ಕಾಸರಗೋಡು: ಜ್ಯೋತಿಷ್ ಅಭಿಮಾನಿ ಸೇವಾ ಬಳಗ, ಕಾಸರಗೋಡು ಇದರ ವತಿಯಿಂದ ಆಯೋಜನೆಗೊಂಡ All India Level Invitation Kabaddi Tournament 2025 ಇದರ ಪೂರ್ವಭಾವಿ ಸಭೆಯು ಇಂದು ಬೆಳಿಗ್ಗೆ 10 ಗಂಟೆಗೆ ಕಾಸರಗೋಡಿನಲ್ಲಿ ನಡೆಯಿತು. ಈ ಸಭೆಗೆ ಶಂಕರ್ ಜೆ.ಪಿ.ನಗರ ಅವರು ಅಧ್ಯಕ್ಷತೆ ವಹಿಸಿದರು. ದಿನೇಶ್ ಬಂಬ್ರಾಣ ಅವರು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಜಯರಾಜ್ ಶೆಟ್ಟಿ ಕುಳೂರು, ರವೀಂದ್ರನ್ ಕುತ್ತಿಕೋಲ್, ಮನೋಜ್ ಕಡಪ್ಪುರ ಅವರ ಉಪಸ್ಥಿತಿಯಲ್ಲಿ ಸಮಿತಿಯ ರಚನೆ ಮಾಡಲಾಯಿತು.
ಈ ಸಭೆಯಲ್ಲಿ ಟೂರ್ನಮೆಂಟ್ ಆಯೋಜನೆಯ ಕುರಿತಾಗಿ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಜಯರಾಜ್ ಶೆಟ್ಟಿ ಕುಳೂರು ಅವರನ್ನು ಚೇರ್‌ಮ್ಯಾನ್ ಆಗಿ ಶಂಕರ್ ಜೆ.ಪಿ. ನಗರ ಅವರನ್ನು Convenor ಆಗಿ ಮತ್ತು ಭರತ್ ಕನಿಲ ಅವರನ್ನು ಕೋಶಾಧಿಕಾರಿಯಾಗಿ ನೇಮಕ ಮಾಡಲಾಯಿತು.
ಸಭೆಯಲ್ಲಿ ಏಪ್ರಿಲ್ 27, 2025 ರಂದು ಕಬಡ್ಡಿ ಟೂರ್ನಮೆಂಟ್ ಅನ್ನು ಆಯೋಜಿಸಲಾಗಿದೆ ಎಂದು ನಿರ್ಧರಿಸಲಾಯಿತು.