ಹಿಂದು ಜಾಗರಣ ವೇದಿಕೆ ವಾಮದಪದವು ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಪಂಜಿನ ಮೆರವಣಿಗೆ ಮತ್ತು ಸಭಾ ಕಾರ್ಯಕ್ರಮ

  • 31 Jul 2025 09:16:42 PM


ಬಂಟ್ವಾಳ: ಹಿಂದು ಜಾಗರಣ ವೇದಿಕೆ ಬಂಟ್ವಾಳ ತಾಲೂಕಿನ ವಾಮದಪದವು ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಆಗಸ್ಟ್ 10, ಆದಿತ್ಯವಾರದಂದು ವೈಭವದ ಪಂಜಿನ ಮೆರವಣಿಗೆ ಹಾಗೂ ಸಭಾ ಕಾರ್ಯಕ್ರಮ ಜರಗಲಿದೆ.

 

ಸಂಜೆ 6 ಗಂಟೆಗೆ ವಾಮದಪದವಿನ ಗಣೇಶ ಮಂಟದಿಂದ ಪ್ರಾರಂಭವಾಗುವ ಪಂಜಿನ ಮೆರವಣಿಗೆ ವಾಮದಪದವು ಸರ್ಕಲ್ ತನಕ ಸಾಗಲಿದೆ.

 

ಮೆರವಣಿಗೆಯ ಬಳಿಕ ವಾಮದಪದವು ಗಣೇಶ ಮಂದಿರದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ABVP ಮಂಗಳೂರು ವಿಭಾಗದ ಪ್ರಮುಖರಾದ ಕೇಶವ ಬಂಗೇರ ದಿಕ್ಸೂಚಿ ಭಾಷಣ ನೀಡಲಿದ್ದಾರೆ ಎಂದು ಹಿಂದು ಜಾಗರಣ ವೇದಿಕೆ ವಾಮದಪದವು ಘಟಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.