಯ ಸಂಘದ ಸೇವಾ ನಿರತ ರಾಗಿರುವ ಶ್ರೀಮತಿ ಸುರೇಖಾ. ಪಿ 
ಇವರು ಕಾರ್ಯಕ್ರಮ ವನ್ನು ನಡೆಸುವಲ್ಲಿ ಯಶಸ್ವಿ ಕರ್ತರಾದರು .

 

 

ವಿವೇಕಾನಂದ ಕಾನೂನು ಕಾಲೇಜಿನ ವಿದ್ಯಾರ್ಥಿಗಳಾದ ಕುಮಾರಿ ವೀಕ್ಷಾ. ಎಸ್, ಕುಮಾರಿ ಸ್ವರ್ಣ ಶ್ರೀ, ಶ್ರೀ ಅಭಿರಾಮ್ ಶರ್ಮ, ಕುಮಾರಿ ವರ್ಷ. ಬಿ, ಶ್ರೀ ರಮೇಶ್, ಶ್ರೀ ವಲ್ಲೀಶ್ ನಾಯಕ್. ಎ ಹಾಗೂ ಸಂಘದ ಎಲ್ಲಾ ಸದಸ್ಯರು ಗಳು ಕಾರ್ಯಕ್ರಮ ದಲ್ಲಿ ಪಾಲ್ಗೊಂಡರು..