ಸುಳ್ಯ: ವಿಶ್ವ ಹಿಂದು ಪರಿಷತ್‌ನ ಸ್ಥಾಪನಾ ದಿನದ ಅಂಗವಾಗಿ ಮೊಸರುಕುಡಿಕೆ ಮತ್ತು ಶೋಭಾಯಾತ್ರೆ: ಉತ್ಸವ ಸಮಿತಿ ರಚನೆ

  • 14 Jul 2025 04:53:02 PM


ಸುಳ್ಯ: ವಿಶ್ವ ಹಿಂದೂ ಪರಿಷತ್‌ನ ಸ್ಥಾಪನಾ ದಿನಾಚರಣೆಯ ಅಂಗವಾಗಿ ಈ ಬಾರಿ ಮೊಸರು ಕುಡಿಕೆ ಮತ್ತು ಭವ್ಯ ಶೋಭಾಯಾತ್ರೆಯನ್ನು ಆಯೋಜಿಸಲಾಗಿದ್ದು, ಉತ್ಸವದ ಯಶಸ್ವಿಗೆ ಸಮರ್ಪಿತ ಸಮಿತಿಯೊಂದನ್ನು ರಚಿಸಲಾಗಿದೆ.

 

ಈ ಕಾರ್ಯಕ್ರಮದ ಗೌರವಧ್ಯಕ್ಷರಾಗಿ ತೀರ್ಥಕುಮಾರ್ ಕುಂಚಡ್ಕ, ಅಧ್ಯಕ್ಷರಾಗಿ ಬಾಲಚಂದ್ರ ಅಡ್ಕಾರ್ ಅವರನ್ನು ನೇಮಕ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಹರಿಪ್ರಸಾದ್ ಸುಲಾಯ ಮತ್ತು ಸೋಮಶೇಖರ್ ಪೈಕ ಅವರನ್ನು ನೇಮಿಸಲಾಗಿದೆ.

 

ಪ್ರಧಾನ ಕಾರ್ಯದರ್ಶಿಯಾಗಿ ಭಾನುಪ್ರಕಾಶ್ ಪೆರುಮುಂಡ, ಕಾರ್ಯದರ್ಶಿಯಾಗಿ ಪಾರ್ವತಿ ಕುಂಚಡ್ಕ, ಹಾಗೂ ಸಹ ಕಾರ್ಯದರ್ಶಿಯಾಗಿ ಮಿಥುನ್ ಚೊಕ್ಕಾಡಿ ಕಾರ್ಯ ನಿರ್ವಹಿಸಲಿದ್ದಾರೆ.

 

 

ಕೋಶಾಧಿಕಾರಿ ನವೀನ್ ಎಲಿಮಲೆ ಹಣಕಾಸಿನ ವ್ಯವಸ್ಥೆ ನೋಡಿಕೊಳ್ಳಲಿದ್ದಾರೆ.

 

ಕಾರ್ಯಕ್ರಮದ ಸುವ್ಯವಸ್ಥೆಗೆ ವ್ಯವಸ್ಥಾ ಪ್ರಮುಖರಾಗಿ ಉಪೇಂದ್ರ ನಾಯಕ್, ವರ್ಷಿತ್ ಚೊಕ್ಕಾಡಿ ಮತ್ತು ಪ್ರಕಾಶ್ ಮೇನಾಲ ನೇಮಕಗೊಂಡಿದ್ದಾರೆ.