ಪುಚ್ಚಗುತ್ತು , ವಿಟ್ಲ: ಪುಚ್ಚಗುತ್ತು ಶ್ರೀ ಬ್ರಹ್ಮಮುಗೇರ ದೈವಗಳು ಮತ್ತು ಶ್ರೀ ಕೊರಗತನಿಯ ದೈವ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ ಈ ವರ್ಷದ ನೇಮೋತ್ಸವ ಭಕ್ತರ ಸಂಭ್ರಮದ ಮಧ್ಯೆ ಅದ್ದೂರಿಯಾಗಿ ಜರಗಲಿದೆ. ನೇಮೋತ್ಸವವು 15 ಮತ್ತು 16 ಮಾರ್ಚ್ 2025 ರಂದು (ಶನಿವಾರ ಮತ್ತು ಆದಿತ್ಯವಾರ) ಮತ್ತು 23 ಮಾರ್ಚ್ 2025 (ಆದಿತ್ಯವಾರ) ಶ್ರೀ ಕೊರಗತನಿಯ ದೈವದ ಸಾರ್ವಜನಿಕ ವಾರ್ಷಿಕ ಅಗೇಲು ಸೇವೆ ಕಾರ್ಯಕ್ರಮ ನಡೆಯಲಿದೆ.
ಇದರ ಪ್ರಯುಕ್ತವಾಗಿ 15 ಮಾರ್ಚ್ ಶನಿವಾರ ರಾತ್ರಿ 7:00ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕುಡ್ಲ ಕುಸಾಲ್ ತಂಡದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರವಿ ರಾಮತುಂಬ ಅಭಿನಯದ "ತಿಲಿಕೆದ ಕಮ್ಮೆನ!" ಮನೋರಂಜನಾತ್ಮಕ ಕಾರ್ಯಕ್ರಮವು ನಡೆಯಲಿದೆ.
ಭಕ್ತಾದಿಗಳು ಈ ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವಡಾಲ್ಲಿ ಭಾಗವಹಿಸಿ ದೈವಾನುಗ್ರಹ ಪಡೆಯ ಬೇಕೆಂದು ಆಡಳಿತ ಮೊಕ್ತೇಸರರು, ಅಧ್ಯಕ್ಷರು ಮತ್ತು ಸರ್ವಸದಸ್ಯರು ಆತ್ಮೀಯವಾದ ಸ್ವಾಗತವನ್ನು ಕೋರಿದ್ದಾರೆ.