ಪುತ್ತಿಲ ಪರಿವಾರ ಟ್ರಸ್ಟ್ ಉಚಿತ ಆರೋಗ್ಯ ಶಿಬಿರ: 200ಕ್ಕೂ ಹೆಚ್ಚು ಫಲಾನುಭವಿಗಳು

  • 12 Nov 2024 01:19:08 PM

ಕಾವು ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ, ಕಾವು..ಮಾಡ್ನೂರು ಗ್ರಾಮ ಸಮಿತಿಯ ಆಶ್ರಯದಲ್ಲಿ ನ.10ರಂದು ನನ್ಯ ಜನಮಂಗಲ ಸಭಾಭವನದಲ್ಲಿ ಉಚಿತ ವೈದ್ಯಕೀಯ ಹಾಗೂ ಕಣ್ಣಿನ ಮತ್ತು ದಂತ ತಪಾಸಣೆ ಶಿಬಿರವನ್ನುಬೆಳಿಗೆ ಗಂಟೆ 9ರಿಂದ 1ರ ವರೆಗೆ ಆಯೋಜಿಸಲಾಯಿತು. ಈ ಶಿಬಿರದಲ್ಲಿ 230ಕ್ಕೂ ಹೆಚ್ಚು ಫಲಾನುಭವಿಗಳು ಪಾಲ್ಗೊಂಡು ಉಚಿತ ಚಿಕಿತ್ಸೆ ಪಡೆದುಕೊಂಡರು. ಶಿಬಿರದಲ್ಲಿ ಇ.ಸಿ.ಜಿ , ಬಿಪಿ, ಸಕ್ಕರೆ ಕಾಯಿಲೆ, ಕಣ್ಣು ಪರೀಕ್ಷೆ, ಕನ್ನಡಕ ವಿತರಣೆ, ದಂತ ಪರೀಕ್ಷೆ ಹಾಗೂ ಶಸ್ತ್ರಚಿಕಿತ್ಸೆ (ಫಿಲ್ಲಿಂಗ್), ಎಲುಬು, ಚರ್ಮ, ಕಿವಿ, ಮೂಗು, ಗಂಟಲು(ಇ.ಎನ್.ಟಿ)ತಪಾಸಣೆ ಮತ್ತು ಚಿಕಿತ್ಸೆಯನ್ನು ನೀಡಲಾಯಿತು.

 

ಈ ಶಿಬಿರವು ಪುತ್ತೂರು  ಕಾವು ಮಾಡ್ನೂರು ಗ್ರಾಮ ಸಮಿತಿಯ ನೇತೃತ್ವದಲ್ಲಿ  ಶ್ರಿ ಸತ್ಯಸಾಯಿ ಸೇವಾ ಸಮಿತಿ, ಈಶ್ವರಾಂಬಾ ಟ್ರಸ್ಟ್ ರಿ. ಗಾಂಧಿನಗರ ಮಂಗಳೂರು ಇವರ ಸಹಕಾರದೊಂದಿಗೆ ನಿಟ್ಟೆ ಜಸ್ಟಿಸ್ ಕೆ.ಎಸ್‌.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಮತ್ತು ಸಮುದಾಯ ದಂತ ವಿಭಾಗ ಯೇನಪೋಯ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇಲ್ಲಿನ ವೈದ್ಯ ತಂಡದವರಿಂದ ಉಚಿತ ವೈದ್ಯಕೀಯ ಹಾಗೂ ಕಣ್ಣಿನ ಮತ್ತು ದಂತ ತಪಾಸಣೆ ಚಿಕಿತ್ಸೆ ನೀಡಲಾಯಿತು.

 

