ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಪುಣ್ಯ ಉಪಸ್ಥಿತಿಯಲ್ಲಿ ಶ್ರೀದೇವಿ ಯುವಕ ಸಂಘ, ಸೆರ್ಕಳದ ಭರ್ಜರಿ ದಶಮಾನೋತ್ಸವ ಆಚರಣೆ! ಧಾರ್ಮಿಕ ಸೇವೆಗಳಿಗೆ ಅಮೂಲ್ಯ ಕೊಡುಗೆ ನೀಡಿದ ಹಿಂದೂ ಧಾರ್ಮಿಕ ಮುಖಂಡ ಅಕ್ಷಯ್ ರಾಜಪುತ್‌ ಅವರಿಗೆ ಅಭಿಮಾನ ಸನ್ಮಾನ!

  • 14 Mar 2025 03:50:55 PM

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಕೊಳ್ನಾಡು ಗ್ರಾಮದ ಸೆರ್ಕಳದಲ್ಲಿ ಶ್ರೀದೇವಿ ಯುವಕ ಸಂಘ (ರಿ) ಸಂಸ್ಥೆಯ ದಶಮಾನೋತ್ಸವದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಪುಣ್ಯ ಉಪಸ್ಥಿತಿಯಲ್ಲಿ ಹಿಂದೂ ಧಾರ್ಮಿಕ ಮುಖಂಡ ಅಕ್ಷಯ್ ರಾಜಪುತ್ (ಕಲ್ಲಡ್ಕ) ಅವರಿಗೆ ಅಭಿಮಾನಿ ಸನ್ಮಾನ ನೀಡಲಾಯಿತು. ಹಿಂದೂ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅಕ್ಷಯ್ ರಾಜಪುತ್ ಅವರು ಧರ್ಮ ಸಂರಕ್ಷಣೆ ಸಂಬಂಧಿತ ಹಲವಾರು ಸವಾಲುಗಳನ್ನು ಎದುರಿಸಿ ಮುನ್ನಡೆಯುತಿದ್ದು ಅವರ ಈ ಶ್ರದ್ಧಾ ಮತ್ತು ಸೇವಾ ಮನೋಭಾವಕ್ಕೆ ಈ ಗೌರವ ಪೂರ್ವ ಸನ್ಮಾನವನ್ನು ಸಮರ್ಪಿಸಲಾಯಿತು.

 

ಶ್ರೀದೇವಿ ಯುವಕ ಸಂಘವು ಹಲವು ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಹುಲಿವೇಷ ತಂಡ "ಶ್ರೀದೇವಿ ಟೈಗರ್ಸ್", ರಕ್ಷಣಾ ಬಂಧನ, ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ಯುವಕರಲ್ಲಿ ಜಾಗೃತಿ ಮೂಡಿಸುತ್ತದೆ. 

 

ಈ ಮಹತ್ವದ ಕಾರ್ಯಕ್ರಮದಲ್ಲಿ ಹಲವಾರು ಧಾರ್ಮಿಕ ಮುಖಂಡರು, ಸಂಘದ ಸದಸ್ಯರು ಮತ್ತು ಸ್ಥಳೀಯರು ಭಾಗವಹಿಸಿ, ಅಕ್ಷಯ್ ರಾಜಪುತ್ ಅವರ ಸೇವಾ ಕಾರ್ಯವನ್ನು ಪ್ರಶಂಸಿಸಿದರು. ಈ ಸಂದರ್ಭದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಗಳು ಭವಿಷ್ಯದಲ್ಲಿ ಇಂತಹ ಸಂಘಟನೆಗಳು ಇನ್ನಷ್ಟು ಶಕ್ತಿಶಾಲಿಯಾಗಿ ಕಾರ್ಯನಿರ್ವಹಿಸಲಿ ಎಂದು ಆಶೀರ್ವಚಿಸಿದರು.