ಕಾಸರಗೋಡು: ಕಾಸರಗೋಡು ಬಾಲಭವನ ಆಂಗ್ಲ ಮಾದ್ಯಮ ಶಾಲೆಯ 32ನೇ ವಾರ್ಷಿಕೋತ್ಸವದ ಅಂಗವಾಗಿ, ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಅಪಾರ ಸೇವೆ ಸಲ್ಲಿಸಿರುವಂತಹ ಶಿಕ್ಷಕ-ರಕ್ಷಕ ಸಂಘದ ಮಾಜಿ ಅಧ್ಯಕ್ಷ ಹಾಗೂ ಪ್ರಸ್ತುತ ಟ್ರಸ್ಟ್‌ನ ಅಕಾಡೆಮಿಕ್ ಎಡ್ವೈಸರ್ ಆದ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಅವರನ್ನು ಗೌರವಿಸಲಾಯಿತು.
ಇತ್ತೀಚೆಗೆ ಚೆನ್ನೈನಲ್ಲಿ ಸಮಾಜಸೇವೆಗಾಗಿ ಗೌರವ ಡಾಕ್ಟರೇಟ್ ಪ್ರಶಸ್ತಿ ಪಡೆದಿರುವ ಅವರನ್ನು ಶಾಲೆಯ ಮುಖ್ಯೋಪಾಧ್ಯಾಯಿನಿಯಾದ ಲೀಲಾವತಿ ನಾಯರ್ ಅವರು ಶಾಲು ಹೊದಿಸಿ, ಫಲಕ ನೀಡಿ ಸನ್ಮಾನಿಸಿದರು.
ಈ ಸಮಾರಂಭದಲ್ಲಿ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಗುರುದತ್ತ್ ಪೈ ಹಾಗೂ ಉಪಾಧ್ಯಕ್ಷ ಅಸ್ಲಾಂ ಕೋಶಾಧಿಕಾರಿ ಪ್ರಕಾಶ್, ದೀಪ್ತಿ ಟೀಚರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.