ಕುದ್ದುಪದವು: ಹಿಂದು ಜಾಗರಣ ವೇದಿಕೆ ಕುದ್ದುಪದವು (ವಿಟ್ಲ ತಾಲೂಕು, ಪುಣಚ ವಲಯ, ಮಂಗಳೂರು ಗ್ರಾಮಾಂತರ ಜಿಲ್ಲೆ) ವತಿಯಿಂದ ಅಖಂಡ ಭಾರತ ಪಂಜಿನ ಸಂಕಲ್ಪ ದಿನದ ಅಂಗವಾಗಿ ಆಗಸ್ಟ್ 13, 2025 ರಂದು ಕುದ್ದುಪದವು ಜಂಕ್ಷನ್‌ನಲ್ಲಿ ಭವ್ಯ ಮೆರವಣಿಗೆ ಮತ್ತು ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಕುದ್ದುಪದವು ಜಂಕ್ಷನ್‌ನಿಂದ ಮೆರವಣಿಗೆ ಆರಂಭವಾಗಲಿದೆ.
ಬಳಿಕ ನಡೆಯಲಿರುವ ಸಭೆಯಲ್ಲಿ ಬ್ರಹ್ಮಶ್ರೀ ರವೀಶ್ ತಂತ್ರಿ ಕುಂಟಾರು ಅವರು ದಿಕ್ಕೂಚಿ ಭಾಷಣ ಮಾಡಲಿದ್ದು, ಹಲವು ಹಿಂದೂ ಧಾರ್ಮಿಕ ಮುಖಂಡರು ಸಹ ಭಾಗವಹಿಸಲಿದ್ದಾರೆ.
ಧರ್ಮೋ ರಕ್ಷತಿ ರಕ್ಷಿತಃ ಎಂಬ ಧ್ಯೇಯವಾಕ್ಯದಡಿ ನಡೆಯುವ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಹಿಂದು ಜಾಗರಣ ವೇದಿಕೆ ಕುದ್ದುಪದವು ಘಟಕ ಆಹ್ವಾನಿಸಿದೆ.