ಶಿಬಿರವನ್ನು ಪುತ್ತಿಲ ಪರಿವಾರ ಟ್ರಸ್ಟ್‌ನ ಮುಖ್ಯಸ್ಥರಾದ ಅರುಣ್ ಕುಮಾರ್ ಪುತ್ತಿಲ ಉದ್ಘಾಟಿಸಿದರು. ಮಾತನಾಡಿದ ಅವರು, *ಪುತ್ತಿಲ ಪರಿವಾರ ಟ್ರಸ್ಟ್ ಸಾಮಾಜಿಕ ಜವಾಬ್ದಾರಿ ನೆಲೆಗೊಂಡು ಧಾರ್ಮಿಕ, ಶೈಕ್ಷಣಿಕ, ವೈದ್ಯಕೀಯ ಮತ್ತು ಸಮಾಜ ಸೇವೆಯ ವಿವಿಧ ಕ್ಷೇತ್ರಗಳಲ್ಲಿ ಚಟುವಟಿಕೆಗಳನ್ನು ನಡೆಸುತ್ತಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೇವೆ ನೀಡಲು ಈ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗಿದೆ* ಎಂದು ಹೇಳಿದರು. ಈ ಮೂಲಕ ನಾಲ್ಕೈದು ಆಯಾಮಗಳಲ್ಲಿ ಕಾರ್ಯನಿರ್ವಹಿಸಿ ಕಳೆದ 1 ವರ್ಷದಲ್ಲಿ 240ಕ್ಕೂ ಅಧಿಕ ಸೇವಾ ಚಟುವಟಿಕೆಯ ಮೂಲಕ ಧರ್ಮ ಜಾಗೃತಿಯನ್ನು ಮೂಡಿಸಿದ್ದೇವೆ ಎಂದು ಆರೋಗ್ಯ ಸರಿ ಇದ್ದರೆ ಮಾತ್ರ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಅದಲ್ಲದೆ ನಿರುದ್ಯೋಗದ ನಿವಾರಣೆಗಾಗಿ ಉದ್ಯೋಗ ಸೇವಾ ಯೋಜನೆ 1024 ಸದಸ್ಯರಿರುವ 11 ವಾಟ್ಸಾಪ್ ಮೂಲಕ ಉದ್ಯೋಗ ಮಾಹಿತಿಯನ್ನು ರಾಜ್ಯದಾದ್ಯಂತ ವಿತರಿಸಿ ಈಗಾಗಲೇ 630 ಜನರಿಗೆ ಉದ್ಯೋಗ ಕಲ್ಪಿಸುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.

 

ಪುತ್ತಿಲ ಪರಿವಾರ ಟ್ರಸ್ಟ್ ಅಧ್ಯಕ್ಷ ಮಹೇಂದ್ರ ವರ್ಮ ವಳಾಲು ಅವರು ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಕಾವು ಸರಯೂ ಕ್ಲಿನಿಕ್‌ನ ಡಾ. ನವೀನ ಶಂಕರ ಮಳಿ, ಮಾತೃಶ್ರೀ ಅರ್ಥ್ ಮೂವರ್ಸ್ ಮಾಲಕ ಮೋಹನ್ ದಾಸ್ ರೈ, ಯುವ ವಕೀಲ ಚಂದ್ರಹಾಸ ಈಶ್ವರಮಂಗಲ, ಪುತ್ತಿಲ ಪರಿವಾರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರೈ ತಿಂಗಳಾಡಿ, ಕಾವು ಗೋಪೂಜಾ ಸಮಿತಿ ಅಧ್ಯಕ್ಷ ನಹುಷ ಭಟ್, ಹಿರಿಯ ಕರಸೇವಕ ನಾರಾಯಣ ಆಚಾರ್ಯ ಮಳಿ , ಕಾವು ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ರವಿಚಂದ್ರ ಮಾಣಿಯಡ್ಕ, ಪುತ್ತಿಲ ಪರಿವಾರ ಕಾವು ಘಟಕದ ಅಧ್ಯಕ್ಷ ಹರೀಶ್ ಕುಂಜತ್ತಾಯ,  ಸತ್ಯಸೇವಾ ಸಮಿತಿಯ ರಾಜ್ಯ ಸಮಿತಿ ಸದಸ್ಯ ನಿರಂಜನ ಹೆಬ್ಬಾರ್, ತಾಲೂಕು ಸಮಿತಿ ಅಧ್ಯಕ್ಷ ಪ್ರಸನ್ನ ಭಟ್, ವೈದ್ಯರುಗಳಾದ ಡಾ. ಅನಿಸ್, ಡಾ. ತಿಲಕ್ ಉಳ್ಳಾಲ, ಡಾ.ಪ್ರಮೋದ ಪ್ರಭಾಕರ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಅದ್ವಿತ್ ರಾವ್ ನಿಧಿಮುಂಡ ಪ್ರಾರ್ಥಿಸಿದರು ಅಧ್ಯಕ್ಷ ಸಮಿತಿ ಪುತ್ತಿಲ ಪರಿವಾರ ಟ್ರಸ್ಟ್ ಸದಸ್ಯ ಸುನಿಲ್ ಬೋರ್ಕರ್ ಸ್ವಾಗತಿಸಿ, ಚಿದಾನಂದ ಆಚಾರ್ಯ ವಂದಿಸಿದರು. ಚಂದ್ರಕಿರಣ್ ರವರು ಕಾರ್ಯಕ್ರಮವನ್ನು ನಿರ್ವಹಿಸಿದರು.ಶಿಬಿರದಲ್ಲಿದದ್ದ  ಪುತ್ತಿಲ ಪರಿವಾರ  ಕಾವು ಘಟಕದ ಸದಸ್ಯರುಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿ ಶಿಬಿರವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಟ್ಟರು.  ಈ ಶಿಬಿರದಲ್ಲಿ 230ಕ್ಕೂ ಹೆಚ್ಚು ಜನರು ಪಾಲ್ಗೊಂಡು ಉಚಿತ ಆರೋಗ್ಯ ಸೇವೆಯನ್ನು ಪಡೆದುಕೊಂಡರು.