ನಾವೂರು: ಎಂ.ಆರ್.ಪಿ.ಎಲ್ ಸಂಸ್ಥೆಯ ಸಿ . ಎಸ್.ಆರ್ ನಿಧಿಯಿಂದ ನೀಡಿದ ಕೊಡುಗೆಯಾಗಿ, ನಾವೂರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಟ್ಟಡದ ಶಿಲನ್ಯಾಸವು ನಾವೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಇಂದಿರಾ ಕಣಪಾದೆ, ಬಂಟ್ಟಾಳ ಕ್ಷೇತ್ರದ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನಿರ್ವಹಣೆಯಲ್ಲಿ ನಡೆಯಿತು. ಈ ಶಿಲನ್ಯಾಸಕ್ಕೆ ಶಾಸಕರು ವಿಶೇಷ ಮುತುವರ್ಜಿ ವಹಿಸಿ, ಶಾಲೆಗೆ ಬೇಕಾದ ಮೂಲಸೌಲಭ್ಯಗಳನ್ನು ಒದಗಿಸಲು ಬೇಕಾದ ವ್ಯವಸ್ಥೆಗಳನ್ನು ಮಾಡಿ ಕೊಟ್ಟರು.
ಈ ಸಂದರ್ಭದಲ್ಲಿ ಶಾಲಾಭಿವೃದ್ದಿ ಸಮಿತಿಯ ಸದಸ್ಯರಾದ ವಿಜಯ ನಾವೂರು, ಜನಾರ್ದನ ಕೊಂಬೆಟ್ಟು, ಶ್ರೀಮತಿ ತ್ರಿವೇಣಿ, ಮತ್ತು ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಶ್ರೀ ಸತೀಶ್ ಮಲೆಕೋಡಿ ಪದವು, ಮಾಯಾ ಕಂಟ್ರಕ್ಷನ್‌ನ ಮಾಲಕರಾದ ಶ್ರೀ ಕಾರ್ತಿಕ್ ಶೆಟ್ಟಿ, ನಾವೂರು ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಶ್ರೀ ಸತೀಶ್ ಮಲೆಕೋಡಿ, ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಪ್ರೆಸಿಲ್ಲಾ ಡಿಸೋಜ, ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಅರ್ಚನಾ ಸಿ.ಪಿ. ಸಹಿತ ಇತರ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಯೋಜನೆಗೆ ಸತತವಾಗಿ ಪ್ರಯತ್ನಪಟ್ಟ ಮಾತೃಭೂಮಿ ಸೇವಾ ಸಂಘ ನಾವೂರು ಇದರ ಅಧ್ಯಕ್ಷರಾದ ಸಂತೋಷ್ ಕೋಟ್ಯಾನ್ ಎಕ್ಕುಡೇಲು, ನಿರ್ದೇಶಕರಾದ ಸುರೇಶ್. ಎಸ್.ನಾವೂರು, ಸಂಘಟಕರಾದ ಹರೀಶ್ ಕೆಲ್ಲೆರ್ ಮಾರ್, ಅಕ್ಷಯ್ ಮೈಂದಾಳ, ಹಾಗೂ ಸಾಮಾಜಿಕ ಮುಂದಾಳು ಶ್ರೀ ಜೋಸೆಫ್ .ವಿ.ಡಿ.ಪಾಂಗೋಡಿ ಅವರು ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.