ಓಟೆಪಡ್ಪು: ವಿಜಯನಗರ: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಓಟೆಪಡ್ಪು ಕ್ಷೇತ್ರಾಭಿವೃದ್ಧಿ ಸೇವಾ ವಿಶ್ವಸ್ಥ ನಿಧಿ (ರಿ.) ಇದರ ವತಿಯಿಂದ ಆಗಸ್ಟ್ 15, 2025 (ಶುಕ್ರವಾರ) “ಮೊಸರು ಕುಡಿಕೆ ಉತ್ಸವ”ವನ್ನು ಸಂಭ್ರಮದಿಂದ ಆಯೋಜಿಸಲಾಗಿದೆ.
ಸಾಂಸ್ಕೃತಿಕ, ಕ್ರೀಡಾ ಮತ್ತು ಭಕ್ತಿಪೂರ್ಣ ಕಾರ್ಯಕ್ರಮಗಳ ಸಂಗಮವಾಗಿರುವ ಈ ಉತ್ಸವವು ಮಕ್ಕಳು, ಯುವಕರು, ಮಹಿಳೆಯರು ಹಾಗೂ ಸಾರ್ವಜನಿಕರಿಗೆ ಉತ್ಸಾಹಭರಿತ ವೇದಿಕೆಯಾಗಲಿದೆ.
ಭಕ್ತಿಗೀತೆ, ದೇಶಭಕ್ತಿ ಗೀತೆ, ರಸಪ್ರಶ್ನೆ, ಲಿಂಬೆ ಚಮಚ ಓಟ, ಸಸ್ಯ ಗುರುತಿಸುವಿಕೆ, ಸಂಗೀತ ಕುರ್ಚಿ, ಕಬಡ್ಡಿ, ಹಗ್ಗಜಗ್ಗಾಟ, ಮಡಕೆ ಒಡೆಯುವುದು, ಮುದ್ದು ಕೃಷ್ಣ, ಛದ್ಮವೇಷ ಸ್ಪರ್ಧೆ, ಕಪ್ಪೆ ಜಿಗಿತ, ಬಾಟಲಿಗೆ ನೀರು ತುಂಬಿಸುವುದು, ನೀರಿನಲ್ಲಿ ಬಾಲ್ ಪಾಸ್, ಮೂರು ಕಾಲಿನ ಓಟ ಇಂತಹ ಮನರಂಜನಾ ಸ್ಪರ್ಧೆಗಳು ನಿರ್ದಿಷ್ಟ ಹಂತಗಳಲ್ಲಿ ನಡೆಯಲಿವೆ.
ಪ್ರತಿ ವಯೋಮಾನದ ಸ್ಪರ್ಧಿಗಳಿಗಾಗಿ ವಿಭಜಿತ ವಿಭಾಗಗಳಿದ್ದು, ಅಂಗನವಾಡಿ ಮಕ್ಕಳು, ಪ್ರಾಥಮಿಕ ಹಾಗೂ ಹೈಸ್ಕೂಲ್ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಪುರುಷರಿಗೆ ವಿವಿಧ ಸ್ಪರ್ಧೆಗಳ ಮೂಲಕ ತಮ್ಮ ಪ್ರತಿಭೆಯನ್ನು ತೋರಲು ಅವಕಾಶ ಸಿಗಲಿದೆ.
ಈ ಕಾರ್ಯಕ್ರಮಕ್ಕೆ ಆಗಮಿಸಿರುವ ಎಲ್ಲರಿಗೂ ಮಧ್ಯಾಹ್ನದ ಭೋಜನ ವ್ಯವಸ್ಥೆಯೂ ಮಾಡಲಾಗುತ್ತದೆ.
ಸಂಜೆ 5 ಗಂಟೆಗೆ ಧಾರ್ಮಿಕ ಸಭೆಯೂ ಜರುಗಲಿದ್ದು ,ಸಭೆಯ ಅಧ್ಯಕ್ಷತೆಯನ್ನು ಶ್ರೀ ಗೀತಾನಂದ ಶೆಟ್ಟಿ ಮಾಣಿಲಗುತ್ತು, ನಿರ್ದೇಶಕರು – ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ.) ವಹಿಸಲಿದ್ದಾರೆ.
ಮುಖ್ಯ ಅತಿಥಿಯಾಗಿ ಕನಿಯಾಲದ ಡಾ. ಶ್ರೀಶ ನಾರಾಯಣ ಸಿ.ಕೆ., ಸ್ವಾಸ್ಥ್ಯ ಹೋಮಿಯೋಪಥಿ ಕ್ಲಿನಿಕ್‌ನಿಂದ ಆಗಮಿಸಲಿದ್ದಾರೆ.
ಸಮಸ್ತ ಹಿಂದೂ ಬಾಂಧವರಲ್ಲೂ ಈ ಕಾರ್ಯಕ್ರಮಕ್ಕೆ ಆಗಮಿಸಿ ಸಕ್ರಿಯವಾಗಿ ಭಾಗವಹಿಸಿ ಉತ್ಸವವನ್ನು ಯಶಸ್ವಿಯಾಗಿಸಲು ಸಂಘದ ವತಿಯಿಂದ ಆಹ್ವಾನಿಸಲಾಗಿದೆ.