ಬೈಂದೂರು: ತಾಲೂಕು ಕಚೇರಿಯಲ್ಲಿ, ಬೈಂದೂರು ಹೋಬಳಿಗೆ ಸಂಬಂಧಿಸಿದಂತೆ 94 ಸಿ ಅಡಿಯಲ್ಲಿ ಅರ್ಜಿ ಹಾಕಿರುವವರಿಗೆ ಶೀಘ್ರವಾಗಿ ಹಕ್ಕುಪತ್ರ ನೀಡುವ ಉದ್ದೇಶದಿಂದ ದಿನಾಂಕ: 02-05-2025ರಂದು ಸಭೆ ನಡೆಯಿತು.
ಈ ಸಂದರ್ಭದಲ್ಲಿ, ಎಲ್ಲಾ ಗ್ರಾಮ ಆಡಳಿತಾಧಿಕಾರಿಗಳು ತಮ್ಮ ಹಂತದಲ್ಲಿರುವ ಅರ್ಜಿಗಳಿಗೆ ತಕ್ಷಣವೇ ಸಕಾರಾತ್ಮಕ ವರದಿ ಸಲ್ಲಿಸಬೇಕು ಎಂಬುದಾಗಿ ಸೂಚಿಸಲಾಯಿತು.
ತಾಲೂಕು ಕಚೇರಿಯಲ್ಲಿ ಅನೇಕ ಅರ್ಹ ಅರ್ಜಿಗಳು ಇನ್ನೂ ವಿಲೇವಾರಿ ಆಗದೆ ಬಾಕಿ ಉಳಿದಿದ್ದು, ಈ ತಿಂಗಳ ಒಳಗೆ ಅವನ್ನು ಪೂರ್ಣಗೊಳಿಸಬೇಕು.
ಬೈಂದೂರು ಹೋಬಳಿಯಲ್ಲಿ ಯಾವುದೇ ಅರ್ಹ ಅರ್ಜಿ ಬಾಕಿ ಉಳಿಯದೇ ಶೂನ್ಯ ಸ್ಥಿತಿಗೆ ತಲುಪಲು ಎಲ್ಲ ಹಂತದ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ಅಧಿಕಾರಿಗಳೊಂದಿಗೆ ಪ್ರತಿಯೊಂದು ಪಂಚಾಯತ್‌ಗೆ ಭೇಟಿ ನೀಡಿ, ಸ್ಥಳೀಯ ಜನರಿಂದ ನೇರವಾಗಿ ಅಹವಾಲು ಪಡೆದು, ಅರ್ಹ ಫಲಾನುಭವಿಗಳು ಹಕ್ಕುಪತ್ರದಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳಲಾಗುವುದು. ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಲಾಗುತ್ತಿದೆ ಎಂದೂ ಅವರು ವಿವರಿಸಿ ಹೇಳಿದರು.
ಈ ಸಭೆಯಲ್ಲಿ ಬೈಂದೂರು ಉಪ ತಹಶೀಲ್ದಾರರಾದ ಶ್ರೀಮತಿ ಗಿರಿಜಾ, ಶ್ರೀಮತಿ ಲತಾ, ಕಂದಾಯ ನಿರೀಕ್ಷಕರಾದ ರವಿಶಂಕರ್ ಹಾಗೂ ತಾಲೂಕಿನ ಎಲ್ಲಾ ಗ್ರಾಮ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.